Monday, May 05, 2008

ಜೋಲಿಯಲ್ಲಿ ಪುಟ್ಟಿ :)

ಹುಟ್ಟಿದಾಗಿನಿಂದಲೂ ಪುಟ್ಟಿಗೆ ಮಲಗೋದು ಅಂದ್ರೆ ಅಲರ್ಜಿ:( ಅವಳನ್ನ ಮಲಗಿಸಲು ನಾವು ಸಾಹಸ ಮಾಡ್ತಾಯಿದ್ದೀವಿ. ಅವರಪ್ಪ ತಂದಿದ್ದ Cradle Swingನಲ್ಲಿ ಅಜ್ಜಿ ಹಾಡು ಕೇಳುತ್ತಾ ಮಲಗುತ್ತಿದ್ದಳಾದ್ರು ಕೆಲವೊಮ್ಮೆ, ಅದೂ ವರ್ಕ್ ಔಟ್ ಆಗ್ತಾಯಿರ್ಲಿಲ್ಲ. ಆಗ ಅಜ್ಜಿ-ಅಜ್ಜ ಇಬ್ಬ್ರೂ ಸೇರಿ ಜೋಲಿ ಮಾಡಿ, ಹಾಡು ಹೇಳಿ ಅವಳನ್ನ ಮಲಗಿಸೋರು. ಹೊರಗಡೆ ಹೋದಾಗ ಅವಳ್ಳನ್ನ ಮಲಗಿಸಲು ಇದು ಬಹಳ ಅನುಕೂಲ ಆಗ್ತಾಯಿತ್ತು. ಕೆಲವೊಮ್ಮೆ ವಾಲ್-ಮಾರ್ಟ್ / ಪಾರ್ಕಿಂಗ್ ಲಾಟ್ / ಪಾರ್ಕ್ ಇಲೆಲ್ಲ ಅವಳನ್ನ ಜೋಲಿಯಲ್ಲಿ ತೂಗಿದ್ದೂ ಇದೆ. ಅದನ್ನು ನೋಡಿ ಇಲ್ಲಿಯ ಜನರು ಅನೇಕರು ಬಂದು "ಐ ಲೈಕ್ ಯುವರ್ ಮೊಬೈಲ್ ಸ್ವಿಂಗ್" ಅಂತ ಹೇಳಿ ಹೋಗಿದ್ದೂ ಇದೆ:)


"ಚಿನ್ನಾ ನಿನ್ನ ಮುದ್ದಾಡುವೆ" ಚಿತ್ರದ ಈ ಹಾಡು ನನಗೆ ತುಂಬಾ ಇಷ್ಟ. ಈಗೀಗ ಪುಟ್ಟಿಗೂ ಇದು ಅಚ್ಚುಮೆಚ್ಚು:)

ಜೋ ಜೋ ಲಾಲೀ ನಾ ಹಾಡುವೆ
ಚಿನ್ನಾ ನಿನ್ನಾ ಮುದ್ದಾಡುವೆ
ಹೂವಂತ ಕನಸೂ ತಾ ಮೂಡಿ ಬರಲಿ
ನಗುವಾ ಅಳುವಾ ಕಣ್ಣಲ್ಲಿ ಇಂದೂ....
ಜೋ ಜೋ....

ನಿದಿರಾ ದೇವೀ ಬಾ ಮೆಲ್ಲಗೆ
ತಾರೆಯಿಂದಾ ಈ ಭೂಮಿಗೆ
ಸಾವಿರ ರಂಗಿನ ಮಳೆಬಿಲ್ಲಿನಾ
ಮಾಲೆಯ ಧರಿಸೀ ಬಾ ಇಲ್ಲಿಗೆ
ಚಿನ್ನದ ತೇರಲಿ ಒಲವಿಂದ ಬಂದು
ತಾರೇ ಮುತ್ತು ಕಂದಂಗೆ ಇಂದು....
ಜೋ ಜೋ....

ಚಿಪ್ಪೀ ಮಡಿಲಾ ಮುತ್ತಂತೆಯೇ
ದೀಪದೇ ಜ್ಯೋತಿ ಇರುವಂತೆಯೇ
ಕಿರಣದೆ ಕಾಂತಿ ಕುಳಿತಂತೆಯೇ
ಮೊಗ್ಗಲಿ ಸೌರಭ ಇರುವಂತೆಯೇ
ರಾತ್ರೀ ಸೆರಗೂ ಹಾಸಿರಲೆಂದೂ
ಮಲಗೂ ಮಮತೆ ಮಡಿಲಲ್ಲಿ ಬಂದೂ....
ಜೋ ಜೋ....

0 comments:

Post a Comment