Tuesday, May 27, 2008

ಕರ್ಣವೇಧ !!!

ಕರ್ಣವೇಧ ಅಂದ್ರೆ ಮಗುವಿಗೆ ಕಿವಿ ಚುಚ್ಚಿಸುವುದು. ಮಗುವಿನ ಆರೋಗ್ಯ ಮತ್ತು ಸೌಂದರ್ಯ ವರ್ಧನೆಗೆ ಕಿವಿ ಚುಚ್ಚುವುದು ಉತ್ತಮ ಅಂತ ಶುಶೃತ ಹೇಳಿದ್ದಾನಂತೆ. ಚಿನ್ನದ ಮೇಲೆ ಬಿದ್ದ ನೀರು ದೇಹದ ಮೇಲೆ ಬಿದ್ದರೆ ಆರೋಗ್ಯಕರ ಎಂಬುದು ಇದರ ಹಿಂದಿನ ಉದ್ದೇಶವಿರಬಹುದು. ಕೆಲವರ ಪ್ರಕಾರ ನಮ್ಮ ಕಿವಿಯು " " ಅನ್ನು ಹೋಲುತ್ತದೆ, ಕಿವಿಯನ್ನು ಚುಚ್ಚುವುದರಿಂದ ಓಂ ಗೆ ಚುಕ್ಕಿಯಿಟ್ಟಂತೆ ಅನ್ನುತ್ತಾರೆ. ಹಿಂದೆ ಮಕ್ಕಳ ಬಲಿ ಕೊಡುವುದು ರೂಢಿಯಲ್ಲಿತ್ತು. ಬಲಿ ಕೊಡುವ ಮಗುವಿನ ದೇಹದಲ್ಲಿ ಯಾವುದೇ ಗಾಯವಿರಬಾರದು. ತಮ್ಮ ಮಕ್ಕಳನ್ನು ಇದರಿಂದ ತಪ್ಪಿಸಲು ಅವರ ಕಿವಿಗಳನ್ನು ಚುಚ್ಚಿಸುತ್ತಿದ್ದರು ಅಂತಲೂ ಹೇಳುತ್ತಾರೆ.

ನಾವೂ ಪುಟ್ಟಿಗೆ ಅವಳ ಐದನೆ ತಿಂಗಳಿನಲ್ಲಿ ಕಿವಿ ಚುಚ್ಚಿಸಿದೆವು.

0 comments:

Post a Comment