Friday, February 29, 2008

ಎರಡು ಎರಡು ಎರಡು !!!

ಆಗ್ಲೇ ನಮ್ಮ್ ಬಂಗಾರಿಗೆ ಎರಡು ತಿಂಗ್ಳು ತುಂಬ್ತು. ಅವಳ ಜೊತೆ ಇದ್ದ್ರೆ ದಿನಗಳು ಎಷ್ಟ್ ಬೇಗ ಉರುಳುತ್ತೆ ಅನ್ನೋದು ಗೊತ್ತೇ ಆಗೋಲ್ಲ. ಸರಿ, ಮತ್ತೊಂದು ಹುಟ್ಟಿದಹಬ್ಬ ಮಾಡೋ ಸಮಯ ಬಂದೇಬಿಡ್ತು. ಈ ಸರ್ತಿ ಮನೆಗೆ ಬಂದ ಸ್ನೇಹಿತರೂ ಅವಳಿಗಾಗಿ ಒಂದು ಕೇಕ್ ತಂದ್ರು, ಜೊತೆಗೆ ಎಂದಿನಂತೆ ಅವರಪ್ಪ ತಂದಿದ್ದ ಕೇಕ್ ಇತ್ತು. ಒಟ್ಟಾರೆ ಎರಡು ಕೇಕ್-ಗಳಾದವು. ಫೋಟೋ ನೋಡಿದ ಎಲ್ಲರೂ ಹಾಸ್ಯ ಮಾಡುವವರೆ, ತಿಂಗಳ ಲೆಕ್ಕದಲ್ಲಿ ಕೇಕ್ ತರೋದಾದ್ರೆ ಪುಟ್ಟಿಯ ೧೦, ೧೧ ಹುಟ್ಟುಹಬ್ಬಗಳು ಮಾಡೋವಾಗ ನಿಮಗೆ ಟೇಬಲ್ ಮೇಲೆ ಜಾಗ ಸಾಲೋಲ್ಲ ಅಂತ :D
ಅವಳು ಈಗ ಎರಡು ಅಡಿ ಉದ್ದ ಬೆಳೆದಿದ್ದಳು, ಅವರ ಅಜ್ಜ ರೇಗಿಸ್ತಾಯಿದ್ದ್ರು "೨ ತಿಂಗ್ಳಿಗೆ ೨ ಅಡಿ.. ಹೀಗೇ ಆದ್ರೆ ನೀನು ಆಕಾಶದೆತ್ತರ ಬೆಳೀತೀಯಾ ಕಂದ" ಅಂತ. ೨ ತಿಂಗಳಿಗೆ ೨ ಅಡಿ ಉದ್ದ ಬೆಳೆದು ೨ ಕೇಕ್-ಗಳೊಂದಿಗೆ ಬರ್ತ್-ಡೇ ಮಾಡಿಕೊಂಡ ಬಂಗಾರಿಗೆ ಖುಶಿಯೋ ಖುಶಿ:)

2 comments:

talhasseeya kannaDamma, caMdanada goMbe aMta hELikoMDu tirugaaDtidre, neevyaaru aMta nanage gottAgOlvE? naanEnu aShTu heDDanE? :P

ತವಿಶ್ರೀ ಸಾರ್,
ಬ್ಲಾಗ್ ಲೋಕದಲ್ಲಿ ನಿಮ್ಮ ಕಣ್ಣ್ ತಪ್ಪಿಸಿ ಓಡಾಡೋಕೆ ಆಗುತ್ಯೆ, ಪುಟ್ಟಿಮನೆಗೆ ಸ್ವಲ್ಪ ಸುಣ್ಣ ಬಣ್ಣದ ಕೆಲ್ಸ ಇತ್ತು ಅದಕ್ಕೆ ನಿಮಗೆ ವಿಷಯ ತಿಳಿಸಿರಲಿಲ್ಲ:)
ನಿಮ್ಮನ್ನು ಹೆಡ್ಡ ಅನ್ನೋರಿಗೆ headಇಲ್ಲ:)

Post a Comment