Tuesday, December 30, 2008

ನಾರೀಸಖಿ ಮೆಚ್ಚಿನ ಮಗು !!

ಎಲ್ಲಾ ಮಕ್ಕಳೂ ನೋಡಲು ಮುದ್ದಾಗಿಯೇ ಇರುತ್ತವೆ. "ಹೆತ್ತವಳಿಗೆ ಹೆಗ್ಗಣ ಮುದ್ದು" ಅನ್ನೋ ಮಾತಿನಂತೆ ಪುಟ್ಟಿ ಬೇರೆ ಮಕ್ಕಳಿಗಿಂತ ಹೆಚ್ಚು ಮುದ್ದಾಗಿ ಅವರಮ್ಮನ ಕಣ್ಣಿಗೆ ಕಾಣಿಸ್ತಾಳೆ. ಆದ್ದರಿಂದಲೇ ನಾರೀಸಖಿ ತಂಡದವರು ತಿಂಗಳ ಮುದ್ದುಮಗು ಸ್ಪರ್ಧೆಗೆ ನಿಮ್ಮ ಮಗುವಿನ ಫೋಟೋ ಕಳುಹಿಸಿ ಎಂದಾಗ ತಟ್ಟನೆ ಪುಟ್ಟಿಯ ಫೋಟೋ ಕಳುಹಿಸಿದ್ದು.ಅಂತೂ ಪುಟ್ಟಿ ಡಿಸೆಂಬರ್ ತಿಂಗಳ ಸ್ಪರ್ಧೆಯಲ್ಲಿ ಗೆದ್ದೇ ಬಿಟ್ಟಳು. ಅವಳಿಗೆ ಓಟ್ ಮಾಡಿದ ಎಲ್ಲಾ ಆಂಟಿ ಅಂಕಲ್ ಗಳಿಗೆ ಅವಳ ಥ್ಯಾಂಕ್ಯೂ...

ಬರ್ತ್ ಡೇ ಪಾರ್ಟಿ!!

ಪುಟ್ಟಿಗೆ ಇವತ್ತು ಖುಶಿಯೋ ಖುಶಿ. ಅವಳ ಹುಟ್ಟುಹಬ್ಬಕ್ಕೆ ಇಂಗ್ಲ್ಯಾಂಡಿನಿಂದ ಅವಳ ದೊಡ್ಡ ಸೋದರ ಮಾವ, ಅತ್ತೆ ಮತ್ತವರ ಮುದ್ದಿನ ಮಗಳು ಖುಶಿ, ಆಸ್ಟ್ರೇಲಿಯಾದಿಂದ ಚಿಕ್ಕ ಸೋದರಮಾವ, ಹೈದರಾಬಾದಿನಿಂದ ಅತ್ತೆ ಕುಟುಂಬ ಮತ್ತೆ ಇನ್ನು ಅನೇಕ ಸ್ನೇಹಿತರೂ ಹಿತೈಷಿಗಳೂ ಬಂದಿದ್ದರು. ಪಾರ್ಟಿಯಲ್ಲಿ ಅವಳ ಜೊತೆ ಆಡಲು ಮಿಕ್ಕಿ ಮೌಸ್ ಮತ್ತು ಡೋನಾಲ್ಡ್ ಅಂಕಲ್ ಕೂಡ ಬಂದಿದ್ರು. ಅಜ್ಜಿತಾತನ ಬಳಗ ದೊಡ್ಡದು, ಬಂದಿದ್ದ ೪೦೦ ಜನಗಳ ಜೊತೆ ಮಾತಾಡಿ ಫೋಟೋ ತೆಗೆಸ್ಕೊಂಡು ಸುಸ್ತಾದ್ಲು...

ಸತ್ಯನಾರಾಯಣ ಪೂಜೆ!!

ಸಾಹಿತ್ಯ ಮತ್ತವಳ ಸೋದರಮಾವನ ಮಗಳು ಖುಶಿಗೆ ಸಾಂಪ್ರದಾಯಿಕವಾಗಿ ನಾಮಕರಣ ಮಾಡೋಕೆ ಅಂತ ಅಜ್ಜಿತಾತ ಮನೇಲಿ ಎಲ್ಲಾ ಏರ್ಪಾಡು ಮಾಡಿದ್ದರು. ಆವತ್ತು ಪುಟ್ಟಿಯ ಜನ್ಮದಿನವೂ ಆದ್ದರಿಂದ ಸತ್ಯನಾರಾಯಣ ಪೂಜೆಯನ್ನೊ ಮಾಡಿಸಿದ್ರು. ಸಂಜೆ ಪಾರ್ಟಿ ಇರೋದ್ರಿಂದ ಪೂಜೆಗೆ ಕೇವಲ ಹತ್ತಿರದ ನೆಂಟರು ಅಂದ್ರೆ ೫೦ ಜನ ಮಾತ್ರ ಬಂದಿದ್ರು! ಪುಟ್ಟಿಯ ಅಮ್ಮನಿಗೆ ನಾಮಕರಣ, ಮದುವೆ ಮಾಡಿಸಿದ್ದ ಶ್ರೀ.ಸುಬ್ಬಾನಂಜುಂಡಶಾಸ್ತ್ರಿಗಳೆ ಇವತ್ತು ಪುಟ್ಟಿಗೆ ನಾಮಕರಣ ಮಾಡಿಸಲು ಬಂದಿದ್ದರು.  ಪೂಜೆ ಅಪ್ಪ...

ವರುಷ ತುಂಬಿತು ಇಂದಿಗೆ !!!

