ಮಗುವನ್ನ ಹೊರಗಡೆ ಅಲ್ಲಿ ಇಲ್ಲಿ ಕರೆದು ಕೊಂಡು ಹೋಗುವ ಮೊದಲು ದೇವಸ್ತಾನಕ್ಕೆ ಹೋಗಿ ದೇವರ ದರ್ಶನ ಮಾಡಬೇಕು ಅಂತ ಅಮ್ಮ ಹೇಳಿದ್ರು. ಇವೆಲ್ಲ ವಿಚಾರ ನನಗೂ ಈಗ ಅಷ್ಟೆ ತಿಳಿತಾಯಿರೋದು, ಪುಟ್ಟಯಿಂದಾಗಿ ಬಹಳಷ್ಟು ವಿಚಾರ ತಿಳ್ಕೊಳ್ತಾಯಿದ್ದೀನಿ. ಹೀಗೆ ಮೊದಲ ಸರ್ತಿ ದೇವಸ್ತಾನಕ್ಕೆ ಹೋಗೋದಕ್ಕೆ "ನಿಷ್ಕ್ರಮಣ" ಅಂತ ಕರೀತಾರಂತೆ.
ಮಗುವನ್ನು ಈ ಬಾಹ್ಯ ಪ್ರಪಂಚದಲ್ಲಿ ಎದುರಾಗುವ ಅಪಾಯಗಳಿಂದ ರಕ್ಷಿಸುವಂತೆ ಭಗವಂತನಲ್ಲಿ ಪ್ರಾರ್ಥಿಸುವುದೇ ಇದರ ಹಿಂದಿನ ಉದ್ದೇಶ.ಪುಟ್ಟಿ ನಮ್ಮೂರಿಗೆ 40 ಮೈಲಿ ದೂರದಲ್ಲಿರೋ ಕ್ವಿನ್ಸಿ ಅನ್ನೋ ಊರಿನಲ್ಲಿರೋ ದೇವಸ್ತಾನಕ್ಕೆ ಮನೆಯವರ ಜೊತೆ ಹೊರಟ್ಲು. ಕಾರ್ ಸೀಟಿನಲ್ಲಿ ಕೂರೋದು ಅಂದ್ರೆ ಅವಳಿಗೆ ಅಲರ್ಜಿ. ಹಾಗಾಗಿ ಅವಳನ್ನು ರಮಿಸಲು ದಾರಿಯುದ್ದಕ್ಕೂ ಅವಳಿಗೆ "ಹರಿ ನಾಮವೇ ಚಂದ ಅದ ನಂಬಿಕೊ ಕಂದ" ಮತ್ತಿತರ ಹಾಡು ಹೇಳುತ್ತಾ ಕರೆದುಕೊಂಡು ಹೋಗಿದ್ದಾಯ್ತು. ಅಲ್ಲಿಂದ ಬಂದಮೇಲೆ ಶುರುವಾಯಿತು ಅವಳ ಸುತ್ತಾಟ:)
2 comments:
ಮನುಸ್ಮೃತಿಯ ಪ್ರಕಾರ, ಸಂಸ್ಕಾರಗಳಲ್ಲಿ ನಿಷ್ಕ್ರಮಣ ಒಂದು. ಹೆಣ್ಣುಮಕ್ಕಳಿಗೆ ಇದರ ಅವಶ್ಯಕತೆ ಇಲ್ಲ ಎಂಬುದು ಸಿದ್ಧಾಂತದಲ್ಲಿ ಹೇಳಿದೆಯಂತೆ. ಸಂಸ್ಕಾರಗಳೆಂದರೆ, ಗರ್ಭದಾನ, ಪುಂಸವನ, ಸೀಮಂತ, ಜಾತಕರ್ಮ, ನಾಮಕರಣ, ನಿಷ್ಕ್ರಮಣ, ಅನ್ನಪ್ರಾಶನ, ಕೇಶಮುಂಡನ, ಕರ್ಣವೇಧನ, ಯಜ್ಞೋಪವೀತಧಾರಣೆ ಇತ್ಯಾದಿಗಳು.
ಪುಟ್ಟಿಗೆ ಶುಭಹಾರೈಕೆಗಳು
ಮುಂಬರುವ ಸಂಕ್ರಾಂತಿಯಲ್ಲಿ ಎಳ್ಳುಬೀರೋಕ್ಕೆ ನಮ್ಮ ಮನೆಗೆ ಬಾ ಆಯ್ತಾ!
ಕೈಯಲಿ ಹಿಡಿದಿಹೆ ಪುಟ್ಟ ಬೆಳ್ಳಿಯ ಹರಿವಾಣ
ಎಳ್ಳು ಬೀರಲು ಹೊರಟಿಹಳ ಪುಟ್ಟಿಗಿಲ್ಲ ಕಡಿವಾಣ
ಹದವಾಗಿ ಮಿಶ್ರಿತ ಎಳ್ಳು ಬೆಲ್ಲ ಕುಸುರಿ ಕಾಳು
ಬಾಳೆಯಹಣ್ಣಿನೊಂದಿಗಿಹುದು ಕಬ್ಬಿನ ಹೋಳು
ಅಕ್ಕಾ ತಂಗೇರು ಬಂದು ಎಲಚಿ ಆರತಿಯ ಎತ್ತಿ
ಕಬ್ಬಿನ ಚೂರು, ಕಾಸು ಕೂಸಿನ ಮೇಲೆರೆಯಿರೇ
ಬಣ್ಣ ಬಣ್ಣದ ಜರತಾರಿ ಕುಪ್ಪಸ ತೊಟ್ಟ ತಂಗಿ
ಜರಿ ಅಂಚಿನ ಲಂಗದಿ ಕುಣಿವ ಚೈತನ್ಯದ ಭಂಗಿ
ಸಂಸ್ಕಾರಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದಕ್ಕೆ ವಂದನೆಗಳು ಸಾರ್. ಪುಟ್ಟಿ ೨೦೦೯ರ ಸಂಕ್ರಾಂತಿಗೆ ಬೆಂಗಳೂರಿನಲ್ಲಿರುತ್ತಾಳೆ, ಖಂಡಿತಾ ನಿಮ್ಮ ಮನೆಗೆ ಎಳ್ಳುಬೀರೋಕೆ ಬರ್ತಾಳೆ:) ಹಾರೈಕೆಗಳಿಗೆ ಧನ್ಯವಾದಗಳು!!
Post a Comment