Thursday, January 20, 2011

ಪೇಪರ್ ಟ್ಯೂಬ್ ಕಬ್ಬು

ಸಂಕ್ರಾಂತಿ ಹಬ್ಬಕ್ಕೆಂದು ಮಾಡಿದ ಮತ್ತೊಂದು ಕ್ರಾಫ್ಟ್ ಇದು. ಮೊದಲಿಗೆ ಖಾಲಿಯಾದ ಗಿಫ್ಟ್ ವ್ರಾಪ್ ಪೇಪರ್ ನ ಒಳಗಿನ ಪೇಪರ್ ಟ್ಯೂಬ್ ಗೆ ಬಣ್ಣ ಹಚ್ಚಲು ಪುಟ್ಟಿಗೆ ಕೊಟ್ಟೆ. ಅಡುಗೆಮನೆಯ ಪೇಪರ್ ಟವೆಲ್ ಅಥವಾ ಅಲುಮಿನಿಯಂ ಫಾಯಿಲ್ ಒಳಗಿನ ಟ್ಯೂಬ್ ಆದರೂ ಆಗುತ್ತೆ. ಕೆಂಪು ಬಣ್ಣಕ್ಕೆ ಸ್ವಲ್ಪೇ ಸ್ವಲ್ಪ ಕಪ್ಪು ಬೆರಸಿದ್ದೆ. ಅದು ಒಣಗಿದ ನಂತರ ಅದರ ಮೇಲೆ ಅಲ್ಲಲ್ಲಿ ಕಪ್ಪು ಮತ್ತು ಬಿಳಿಯ ಬಣ್ಣದ ಗೆರೆಗಳನ್ನು ಬರೆದೆ. ನಂತರ ಒಂದಷ್ಟು ಲಿಲ್ಲಿ ಹೂವಿನ ಎಲೆಗಳನ್ನು ತಂದು ಒಂದು ತುದಿಗೆ ಅಂಟಿಸಿದೆ!
 

1 comments:

ವಾಹ್ !
ಸಂಕ್ರಾಂತಿ ಕಬ್ಬು ತುಂಬಾ ಚೆನ್ನಾಗಿದೆ ಪುಟ್ಟಿ.
ಹಬ್ಬದ ನಂತರ ಶುಗರ್ ಕೇನ್ ಜ್ಯೂಸ್ ಮಾಡಿ ಆಯ್ತಾ :)

Post a Comment