ಇಂದು ಡಬ್ಬಲ್ ಹುಟ್ಟುಹಬ್ಬ .. ಪುಟ್ಟಿಗೆ ಮತ್ತವಳ ಬ್ಲಾಗಿಗೆ ಇವತ್ತಿಗೆ ಒಂದು ವರುಷ ತುಂಬಿತು. ಅವಳು ಇಂಡಿಯಾದಲ್ಲಿ ಅಜ್ಜಿ-ಅಜ್ಜ ಮತ್ತೆಲ್ಲರ ಜೊತೆ ಖುಶಿಯಾಗಿದ್ದಾಳೆ. ಎಲ್ಲರ ಕಣ್ಮಣಿ ಈಗವಳು. ನೂರ್ಕಾಲ ನಗುನಗುತಾ ಬಾಳೂ ಅಂತ ಅಜ್ಜ ಅಜ್ಜಿ ಪ್ರೀತಿಯಿಂದ ಹಾರೈಸಿದ್ದಾರೆ. ಅಪ್ಪ-ಅಮ್ಮನ ಹಾರೈಕೆನೂ ಅದೇ!! ಜನುಮದಿನವಿದು ನಿನದು ಬರಲಿ ನೂರ್ಬಾರಿ ನಿನ್ನೆಲ್ಲ ಕಾರ್ಯದಲಿ ಸಿಗಲಿ ಜಯಭೇರಿ ಅವಳು ಹುಟ್ಟಿದ ದಿನದಿಂದ ಇಲ್ಲಿಯವರೆಗೂ ತೆಗೆದ ಫೋಟೋಗಳ ಒಂದು ವಿಡಿಯೊ.. ಮನೆಯ...

Monday, December 29, 2008

ಪುಟ್ಟಿ ಬರ್ತ್ ಡೇ ಗೆ ಬನ್ನಿ!!

ಎಲ್ಲರೊದನೆ ಕೂಡಿ ಆಡಿ ಹುಟ್ಟು ಹಬ್ಬ ಮಾಡ್ಕೊಬೇಕೂಂತ ಪುಟ್ಟಿಗೆ ಆಸೆ. ಅದಕ್ಕೆ ನೋಡಿ ಅವಳ ತಾತನಿಗೆ ಹೇಳಿ ಹೀಗೆ ಕಾರ್ಡ್ ಮಾಡಿಸಿ ನಿಮ್ಮನೆಲ್ಲಾ ಕರ್ದಿದ್ದಾಳೆ, ಖಂಡಿತಾ ಬನ್ನಿ.. ಬರ್ತೀರಲ್ಲ...

Sunday, December 28, 2008

ಮಲಗಲು ಕಲಿತ ಪುಟ್ಟಿ !!

ಪುಟ್ಟಿ ಹುಟ್ಟಿದಾಗಿನಿಂದ ಮಲಗೋದು ಬಹಳ ಕಮ್ಮಿ. ಮೈಗೆಲ್ಲಾ ಎಣ್ಣೆ ಹಚ್ಚಿ ಸ್ನಾನ ಮಾಡಿಸಿ ಮಲಗಿಸಿದ್ರೆ ಕೇವಲ ಅರ್ಧ ಘಂಟೆಲಿ ಎದ್ದು ಆಟವಾಡ್ತಿದ್ಲು. ಹಗಲು ಹೇಗೋ ಅವಳೊಂದಿಗೆ ಆಟವಾಡ ಬಹುದಿತ್ತು, ಆದ್ರೆ ರಾತ್ರಿಯೆಲ್ಲ ಹೀಗೆ ಆದ್ರಿಂದ ಎಲ್ಲರಿಗೂ ಸಾಕು ಸಾಕಾಗ್ತಿತ್ತು. "ಮೊದಲ ೩ ತಿಂಗಳು ಹೀಗೆ, ಆಮೇಲೆ ಮಕ್ಕಳು ಸರಿ ಹೋಗ್ತಾರೆ" ಅಂತ ಪುಟ್ಟಿಯ ಅಜ್ಜಿ ಸಮಾಧಾನ ಮಾಡ್ತಾಯಿದ್ದ್ರು. ೩ ತಿಂಗಳು ತುಂಬಿದ ಮೇಲೂ ಪುಟ್ಟಿಯ ಆಟ ಮುಂದುವರೆಯಿತು. ಆಗ ಆರು ತಿಂಗಳಿಗೆ ಸರಿ ಹೋಗ್ತಾಳೆ ಅಂದ್ರು."ನಿಮ್ಮ ಪಕ್ಕ ಮಲಗಿಸಿಕೊಳ್ಳಬೇಡಿ. ಅವಳದ್ದೇ ಮಂಚದಲ್ಲಿ ಬೇರೆ ರೂಮಿನಲ್ಲಿ ಮಲಗಿಸಿ" ಅನ್ನೋ ಅವಳ ಡಾಕ್ಟರ್ ಹೇಳೊ ಹಾಗೆ ಮಾಡಲು ಮನಸ್ಸು ಒಪ್ಪಲಿಲ್ಲ. "ಮನೆದೇವರ ಹೆಸರು ಇಡದೆ, ಇನ್ನೇನೋ ಇಟ್ಟ್ರಿ ಅದಕ್ಕೆ...

Saturday, December 20, 2008

ಪುಟ್ಟ ಕರು

ಪುಟ್ಟಿಗೆ ಈಗ ಬೀದಿಯಲ್ಲಿ ಬರುವ ಹಸು/ಎಮ್ಮೆಗಳನ್ನು ನೋಡಿದ್ರೆ ಬಹಳ ಸಂತೋಷ "ಬಾ,ಬಾ" ಅಂತ ಕೈ ಸನ್ನೆ ಮಾಡಿ ಕೂಗ್ತಾಳೆ. ಅಜ್ಜಿ ಕೊಡುವ ಬಾಳೆಹಣ್ಣು ತಿನ್ನೋ ಹಸುನ ನೋಡೋದೇ ಅವಳಿಗೆ ಬಲು ಖುಶಿ. ಊಟ ಮಾಡಲು ಹಠಮಾಡಿದಾಗ ಮನೆ ಹೊರಗೆ ಬಂದು ಅಂಬಾ ನೋಡುತ್ತಾ ನಿಂತ್ರೆ ನಿಮಿಷದಲ್ಲಿ ಊಟ ಖಾಲಿ. ನಾನು ನೋಡಿದ ಪುಟ್ಟ ಕರು ಹಸುವಿನ ಮರಿಯಿದು ಕರು ನಾಲ್ಕು ಕಾಲುಗಳ್ಳುಳ್ಳ ಕರುಚೆಂಗು ಚೆಂಗನೆ ನೆಗೆಯುವ ಕರು ಅಮ್ಮನ ಹಾಲು ಕುಡಿವ ಕರುಹುಲ್ಲನು ಮೇಯುವ ಕರುಕಂದು ಬಣ್ಣದ ಮೈಯ ಕರುಅಂಬಾ...

