Tuesday, January 20, 2009

ಕರಡಿ ಕುಣಿತ

ಪುಟ್ಟಿಗೆ ಪ್ರಾಣಿಗಳು ಅಂದ್ರೆ ತುಂಬಾ ಇಷ್ಟ. ಮೊದಲ ಸಾರಿ ಬೆಂಗಳೂರಿಗೆ ಹೋದಾಗ ಬಹಳಷ್ಟು ಪ್ರಾಣಿಗಳನ್ನ ನೋಡಿ ಖುಶಿ ಪಟ್ಟಳು., ಅವಳು ನೋಡಿದ ಲಿಸ್ಟ್ ನಲ್ಲಿ ಕರಡಿ ಕೂಡ ಇದೆ. ನನ್ನ ಚಿಕ್ಕಪ್ಪನ ಮಗ ನಿಶ್ಚಿತಾರ್ಥಕ್ಕೆಂದು ಊರಿಗೆ ಹೋದಾಗ ದಾರಿಯಲ್ಲಿ ಸಿಕ್ಕಿತು ನಮಗೀ ಕರಡಿ. ಮನೆಯಲ್ಲಿ ಬಹಳಷ್ಟು bearಗಳಿವೆ, ಅವನ್ನ ಪುಟ್ಟಿ ಕರಿಯೋದು "ಬೇ, ಬೇ.." ಅಂತ. ಈಗ ಜೀವಂತ ಕರಡಿಯನ್ನ ತೋರಿಸಿ "ಬೇ ಬೇ" ಅಂತ ಹೇಳಿದಾಗ ಅದೇನು ಅರ್ಥ ಆಯಿತೋ ಗೊತ್ತಿಲ್ಲ, ಅಂತ ಖುಶಿಯಿಂದ ಚಪ್ಪಾಲೆ ತಟ್ಟಿದ್ಲು. ಜೊತೆಯಲ್ಲಿ ಮಾವನ ಮಗಳು ’ಖುಶಿ’ ಇದ್ದಿದರಿಂದ ಇನ್ನು ಹೆಚ್ಚಿನ ಸಂತಸ ಅವಳಿಗೆ.


ಕರಡಿ ಫೋಟೊ ಜೊತೆಗೆ ಇಲ್ಲಿದೆ ನೋಡಿ ಕರಡಿ ಹಾಡು...




ಯಾವ ಕಾಡಡವಿಯಲಿ ಜೇನುಂಡು ಬೆಳೆದಿದ್ದ
ಜಾಂಬುವಂತನ ಹಿಡಿದು ತಂದಾನೊ;
ಧಣಿಯರ ಮನೆ ಮುಂದೆ ಕಾವಲು ಮಾಡಣ್ಣ,
ಧಣಿ ದಾನ ಕೊಡುವನು’ ಎಂದಾನೊ.”

ಬೇಂದ್ರೆ

8 comments:

photo haadu ella chennaagide!! putti bhayane illade karadi muTTuttiddale:)

ಕರಡಿ ಫೋಟೋಗಳು ಚೆನ್ನಾಗಿವೆ..

ಕರಡಿ ಹಲಸು ತಂದಿತು...
ಜೇನ ಕಲಸಿ ತಿಂದಿತು..
ನನ್ನ ಬಾಯಲ್ಲಿ ನೀರೂರಿತು ಅಂತ ಹಾಡಬೇಕೆನಿಸಿತು..

ಕರಡಿ ಕಾರ್ಟೂನ್ ಮತ್ತು ಹಾಡು ತುಂಬಾ ಚೆನ್ನಾಗಿದೆ...

phOTogaLu cennagive!! beMdre avara haaDu Odi khushi aaytu:)

kiran,
puttige yaavudara bhayanu illa sadyakke.. adE namage bhaya !!

ಶಿವು,
ಫೋಟೋ, ಕಾರ್ಟೂನ್ ಎಲ್ಲವನ್ನು ಮೆಚ್ಚಿದಕ್ಕೆ ಧನ್ಯವಾದಗಳು!!
ಬೆಂಗ್ಳೂರಲ್ಲೇ ಇದ್ದೀರಲ್ಲ.. ಹಲಸು ತಂದು ರಸಾಯನ ಮಾಡಿ ಜಮಾಯಿಸಿ ಬಿಡಿ ಮತ್ತೆ:)

aunty idu naan chikkavalaagiddaga nanna fav poem aagittu...thanx...ivella you tube nalli sigutte anta igle gottagiddu...:)

Vidya,
oh houdaa ! you tube nalli bahalashtu kannada rhymes iddaave.. jotege kanna audio nalli haadugaLoo ive:)

Post a Comment