Wednesday, May 07, 2008

ಪುಟ್ಟಿಯ ಲಾಲಿಪಪ್ !!!

ನಮ್ಮ್ ಪುಟ್ಟಿಗೆ ಈಗ ತಿನ್ನೋಕೆ ಸಿಹಿಯಾದ ಲಾಲಿಪಪ್ ಸಿಕ್ಕಿದೆ. ಅಮ್ಮ ತಿನ್ನಿಸೋ cerealಗಿಂತ ಇದು ಬಹಳ ರುಚಿ ಅಂತೆ.
ಪುಟ್ಟಿಯನ್ನ ಹೀಗೆ ನೋಡಿದಾಗ ಹೈಸ್ಕೂಲಿನಲ್ಲಿ ಕಲಿತ ಶ್ಲೋಕ ನೆನಪಾಗುತ್ತದೆ.

ಕರಾರವಿಂದೇನ ಪದಾರವಿಂದಂ ಮುಖಾರವಿಂದೇ ವಿನಿವೇಷಯಂತಂ
ವಟಸ್ಯ ಪತ್ರಸ್ಯ ಪುಟೇ ಶಯಾನಂ ಬಾಲಂ ಮುಕುಂದಂ ಮನಸಾ ಸ್ಮರಾಮಿ

ಅಂದರೆ : ಕಮಲದಂತ ಕೈಗಳಿಂದ ಕಮಲದಂತ ಪಾದಗಳನ್ನು ಕಮಲದಂತ ಬಾಯಿಯೊಳಗೆ ಇರಿಸಿಕೊಂಡು ಆಲದ ಎಲೆಯ ಮೇಲೆ ಮಲಗಿರುವ ಬಾಲ ಮುಕುಂದನನ್ನು ಮನಸಾ ಸ್ಮರಿಸುತ್ತೇನೆ

0 comments:

Post a Comment