Saturday, December 13, 2008

ಏರೋಪ್ಲೇನ್ ಏರಿದ ಪೋರಿ !!!

ಬೇಬಿ ಕಾರ್ ಸೀಟಿನಲ್ಲಿ ಕೂರಲು ಬಲು ಗಲಾಟೆ ಮಾಡುತ್ತಿದ್ದ ಪುಟ್ಟಿಯನ್ನ ಹೇಗಪ್ಪ ವಿಮಾನದಲ್ಲಿ ಭಾರತಕ್ಕೆ ಕರೆದೊಯ್ಯೋದು ಅನ್ನೋದು ಪುಟ್ಟಿ ಅಮ್ಮ-ಅಪ್ಪನ ಚಿಂತೆ ಆಗಿತ್ತು. ಆದ್ರೂ ಅವಳ ಮೊದಲ ವರ್ಷದ ಹುಟ್ಟುಹಬ್ಬವನ್ನ ಮನೆಯವರೆಲ್ಲರ ಜೊತೆ ಆಚರಿಸಬೇಕು ಅಂತ ಹೊರಟೇ ಬಿಟ್ಟ್ರು. ತಲಹಸೀಯಿಂದ ಬೆಂಗಳೂರಿಗೆ ಹೋಗೋಷ್ಟರಲ್ಲಿ ಪುಟ್ಟಿ-ಅಮ್ಮ-ಅಪ್ಪ ಎಲ್ಲರಿಗೂ ಸಾಕು ಸಾಕಾಯ್ತು.ವಿಮಾನದಲ್ಲಿ ತನ್ನದೇ ತೊಟ್ಟಿಲಲ್ಲಿ ಮಲಗಿದ್ದು ಹೀಗೆ...ಶಿಗಾಗೋ ವಿಮಾನನಿಲ್ದಾಣದಲ್ಲಿ ಮುಂದಿನ ಫ್ಲೈಟ್-ಗೆ...

Tuesday, December 02, 2008

ತಲೆ ಕೆಳಗಾದ ಮುಖ!!

ಮೊನ್ನೆ ರಾತ್ರಿ ಬಾನಿನಲ್ಲಿ ಎಲ್ಲರಿಗೂ ಕಂಡ ನಗು ಮುಖ ನಮಗೆ ಇವತ್ತಾದರೂ ಕಾಣಿಸುತ್ತೋ ಇಲ್ಲವೋ ಅಂತ ಕತ್ತಲಾಗುವದನ್ನೇ ಕಾಯುತ್ತಿದ್ದೆ. ಹೊರಗಡೆ ಹೋದಾಗ ಆಕಾಶದಲ್ಲಿ ಮೋಡವಿಲ್ಲದ್ದು ಕಂಡು ಖುಶಿ ಆಯಿತು. ಹುಡುಕುತ್ತಿದ್ದ ಮುಖ ದರ್ಶನವಾದಾಗ ನಿಧಿ ಸಿಕ್ಕವಳಂತೆ ರೋಡಿನಲ್ಲೇ ಕುಣಿದಾಡಿದೆ. ಅಮೇರಿಕಾದಲ್ಲಿ ಸಪ್ಪೆ ಮೊರೆ ಕಾಣಿಸುವುದಾಗಿ ನ್ಯೂಸ್-ನಲ್ಲಿ ಹೇಳಿದ್ದರು, ಇಲ್ಲಿ ನನಗೆ ಕಂಡದ್ದು ತಲೆ ಕೆಳಗಾದ ಮುಖ!! ಇಲ್ಲಿನ ಆರ್ಥಿಕ ಪರಿಸ್ತಿಥಿಯನ್ನು ಬಿಂಬಿಸುತ್ತಿದೆಯೋ ಏನೋ...

Monday, December 01, 2008

ಬಾನಿನಲ್ಲೊಂದು ನಗು ಮುಖ :)

ಪ್ರತಿ ವರ್ಷ ಥ್ಯಾಂಕ್ಸ್ ಗೀವಿಂಗ್ ಗೆ ಇಲ್ಲಿ ಅಮೇರಿಕೆಯಲ್ಲಿ ಕುಟುಂಬದ ಸದಸ್ಯರೆಲ್ಲಾ ಒಂದೆಡೆ ಸೇರುತ್ತಾರೆ. ಇದೇ ಸಮಯಕ್ಕೆ ಈ ವರ್ಷ ಬಾನಿನಲ್ಲಿ ಚಂದಿರ, ಗುರು ಮತ್ತು ಶುಕ್ರ ಗ್ರಹಗಳು ಒಂದೆಡೆ ಕೂಡಿ ನಮ್ಮನ್ನೋಡಿ ನಗೆ ಚೆಲ್ಲುವುದೆಂದು ಹಲವು ದಿನಗಳಿಂದ ನ್ಯೂಸ್ ನಲ್ಲಿ ಬರ್ತಾಯಿತ್ತು.252,000 ಮೈಲಿ ದೂರವಿರುವ ಚಂದಿರ ಈ ಮೂವರಲ್ಲಿ ನಮಗೆ ತೀರಾ ಹತ್ತಿರದಲ್ಲಿರುವ ಮತ್ತು ಚಿಕ್ಕದಾದ್ದು. ಗುರು ನಮ್ಮಿಂದ 94 million ಮೈಲಿ ದೂರದಲ್ಲಿದ್ದರೆ ಶುಕ್ರ 540 million...

