Monday, April 04, 2011

ಯುಗಾದಿ ಹಬ್ಬ!

ಈ ವರ್ಷ ಹಬ್ಬಕ್ಕೆ ನಮ್ಮ ಮನೆಯ ಬಾಗಿಲುಗಳಿಗೆ ಮಾವಿನ ಬದಲು ಮಾಗ್ನೋಲಿಯಾ ಎಲೆಗಳ ತೋರಣ.
 ಯುಗಾದಿ ಹಬ್ಬಕ್ಕೆಂದು ಸ್ನೇಹಿತರೊಬ್ಬರು ತಮ್ಮ ಊರಿನಿಂದ ಬೇವಿನ ಎಲೆಗಳನ್ನು ಪೋಸ್ಟ್ ನಲ್ಲಿ ನಮಗಾಗಿ ಕಳುಹಿಸುತ್ತಿದ್ದರು. ಆದ್ರೆ ಈ ಸರ್ತಿ ಅದೂ ಇಲ್ಲವಾಯ್ತು, ಅವರ ಮನೆಯ ಹತ್ತಿರ ಮರವನ್ನು ಕಡಿದು ಹಾಕಿದರಂತೆ:( ಸರಿ, ಬೇವಿನ ಬದಲಿಗೆ ಹಾಗಲಕಾಯಿ ತುರಿಯನ್ನು ಬೆಲ್ಲದ ಜೊತೆ ಬೆರೆಸಿ "ಶತಾಯುರ್ ವಜ್ರ ದೇಹಾಯ, ಸರ್ವ ಸಂಪತ್ಕರಾಯಚ, ಸರ್ವಾರಿಷ್ಟ ವಿನಾಶಾಯ, ನಿಂಬಕ ದಳ ಭಕ್ಷಣಂ " ಅಂತ ಹೇಳಿಕೊಂಡು ತಿಂದೆವು. ಈ ಬೇವು ಬೆಲ್ಲ ತಿನ್ನುವುದರಿಂದ "ನೂರು ವರ್ಷ ಆಯಸ್ಸು, ವಜ್ರದಂತ ದೇಹ , ಸಂಪತ್ತು, ಎಲ್ಲ ಕೆಡಕುಗಳ ವಿನಾಶ" ಇವೆಲ್ಲ ಸಿಗುತ್ತೆ ಎಂದರ್ಥ.

ನಮ್ಮ ಹಬ್ಬದೂಟ.. ಇಷ್ಟೆಲ್ಲಾ ಇದ್ದರೂ ಹೋಳಿಗೆ ಇಲ್ಲವಲ್ಲಾ ಅನಿಸಿತು, ಬಾಳೆ ಎಲೆ ಇದ್ದಿದ್ದರೆ ಆಹಾ ....
 ಬೆಳಗ್ಗೆ ಹೊಸ್ತಿಲ ಬಳಿ ರಂಗೋಲಿ ಹಾಕುವಾಗ ಪುಟ್ಟಿ ತಾನೂ ಹಾಕುವುದಾಗಿ ಪುಡಿಯನ್ನು ಚೆಲ್ಲಾಡಿದ್ದಳು. ಸರಿ ಅದಕ್ಕೆ ಅಂತ ಸಂಜೆ ಅವಳಿಗೆ ಒಂದೆರೆಡು ರಂಗೋಲಿ ಬರೆದು ಬಣ್ಣ ತುಂಬಲು ಕೊಟ್ಟೆ.
 ಆದ್ರೆ ಅವಳು ತಾನೇ ರಂಗೋಲಿ ಬರೀಬೇಕು ಅಂತ ಇಷ್ಟಪಟ್ಟಳು. ಆಗಲಿ ಅಂತ ಚುಕ್ಕಿಗಳನ್ನು ಇಟ್ಟುಕೊಟ್ಟೆ, ನಾನು ಮಾಡಿದ್ದ ರಂಗೋಲಿಯನ್ನು ನೋಡಿಕೊಳ್ಳುತ್ತಾ ತಾನೂ ಮಾಡಿದಳು. ಭೇಷ್ ಪುಟ್ಟಿ ಅನಿಸಿತು:)

 

2 comments:

putti bidisiruva rangoli todalinante muddaagide.nimma kutumbakke ugaadi habbada shubhaashayagalu.

Post a Comment