Thursday, January 15, 2009

ಒಂಟೆ ಸವಾರಿ !!!

ಈಗ ಬೆಂಗಳೂರಿನ ಬಡಾವಣೆಗಳಲ್ಲಿ ರಾಜಾಸ್ತಾನ ಮರುಭೂಮಿಯಿಂದ ಬಂದಿರೋ ಒಂಟೆಗಳ ತಂಡಗಳು ಪ್ರತಿನಿತ್ಯ ಕಾಣಸಿಗುತ್ತೆ. ಮಕ್ಕಳಿಗೆಲ್ಲಾ ಒಂಟೆ ಸವಾರಿಯ ಮಜಾ ಬೇಸಿಗೆ ರಜೆಯ ಮಜವನ್ನು ಹೆಚ್ಚಿಸಿದೆ. ಒಂದು ರೌಂಡ್ ಹಾಕಿ ಬರಲು ಮಗುವೊಂದಕ್ಕೆ ರೂ.೧೦ ಪಡೆಯುತ್ತಾರೆ. ಎಲ್ಲಾ ಮಕ್ಕಳೊಡನೆ ಕೂಡಿ ಪುಟ್ಟಿಯೂ ಅಪ್ಪನೊಡನೆ ಒಂಟೆ ಸವಾರಿ ಮಾಡಿ ಮಜಾ ಮಾಡಿದ್ಲು.


ಒಂಟೆ ಬಂತು ಒಂಟೆ
ರಾಜಾಸ್ತಾನದ್ ಒಂಟೆ
ಕತ್ತಲ್ ಘಲ್ ಘಲ್ ಘಂಟೆ.

ಮೈ ಕಂದು ಬಣ್ಣ
ನೋಡು ಬಾರಾಣ್ಣ
ಕಿವಿ ಬಲು ಸಣ್ಣ.

ನಾಲ್ಕು ಕಾಲು ಇರುವುದು
ಉದ್ದ ಕತ್ತು ಇರುವುದು
ದಿನವು ಇಲ್ಲಿ ಬರುವುದು.

ನಾ ಸವಾರಿ ಮಾಡುವೆ
ಚಪ್ಪಾಳೆ ತಟ್ಟುವೆ
ಮತ್ತೆ ಬಾ ಎನ್ನುವೆ.

--ರೂpaश्री






4 comments:

ಮೊನ್ನೆ ಒಂದು ದಿನ ನನ್ನ ಮಗಳಿಗೂ ಈ ಒಂಟೆ ಸವಾರಿ ಮಾಡಿಸಿದ್ದೆ. ಆದರೆ ಇಷ್ಟು ಚಂದದ ಮಕ್ಕಳ ಕವಿತೆ ನನಗೆ ಹೊಳೆದಿರಲಿಲ್ಲ. ನಿಜವಾಗಿಯೂ ಮುದ್ದಾದ ಕವಿತೆ. ಅಭಿನಂದನೆಗಳು

ಸತ್ಯ ಸರ್,
ನನ್ನ ಮಗಳು ಈ ಸವಾರಿ ಮಾಡಿ ಬಹಳ ದಿನಗಳು ಆಯ್ತು. ಆಗಿನಿಂದ ಇದಕ್ಕೆ ಪೂರಕವಾಗಿ ಒಂದು ಕವಿತೆ ಬರೆಯಲು ಕಾಯ್ತಿದ್ದೆ. ಈಗ ಆಯ್ತು:)
ಕವಿತೆ ಮೆಚ್ಚಿದಕ್ಕೆ ವಂದನೆಗಳು!
-ರೂpaश्री

This blog is really Nice Roopa avare..
Our Sons Blog is : http://tmsujay.blogspot.com/

Jnaneshwara avare,
putti blog iShTa paTTidakke vaMdanegaLu!
nimma magana blog nODide chennaagide.. muddaada sujaya nige shubha haaraikegaLu:)
bartaa yiri

Post a Comment