Sunday, November 30, 2008

ಹನ್ನೊಂದನೆ ತಿಂಗಳ ಹುಟ್ಟು ಹಬ್ಬ :)

ಪುಟ್ಟಿಯ ಹನ್ನೊಂದನೆ ತಿಂಗಳ ಹುಟ್ಟು ಹಬ್ಬ ಬಂದೇ ಬಿಡ್ತು. ಭಾರತಕ್ಕೆ ಅಜ್ಜಿ- ತಾತನ ಮನೆಗೆ ಹೋಗಿದ್ದ ಅವಳ ಫ್ರೆಂಡ್ಸ್ ಶಕ್ತಿ, ಸುಮುಖ್ ಮತ್ತು ಸಿದ್ದಾರ್ಥ್ ಅಣ್ಣ ಇವೆರೆಲ್ಲ ವಾಪಸ್ ಬಂದಿದ್ರು. ಪುಟ್ಟಿ ಜೊತೆ ಆಡಲು ಹೊಸ ಹೊಸ ಆಟ ಕಲಿತು ಬಂದಿದ್ದ್ರು. ಸದ್ಯದಲ್ಲೇ ತಾನೂ ಅಪ್ಪ-ಅಮ್ಮನ ಜೊತೆ ಇಂಡಿಯಾದಲ್ಲಿರುವ ಅಜ್ಜ-ಅಜ್ಜಿ ಮನೆಗೆ ಹೋಗೋದಕ್ಕೆ ರೆಡಿಯಾಗ್ತಾ ಇರುವ ಪುಟ್ಟಿ ಅವರಿಂದ ಹಲವು ಟಿಪ್ಸ್ ತಗೊಂಡ್ಲು. ಎಲ್ಲರೂ ಕೇಕ್ ತಿಂದು ಸಂತಸ ಪಟ್ಟರು...

Monday, November 24, 2008

ಪುಟ್ಟಿಯ ಮೊದಲ Fall !!

ಟೈಟಲ್ ನೋಡಿ ಪುಟ್ಟಿ ಬಿದ್ದ್ ಬಿಟ್ಟ್ಲಾ ಅಂತ ಯೋಚಿಸಿದ್ರಾ? ಅಯ್ಯೊ ಇಲ್ಲಾ... ಈಗಿಲ್ಲಿ Autumn / ಶರದ್ /Fall ಎನ್ನುವ ಎಲೆಗಳು ಉದುರೋ ಕಾಲ ಶುರುವಾಗಿದೆ. ಎಲೆಗಳನ್ನೆಲ್ಲಾ ಉದುರಿಸಿ ಚಳಿಗಾಲಕ್ಕೆ ಪೂರಾ ಬೋಳಾಗಿ ನಿಲ್ಲುವ ಮೇಪಲ್, ಬರ್ಚ್, ಎಲ್ಮ್, ಕೆಲಬಗೆಯ ಓಕ್ ಮುಂತಾದ ಮರಗಳಲ್ಲಿ ಎಲೆ ಉದುರುವುದಕ್ಕೆ ಮುನ್ನ ಸಂಭವಿಸುವ ವರ್ಣವೈಭವದಲ್ಲಿ ಕಣ್ಣು ತುಂಬುವಷ್ಟು ಬಣ್ಣ. ಸೆಪ್ಟೆಂಬರ್ ನಲ್ಲಿ ಅಧಿಕೃತವಾಗಿ fall ಶುರುವಾದಾಗ ಇಲ್ಲಿಯವರೆಗೂ ಹಸಿರಾಗಿದ್ದ ಎಲೆಗಳೆಲ್ಲ...

Friday, November 14, 2008

ಮಕ್ಕಳ ದಿನಾಚರಣೆ ಶುಭಾಶಯಗಳು !!

ಜವಹರ್ ಲಾಲ್ ನೆಹರೂ ಅವರಿಗೆ ಮಕ್ಕಳೆಂದರೆ ಬಲು ಇಷ್ಟವಂತೆ. ಮಕ್ಕಳು ಕೊಟ್ಟ ಗುಲಾಬಿಯನ್ನು ತಮ್ಮ ಕೋಟಿನ ಜೇಬಿಗೆ ಸೇರಿಸಿ ಸಂತೋಷಪಡುತ್ತಿದ್ದರಂತೆ. ಮಕ್ಕಳು ಮತ್ತು ಹೂವುಗಳನ್ನು ಹೋಲಿಸುತ್ತಿದ್ದ ನೆಹರು, "ಮಕ್ಕಳೆಂದರೆ ಹೋದೋಟದಲ್ಲಿರುವ ಸುಂದರ ಮೊಗ್ಗುಗಳು" ಎನ್ನುತ್ತಿದ್ದರಂತೆ. ಪುಟ್ಟ ಮಕ್ಕಳ ಕುರಿತು ಕಾಳಜಿ ವಹಿಸಬೇಕು, ಮಕ್ಕಳನ್ನು ಪ್ರೀತಿಯಿಂದ ಪೋಷಿಸಬೇಕು, ಮಕ್ಕಳೇ ದೇಶದ ಭವಿಷ್ಯ ಹಾಗೂ ನಾಳಿನ ನಾಗರಿಕರು ಎಂಬುದು ನೆಹರು ಅಭಿಮತ. ಮಕ್ಕಳ ಮೇಲಿದ್ದ ಇವರ ಅಕ್ಕರೆ,...

Wednesday, November 05, 2008

ಸಾವು ಕೊನೆಯಲ್ಲ ...

