Friday, May 30, 2008

ಐದು ತಿಂಗಳ ಕಂದ!!!

ಪುಟ್ಟಿಗೆ ಐದು ತಿಂಗಳು ತುಂಬಿತು. ಮತ್ತೊಮ್ಮೆ ಹಬ್ಬ ಮಾಡುವ ಸಮಯ ಬಂತು. ಅಜ್ಜಿ ಅಜ್ಜ ಇಬ್ಬ್ರು ವಾಪಸ್ ಬೆಂಗಳೂರಿಗೆ ಹೋಗಿ ಆಗಿತ್ತು. ಅವರಿಲ್ಲದೆ ಪುಟ್ಟಿಗೆ ಬೇಜಾರಾಗ್ತಾಯಿತ್ತು. ಆದರೆ ಬರ್ತ್ ಡೇಗೆ ಬಂದ ಗೆಳೆಯರ ಮಕ್ಕಳ ಜೊತೆಗೂಡಿ ಆಡಿ ನಲಿದು ಸಂತಸ ಪಟ್ಟಳು ನಮ್ಮ್ ಪುಟ್ಟಿ.’ಪೆದ್ದಗೆದ್ದ’ ಚಿತ್ರದಲ್ಲಿ ಇರುವ ಈ ಹಾಡು ನಿಮ್ಮಲ್ಲಿ ಯಾರಿಗಾದರು ಪೂರ್ತಿ ಗೊತ್ತಿದ್ದರೆ ಅಥವಾ ನಿಮ್ಮ ಬಳಿ ಈ ಹಾಡಿನ ಲಿಂಕ್ ಇದ್ದರೆ ತಿಳಿಸಿ.ಬ ಬ ಪ ಬ ಬ ಪಹುಟ್ಟಿದ ಹಬ್ಬ ಬಂದಾಯ್ತು...

Tuesday, May 27, 2008

ಕರ್ಣವೇಧ !!!

ಕರ್ಣವೇಧ ಅಂದ್ರೆ ಮಗುವಿಗೆ ಕಿವಿ ಚುಚ್ಚಿಸುವುದು. ಮಗುವಿನ ಆರೋಗ್ಯ ಮತ್ತು ಸೌಂದರ್ಯ ವರ್ಧನೆಗೆ ಕಿವಿ ಚುಚ್ಚುವುದು ಉತ್ತಮ ಅಂತ ಶುಶೃತ ಹೇಳಿದ್ದಾನಂತೆ. ಚಿನ್ನದ ಮೇಲೆ ಬಿದ್ದ ನೀರು ದೇಹದ ಮೇಲೆ ಬಿದ್ದರೆ ಆರೋಗ್ಯಕರ ಎಂಬುದು ಇದರ ಹಿಂದಿನ ಉದ್ದೇಶವಿರಬಹುದು. ಕೆಲವರ ಪ್ರಕಾರ ನಮ್ಮ ಕಿವಿಯು "ॐ " ಅನ್ನು ಹೋಲುತ್ತದೆ, ಕಿವಿಯನ್ನು ಚುಚ್ಚುವುದರಿಂದ ಓಂ ಗೆ ಚುಕ್ಕಿಯಿಟ್ಟಂತೆ ಅನ್ನುತ್ತಾರೆ. ಹಿಂದೆ ಮಕ್ಕಳ ಬಲಿ ಕೊಡುವುದು ರೂಢಿಯಲ್ಲಿತ್ತು. ಬಲಿ ಕೊಡುವ ಮಗುವಿನ ದೇಹದಲ್ಲಿ...

Wednesday, May 07, 2008

ಪುಟ್ಟಿಯ ಲಾಲಿಪಪ್ !!!

ನಮ್ಮ್ ಪುಟ್ಟಿಗೆ ಈಗ ತಿನ್ನೋಕೆ ಸಿಹಿಯಾದ ಲಾಲಿಪಪ್ ಸಿಕ್ಕಿದೆ. ಅಮ್ಮ ತಿನ್ನಿಸೋ cerealಗಿಂತ ಇದು ಬಹಳ ರುಚಿ ಅಂತೆ. ಪುಟ್ಟಿಯನ್ನ ಹೀಗೆ ನೋಡಿದಾಗ ಹೈಸ್ಕೂಲಿನಲ್ಲಿ ಕಲಿತ ಶ್ಲೋಕ ನೆನಪಾಗುತ್ತದೆ. ಕರಾರವಿಂದೇನ ಪದಾರವಿಂದಂ ಮುಖಾರವಿಂದೇ ವಿನಿವೇಷಯಂತಂವಟಸ್ಯ ಪತ್ರಸ್ಯ ಪುಟೇ ಶಯಾನಂ ಬಾಲಂ ಮುಕುಂದಂ ಮನಸಾ ಸ್ಮರಾಮಿಅಂದರೆ : ಕಮಲದಂತ ಕೈಗಳಿಂದ ಕಮಲದಂತ ಪಾದಗಳನ್ನು ಕಮಲದಂತ ಬಾಯಿಯೊಳಗೆ ಇರಿಸಿಕೊಂಡು ಆಲದ ಎಲೆಯ ಮೇಲೆ ಮಲಗಿರುವ ಬಾಲ ಮುಕುಂದನನ್ನು ಮನಸಾ ಸ್ಮರಿಸುತ್ತೇನೆ...

Monday, May 05, 2008

ಜೋಲಿಯಲ್ಲಿ ಪುಟ್ಟಿ :)

ಹುಟ್ಟಿದಾಗಿನಿಂದಲೂ ಪುಟ್ಟಿಗೆ ಮಲಗೋದು ಅಂದ್ರೆ ಅಲರ್ಜಿ:( ಅವಳನ್ನ ಮಲಗಿಸಲು ನಾವು ಸಾಹಸ ಮಾಡ್ತಾಯಿದ್ದೀವಿ. ಅವರಪ್ಪ ತಂದಿದ್ದ Cradle Swingನಲ್ಲಿ ಅಜ್ಜಿ ಹಾಡು ಕೇಳುತ್ತಾ ಮಲಗುತ್ತಿದ್ದಳಾದ್ರು ಕೆಲವೊಮ್ಮೆ, ಅದೂ ವರ್ಕ್ ಔಟ್ ಆಗ್ತಾಯಿರ್ಲಿಲ್ಲ. ಆಗ ಅಜ್ಜಿ-ಅಜ್ಜ ಇಬ್ಬ್ರೂ ಸೇರಿ ಜೋಲಿ ಮಾಡಿ, ಹಾಡು ಹೇಳಿ ಅವಳನ್ನ ಮಲಗಿಸೋರು. ಹೊರಗಡೆ ಹೋದಾಗ ಅವಳ್ಳನ್ನ ಮಲಗಿಸಲು ಇದು ಬಹಳ ಅನುಕೂಲ ಆಗ್ತಾಯಿತ್ತು. ಕೆಲವೊಮ್ಮೆ ವಾಲ್-ಮಾರ್ಟ್ / ಪಾರ್ಕಿಂಗ್ ಲಾಟ್ / ಪಾರ್ಕ್ ಇಲೆಲ್ಲ...