
ಆಗ್ಲೇ ನಮ್ಮ್ ಬಂಗಾರಿಗೆ ಎರಡು ತಿಂಗ್ಳು ತುಂಬ್ತು. ಅವಳ ಜೊತೆ ಇದ್ದ್ರೆ ದಿನಗಳು ಎಷ್ಟ್ ಬೇಗ ಉರುಳುತ್ತೆ ಅನ್ನೋದು ಗೊತ್ತೇ ಆಗೋಲ್ಲ. ಸರಿ, ಮತ್ತೊಂದು ಹುಟ್ಟಿದಹಬ್ಬ ಮಾಡೋ ಸಮಯ ಬಂದೇಬಿಡ್ತು. ಈ ಸರ್ತಿ ಮನೆಗೆ ಬಂದ ಸ್ನೇಹಿತರೂ ಅವಳಿಗಾಗಿ ಒಂದು ಕೇಕ್ ತಂದ್ರು, ಜೊತೆಗೆ ಎಂದಿನಂತೆ ಅವರಪ್ಪ ತಂದಿದ್ದ ಕೇಕ್ ಇತ್ತು. ಒಟ್ಟಾರೆ ಎರಡು ಕೇಕ್-ಗಳಾದವು. ಫೋಟೋ ನೋಡಿದ ಎಲ್ಲರೂ ಹಾಸ್ಯ ಮಾಡುವವರೆ, ತಿಂಗಳ ಲೆಕ್ಕದಲ್ಲಿ ಕೇಕ್ ತರೋದಾದ್ರೆ ಪುಟ್ಟಿಯ ೧೦, ೧೧ ಹುಟ್ಟುಹಬ್ಬಗಳು...