ಕೋಣೆಯ ತುಂಬಾ ಮೌನ ಆವರಿಸಿತ್ತು. ಸವಿತಾಳ ಅಳುವಿನ ಸಣ್ಣದನಿಯೊಂದೇ ಆಗಾಗ್ಗೆ ಆ ಮೌನ ಮುರಿಯುತ್ತಿತ್ತು. ಹಾಸಿಗೆಯ ಮೇಲೆ ಮಲಗಿದ್ದ ತನ್ನ ಕಂದನನ್ನು ನೋಡಿ ಮತ್ತೆ ಮತ್ತೆ ಬಿಕ್ಕಳಿಸುತ್ತಿದ್ದಳು. ತನ್ನ ಮುದ್ದು ಅವಿನಾಶ್ ಇನ್ನಿಲ್ಲವೆಂದು ಡಾಕ್ಟರ್ ಆಗಷ್ಟೆ ಹೇಳಿದ ಮಾತನ್ನು ನಂಬಲು ಅವಳಿಂದ ಆಗುತ್ತಿಲ್ಲ. "ಆ ದೇವರು ಇಷ್ಟು ಕ್ರೂರಿ ಆಗಲು ಹೇಗೆ ಸಾಧ್ಯ? ಈ ಎಳೆ ಕಂದಮ್ಮನಿಗೆ ಈ ಘೋರ ಶಿಕ್ಷೆ ಏಕೆ?" ಎಂದೆಲ್ಲಾ ಯೋಚಿಸುತ್ತಾ ಮಲಗಿದ್ದ ಮಗನ ದೇಹ ದಿಟ್ಟಿಸಿ ಕಣ್ಣೀರೊರೆಸಿಕೊಂಡಳು. "ಅವಿ, ನಾ ನಿನ್ನ ಸಾಯೋಕೆ ಬಿಡೋಲ್ಲ ಪುಟ್ಟು, ಯಾರ್ ಏನೇ ಹೇಳಿದರೂ ಸರಿ ನೀನು ಸಾಯುವುದಿಲ್ಲ" ಸವಿತ ಬಡಬಡಿಸುತ್ತಾ ಹಾಸಿಗೆಯ ತುದಿಯಲ್ಲಿ ಕುಸಿದಳು.ಉಲ್ಲಾಸ್ ಜೊತೆ ಮಾತನಾಡುತ್ತಾ ಕೋಣೆಗೆ ಬಂದರು ಪ್ರಖ್ಯಾತ...

Saturday, November 01, 2008

ಕನ್ನಡದ ಕಂದ !

ನಮ್ಮ್ ಪುಟ್ಟಿ ಕನ್ನಡ ರಾಜ್ಯೋತ್ಸವ ಆಚರಿಸಿದ್ದು ಹೀಗೆ !! ನಡೆ ಕನ್ನಡ ನುಡಿ ಕನ್ನಡ,ತನು ಕನ್ನಡ ಮನ ಕನ್ನಡ,ಕಣಕಣ್ದಲ್ಲೂ ಹರಿಯುತ್ತಿರೋ,ಬಿಸಿ ನೆತ್ತರ ಕಿಡಿ ಕನ್ನಡ,ನಿನ್ನ ಅಮ್ಮನ ಹೊತ್ತು ಪೊರೆದ,ವಾತ್ಸಲ್ಯದ ಮಣ್ಣು ಕನ್ನಡ,ನಾಲಿಗೆಗೆ ಮಾತು ಕೊಟ್ಟ,ತಾಯ್ನುಡಿಯು ಚಿರ ಕನ್ನಡ. -ಗೋವರ್...

Friday, October 31, 2008

ಕನ್ನಡ ಈಗ ಶಾಸ್ತ್ರೀಯ ಭಾಷೆಗಳ ಪಟ್ಟಿಗೆ !!!

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು !!!ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ನೀಡಿರುವ ವಿಷಯ ಕೇಂದ್ರ ಸರ್ಕಾರ ಇಂದು ಸಂಜೆ ಪ್ರಕಟಿಸಿದೆ. ಇಲ್ಲಿಯವರೆಗೆ ಸಂಸ್ಕೃತ ಮತ್ತು ತಮಿಳು ಭಾಷೆಗೆ ಸೀಮಿತವಾಗಿದ್ದ ಆ ಗೌರವ, ಈಗ ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಲಭಿಸಿದೆ. ಈಗಾಗಲೇ ಕರ್ನಾಟಕದಾದ್ಯಂತ ಸಂಭ್ರಮದ ವಾತಾವರಣ ಶುರುವಾಗಿದೆ. 53ನೇ ರಾಜ್ಯೋತ್ಸವ ಆಚರಿಸುತ್ತಿರುವ ಕನ್ನಡಿಗರಿಗೆ ಹೆಚ್ಚಿನ ಸಂತೋಷವಾಗಿದೆ, ಎಲ್ಲೆಲ್ಲೂ ಹಬ್ಬದ ವಾತಾವರಣ ಕಂಡಿದೆಯಂತೆ.ಸುದ್ಧಿ ಓದಿ...

Thursday, October 30, 2008

ಹತ್ತರ ಗಮ್ಮತ್ತು !!!

ಮಕ್ಕಳಿಗೆ ಅಂಕಿ/ಲೆಕ್ಕ ಕಲಿಸುವ "ಹತ್ತು ಹತ್ತು ಇಪ್ಪತ್ತು ತೋಟಕೆ ಹೋದನು ಸಂಪತ್ತು" ಪದ್ಯ ನಿಮಗೆಲ್ಲ ಗೊತ್ತೇ ಇದೆ. ಇದನ್ನ ನಮ್ಮ್ ಪುಟ್ಟಿ ಹಾಡೋದು ಹೀಗೆ... ಹತ್ತು ಹತ್ತು ಇಪ್ಪತ್ತು ಹುಟ್ಟುಹಬ್ಬ ಮತ್ತೆ ಬಂತುಇಪತ್ತು ಹತ್ತು ಮೂವತ್ತು ಮನೆಯವರಿಗೆಲ್ಲ ಸಂತಸ ತಂತು ಮೂವತ್ತು ಹತ್ತು ನಲವತ್ತು ನಂಗೆ ಹೊಸ ಬೈಕು ಸಿಕ್ತು ನಲ್ವತ್ತು ಹತ್ತು ಐವತ್ತು ಬಲ್ಗೇರಿಯಾ ಕುಟುಂಬ ಮನೆಗೆ ಬಂತು ಐವತ್ತು ಹತ್ತು ಅರವತ್ತುಅವರ್ ಮಗಳು ಸಿಮೋನಾ ಅಂತ ಗೊತ್ತಾಯ್ತು ಅರ್ವತ್ತು ಹತ್ತು...

Monday, October 27, 2008

ಬಣ್ಣ ಬಣ್ಣದ ದೀಪಗಳು !!!

ಗಣೇಶನ ಮಾಡಲು ತಂದಿದ್ದ ಕ್ಲೇ ಇನ್ನೂ ಸ್ವಲ್ಪ ಉಳಿದಿತ್ತು. ಅದರಲ್ಲಿ ದೀಪಾವಳಿಗೆ ದೀಪಗಳನ್ನು ಮಾಡೋಣ ಅಂತ ಪ್ರಯತ್ನಿಸಿದ್ದೆ. ಆದರೆ ಕೆಲಸಕ್ಕೆ ಹೊರಡುವ ಆತುರದಲ್ಲಿ ಹೊರಗೆ ಒಣಗಲು ಇಟ್ಟಿದ್ದ ದೀಪಗಳನ್ನು ಅಲ್ಲೇ ಬಿಟ್ಟು, ಅವು ಮಳೆಗೆ ನೆಂದು ತೊಪ್ಪೆಯಾದವು :( ಕೊನೆಗೆ ಎಂದಿನಂತೆ Tealight Candlesನ ಹಚ್ಚಿ ಹಬ್ಬ ಮಾಡೋಣ ಅಂತ ಸುಮ್ಮನಾದೆ. ಆರ್ಕುಟ್’ನಲ್ಲಿ ನನ್ನ ಕೆಲವು ಗೆಳತಿಯರು ಮಾಡಿದ ಈ ಸುಂದರ ದೀಪಗಳನ್ನು ನೋಡಿ. ಪೆನ್ಸಿಲ್ ಸ್ಕೆಚ್ ಪ್ರವೀಣೆ ಉಮಾ ಅವರ ಕೈಯಲ್ಲಿ...

Sunday, October 26, 2008

ದೀಪಾವಳಿ ಹಾಡುಗಳು !!!

ಸಂಜೆ ದೀಪ ಹಚ್ಚುವಾಗ ಅಮ್ಮ ಹೇಳ್ತಾಯಿದ್ದ ’ರಂಜನಿ’ ರಾಗದಲ್ಲಿರುವ ಈ ಹಾಡು ನನಗೆ ಬಹಳ ಇಷ್ಟ.ದೀಪಲಕ್ಷ್ಮಿ ದೇವಿ ಜಯ ದೀಪಲಕ್ಷ್ಮಿದೀಪಲಕ್ಷ್ಮಿ ದೇವಿ ಜಯ ದೀಪಲಕ್ಷ್ಮಿ//ಪ//ಶುಕ್ರವಾರದಲ್ಲಿ ನಿನ್ನ/ ಕೀರ್ತನೆಯಗೈವೆಭಕ್ತಿಯಿಂದ ಬೇಡುವೆ ಮುಕ್ತಿ ಸಂಪದವ ನೀಡೆ //ದೀಪ// ನಿನ್ನನ್ನೆ ಪಾಡುವೆ ನಿನ್ನನ್ನೆ ಪೊಗಳುವೆನಿನ್ನ ಚರಣ್ದಲ್ಲಿ ಶಿರವನಿಟ್ಟು ನಾ ನಮಿಸುವೆ//೨//ನಿನ್ನ ಕೃಪೆ ಕಟಾಕ್ಷವು ನನ್ನದಾಗಿ ಬೆಳಗುತಿರಲಿ//ದೀಪ// ಅಜ್ಞಾನದ ಕತ್ತಲಲ್ಲಿ ಬಳಲಿ ಬೆಂಡಾಗಿಹೆನುಸುಜ್ಞಾನದ ಬೆಳಕು ನೀಡಿ ಜೀವನ ಹಸನಾಗಿಸು//೨//ಅಭಯವ ನೀಡು ಬಾ/ ಕರುಣೆಯ ತೋರು ಬಾಮನಸು/ ನಿನ್ನಲ್ಲಿ/ ನಿಲ್ಲಿಸು/ ತಾಯೇ //ದೀಪ//ನಮ್ಮ ಕನ್ನಡ ಚಲನಚಿತ್ರಗಳಲ್ಲಿ ಕೆಲವು ದೀಪಾವಳಿ ಹಾಡುಗಳಿವೆ. ಅವುಗಳಲ್ಲಿ ಡಾ. ರಾಜ್ ಮತ್ತು...

ದೀಪಾವಳಿ ಹಬ್ಬದ ಶುಭಾಶಯಗಳು !!!

ಬಂದಿದೆ ಬೆಳಕಿನ ಹಬ್ಬ ದೀಪಾವಳಿಎಲ್ಲೆಲ್ಲೂ ಪಟಾಕಿಗಳ ಹಾವಳಿ !!ಶುಭವ ತರಲಿ ಈ ದೀಪಾವಳಿನಮ್ಮನಿಮ್ಮೆಲ್ಲರ ಬಾಳಿನಲಿ !!!ದೀಪಾವಳಿ ಬೆಳಕಿನ ಹಬ್ಬ, ಕತ್ತಲಿನಿಂದ ಬೆಳಕಿನೆಡೆಗೆ ಒಯ್ಯುವ ಹಬ್ಬ, ಅಜ್ಞಾನದಿಂದ ಸುಜ್ಞಾನದತ್ತ ಕರೆದೊಯ್ಯುವ ಹಬ್ಬ, ಅಂಧಕಾರ ಕಳೆಯುವ, ಪ್ರೀತಿ-ವಿಶ್ವಾಸದ ಹಬ್ಬ ದೀಪಾವಳಿ. ದೀಪಾವಳಿ ಅಂದೊಡನೆ ಮನಸಿಗೆ ಬರುವುದು ಸಾಲುಸಾಲು ದೀಪಗಳು, ಢಂ ಢಂ ಪಟಾಕಿಗಳು, ಬಣ್ಣ ಬಣ್ಣದ ರಂಗೋಲಿ, ಬಗೆಬಗೆಯ ಸಿಹಿ ತಿಂಡಿಗಳು. ಹೊಸ ಬಟ್ಟೆ ಹಾಕಿಕೊಂಡು, ಅಣ್ಣ ತಮ್ಮಂದಿರ...

Wednesday, October 01, 2008

ನವರಾತ್ರಿಯ ಕೃಷ್ಣ !!

ಗೋಕುಲಾಷ್ಟಮಿಯಂದು ಪುಟ್ಟಿಯನ್ನ ಕೃಷ್ಣ ಮಾಡಿ ಆನಂದಿಸಲು ಅವರಮ್ಮ ವಿಫಲ ಪ್ರಯತ್ನ ಮಾಡಿದ್ರು. ಮೊದಲೇ ಪುಟ್ಟಿಯಮ್ಮನಿಗೆ ಕಚ್ಚೆ ಉಡಿಸಲು ಬರೋಲ್ಲ, ಜೊತೆಗೆ ಪುಟ್ಟಿಯ ತುಂಟಾಟ. ಅಂತೂ ಇಂತೂ ೩-೪ ಸರಿ ಪ್ರಯತ್ನಿಸಿ ಕೈ ಚೆಲ್ಲಿದ್ದರು. ನಂತರ ಎಲ್ಲರ ಮನೆಯ ಕಂದಮ್ಮಗಳು ಕೃಷ್ಣ-ರಾಧೆಯರಾಗಿ ಮೆರೆದ ಫೋಟೋಗಳನ್ನು ನೋಡಿದ ಮೇಲೆ, ಮತ್ತೊಮ್ಮೆ ಪ್ರಯತ್ನಿಸೋಣ ಅಂತ ನವರಾತ್ರಿಯ ಮೊದಲ ಪುಟ್ಟಿಯನ್ನ ಪುಸಲಾಯಿಸುತ್ತಾ ಪಂಚೆ ಸುತ್ತಿದರು. ಅವತ್ತು ಅವಳ ೯ನೇ ತಿಂಗಳ ಬರ್ತ್-ಡೇ ಆದ್ದರಿಂದಲೋ...

Tuesday, September 30, 2008

ನವರಾತ್ರಿಗೆ ನವಮಾಸ!!!

ನವರಾತ್ರಿಗೆ ನವಮಾಸಗಳು ತುಂಬಲುಮತ್ತೆ ಬಂದರು ಫ್ರೆಂಡ್-ಗಳು ಅಪ್ಪ ತಂದರು ಪಿಯಾನೋ ಆಡಲು ಹೊಸ ಡಿಸ್ನಿ ಚೇರ್ ಕೂರಲುಅಮ್ಮ ಮಾಡಿದರು ಸಿಹಿ ತಿನ್ನಲು ಆಕಾಶ್-ಸಾಗರ್ ಸೋದರರುನನ್ನ ಜೊತೆಗೂಡಿ ಆಟವಾಡಿದರುಅವರಪ್ಪ-ಅಮ್ಮ ಸಂತಸದಿ ನನ್ನ ಹರಸಿದರು ಅವರಜ್ಜ ನಗುನಗುತಿರೆಂದು ಹಾರೈಸಿ...

Monday, September 29, 2008

ನಮ್ಮ್ ಪುಟ್ಟಿ ಈಗ ಸ್ಟಾರ್ !!!

ಪುಟ್ಟಿ ಅಮ್ಮ ಅಪ್ಪ ಮತ್ತು ಮನೆಯವರ ಪಾಲಿಗೆ ಯಾವತ್ತೂ ಸ್ಟಾರ್ . ಅವಳೇನೆ ಮಾಡಿದ್ರೂ ದೊಡ್ಡ ಸಾಧನೆಯಂತೆ ಊರಿಗೆಲ್ಲಾ ಟಾಂ ಟಾಂ ಮಾಡೋದು ಅವಳಮ್ಮನ ಬುದ್ಧಿ :) ಆದರೀಗ ಅವಳು ಹೊರಗಿನವರ ದೃಷ್ಟಿಲೂ ಸ್ಟಾರ್!!! ಈಗಷ್ಟೆ ಈಮೈಲ್ ನಲ್ಲಿ ಸ್ನೇಹಿತೆಯೊಬ್ಬರು ಬರೆದಿದ್ದರು ನಿಮ್ಮ ಪುಟ್ಟಿ ಇವತ್ತು ಕೆಂಡಸಂಪಿಗೆಯಲ್ಲಿ ಮಿಂಚ್ತಾಯಿದ್ದಾಳೆ ನೋಡಿ ಅಂತಾ:) ಇದ್ಯಾವುದಪ್ಪ ಕೆಂಡಸಂಪಿಗೆ ಅಂತ ಗೂಗಲಿಸಿ ನೋಡಿದಾಗ ಈ ತಾಣದ ಪರಿಚಯ ಆಯಿತು. ಇವರಿಗೆ ನಮ್ಮ್ ಪುಟ್ಟಿಬ್ಲಾಗ್ ವಿಚಾರ ಹೇಗೆ...

Saturday, September 27, 2008

ಬಾ ಬಾ ಗಿಳಿಯೆ

ಪ್ರತಿ ವರ್ಷ ನಡೆಯೋ ಏಷಿಯನ್ ಫೆಸ್ಟಿವಲ್ ನೋಡಲು ಒಂಬತ್ತು ತಿಂಗಳ ಕಂದ ಪುಟ್ಟಿ ಅಪ್ಪನ ಜೊತೆ ಹೋಗಿದ್ಲು. ಅಲ್ಲಿ ನೋಡಿದ ಬಣ್ಣಬಣ್ಣದ ನ್ಯೂಜಿಲ್ಯಾಂಡಿನ ಗಿಳಿಗಳನ್ನ ನೋಡಿ ಖುಶಿಪಟ್ಟ್ಲು.ಬಾ ಬಾ ಗಿಳಿಯೆ, ಬಣ್ಣದ ಗಿಳಿಯೇಹಣ್ಣನು ಕೊಡುವೆನು ಬಾ ಬಾ,ಹಸಿರು ಪುಕ್ಕದ ಚಂದದ ಗಿಳಿಯೆನನ್ನೊಡನಾಡಲು ಬಾ ಬಾ.ಕೆಂಪು ಮೂಗಿನ ಮುದ್ದಿನ ಗಿಳಿಯೆಹಾಡನು ಕಲಿಸುವೆ ಬಾ ಬಾ,ಮರದಲಿ ಕುಳಿತು ನೋಡುವೆ ಏಕೆಹಾರುತ ಹತ್ತಿರ ಬಾ ಬಾ.ಠಕ್ಕಿನ ಕಾಮಿ ಮನೆಯೊಳಗಿಲ್ಲಹೆದರುವೆ ಏಕೆ ಬಾ ಬಾ,ಸೊಕ್ಕಿನ...

Thursday, September 11, 2008

ಅದೃಷ್ಟದಾಟ !!!

ಸೆಪ್ಟೆಂಬರ್ ೬ ೨೦೦೮, ಶನಿವಾರ ಸಂಜೆ ಫ್ಲೋರಿಡಾದ ಪಾನ್ಸ್ ಇನ್-ಲೆಟ್ ಎಂಬಲ್ಲಿ ಈಜಲು ಹೋದ ಅಪ್ಪ ಮಗ, ನೀರಿನ ಅಲೆಗಳಿಗೆ ಸಿಕ್ಕಿ ಬಿದ್ದು, ಶಾರ್ಕ್-ಗಳು ತುಂಬಿರುವ ಅಟ್ಲಾಂಟಿಕ್ ಸಮುದ್ರದಲ್ಲಿ ಸತತ ಹದಿನೈದು ಘಂಟೆಗಳ ಕಾಲ ಯಾವುದೇ ಲೈಫ್ ಜಾಕೆಟ್ ಇಲ್ಲದೇ ತೇಲುತ್ತಾಯಿದ್ದು ಬದುಕಿ ಉಳಿದ ನ್ಯೂಸ್ ಓದಿ ಆಶ್ಚರ್ಯ ಆನಂದ ಎರಡೂ ಒಟ್ಟಿಗೆ ಆಯಿತು.೧೨ ವರ್ಷದ ಮೂಕ ಬಾಲಕ ಕ್ರಿಸ್ ಅಲೆಗಳಲ್ಲಿ ಸಿಕ್ಕಿದ್ದನ್ನು ನೋಡಿ, ಅವನನ್ನು ರಕ್ಷಿಸಲು ಹೋದ ಅವನಪ್ಪ ಕೂಡ ಅಲೆಗಲಿಗೆ ಸಿಕ್ಕಿ ಬಿದ್ದ. ಮಗನನ್ನು ಎಚ್ಚರದಿಂದ ಇಡಲು ಅಪ್ಪ, ಮಗನ ಅಚ್ಚುಮೆಚ್ಚಿನ ಡಿಸ್ನಿ ಚಲನಚಿತ್ರ "Toy Story"ಯಲ್ಲಿ Buzz Lightyearನ ‘To infinity ... and beyond’ ಎಂಬ ಡಯಲಾಗನ್ನು ರಾತ್ರಿ ಬಹಳ ಹೊತ್ತು ಮಗನಿಗೆ ಕೇಳುವಂತೆ...

Tuesday, September 09, 2008

ಅಲ್ಲಿ ನೋಡು ಗಣಪ ಇಲ್ಲಿ ನೋಡು ಗಣಪ

ಅಲ್ಲಿ ನೋಡು ಗಣಪಇಲ್ಲಿ ನೋಡು ಗಣಪಮೇಲೆ ನೋಡು ಗಣಪಕೆಳಗೆ ನೋಡು ಗಣಪಈ ಹಾಡು ನಾವು ಗಣೇಶನ ವಿಸರ್ಜನೆಗೆ ಹೋಗೋವಾಗ ಹಾಡ್ತಾಯಿದ್ವಿ. ಅಮೇರಿಕಾದಲ್ಲಿರುವ ನನ್ನ ಹಲವಾರು ಸ್ನೇಹಿತೆಯರು ಹಬ್ಬಕ್ಕೆ ತಾವೇ ಮಣ್ಣಿನಿಂದ, ಗೋಧಿಹಿಟ್ಟಿನಿಂದ, ಅರಿಶಿನದ ಗಣಪತಿಯನ್ನ ಮಾಡಿ ಪೂಜಿಸಿದ್ದರು, ಅವರು ಫೋಟೋಗಳನ್ನ ನನ್ನೊಂದಿಗೆ ಹಂಚಿಕೊಂಡರು. ಬನ್ನಿ ಅವರೆಲ್ಲರ ಮನೆ ಗಣೇಶ ದರ್ಶನ ಮಾಡಿ ಬರೋಣ. ನಮ್ಮ ತಾಯಿ ಬೆಂಗಳೂರಿನಲ್ಲಿ ಹಬ್ಬದ ದಿನ ನನ್ನ ಗಣಪನ ಕಲೆಕ್ಶನ್ ನಲ್ಲಿ ಕೆಲವನ್ನು ಹೊರ ತೆಗೆದು...