Wednesday, February 25, 2009

ಮೊಲದ ಮರಿ!!

ಹೆಬ್ಬಾಳದಲ್ಲಿ ಪ್ರಥಮ ಜಾನುವಾರು, ಕುಕ್ಕುಟ ಮತ್ಸ್ಯ ಮೇಳ ನಡೆದಾಗ ಪುಟ್ಟಿಗೆ ಪ್ರಾಣಿ-ಪಕ್ಷಿಗಳನ್ನು ತೋರಿಸೋಕೆ ಅಂತ ಅವರಪ್ಪ ಅವಳನ್ನ ಕರ್ಕೊಂಡ್ ಹೋಗಿದ್ರು. ಅವಳು ಮೊಲಗಳನ್ನು ನೋಡಿ ಖುಶಿ ಪಟ್ಟಿದ್ದು ಹೀಗೆ.ಮೊಲದ ಮರಿ ಮೊಲದ ಮರಿ ಆಡ ಬಾರೆ ಚುಪಕೆ ಚುಪಕೆ ಚುಪಕೆ ಚುಪಕೆ ನೆಗೆದು ಬಾರೆದೊಡ್ಡದಾದ ಕಾಡಿನೊಳಗೆ ನಿನ್ನ ಠಾವೆಹೆಡ್ಡ ನೀನು ಪೊದರಿನೊಳಗೆ ವಾಸಿಸುವೆ ಪೊದರಿನಿಂದ ಪೊದರ ಬಳಿಗೆ ನಿನ್ನ ಆಟಗಿಡದ ಚಿಗುರು ನಿತ್ಯ ನಿನಗೆ ಸೊಗಸಿನೂಟ ಗಿಡ್ಡ ಬಾಲ ದೊಡ್ಡ ಕಿವಿಯು ನಿನಗೆ ಚಂದ ಎದ್ದು ಎನ್ನ ಬಳಿಗೆ ಬಂದು ಆಡೋ ಕಂದಾ ಗೂಡು ಕಟ್ಟಿ ತಿಂಡಿ ಕೊಡುವೆ ಪ್ರೀತಿಯಿಂದಾ ಕಾಡ ಬಿಟ್ಟು ಗೂಡು ಸೇರೋ ಮೊಲದ ಕಂದಾ ಮುದ್ದು ಮುದ್ದು ಮಾತುಗಳನು ನಿನಗೆ ಕಲಿಸುವೆಮುದ್ದು ಮಾಡಿ ಪ್ರೀತಿಯಿಂದ ನಿನ್ನ ಸಲಹುವೆ...

Monday, February 23, 2009

ರುದ್ರಾಕ್ಷಿ ಪ್ರದರ್ಶನ!!!

"ಶಿವರಾತ್ರಿ ಪ್ರಯುಕ್ತ ಬೆಂಗಳೂರಿನ ಬಸವಭವನದಲ್ಲಿ ’ರುದ್ರಾಕ್ಷಿ ಪ್ರದರ್ಶನ ಮತ್ತು ಮಾರಾಟ’ ವನ್ನು ಏರ್ಪಡಿಸಲಾಗಿದೆ. ನಿಮ್ಮ ಜನ್ಮ ದಿನಾಂಕದ ಪ್ರಕಾರ ನೀವು ಯಾವ ರುದ್ರಾಕ್ಷಿಯನ್ನು ಧರಿಸಬೇಕೆಂದು ತಿಳಿಸುತ್ತಾರೆ, ಅಲ್ಲದೆ ಅತ್ಯಪರೂಪವಾದ ನೀಪಾಳದ "ಏಕಮುಖಿ" ರುದ್ರಾಕ್ಷಿಯ ದರ್ಶನ ಪಡೆದು ನಿಮ್ಮೆಲ್ಲಾ ಪಾಪಗಳಿದ ಮುಕ್ತಿ ಹೊಂದಬಹುದು" ಎಂಬ ಜಾಹೀರಾತನ್ನು ಪೇಪರಿನಲ್ಲಿ ಓದಿ ಕುತೂಹಲ ಉಂಟಾಯಿತು. ರುದ್ರಾಕ್ಷಿಯ ಬಗ್ಗೆ ನನಗೆ ಹೆಚ್ಚೇನೂ ಗೊತ್ತಿರಲಿಲ್ಲ. ಅವುಗಳಲ್ಲಿ ಹೀಗೆಲ್ಲಾ ಮುಖಗಳು ಇರುತ್ವಾ ಅಂತ ಹೇಮಂತರನ್ನು ಕೇಳಿದಾಗ ಅವರು ಪುಟ್ಟ ಲೆಕ್ಚರೇ ಕೊಟ್ಟರು. ರುದ್ರಾಕ್ಷಿ ಮರದ ಬಟಾನಿಕಲ್ ಹೆಸರು:Elaeocarpus sphaericus. ಸುಮಾರು ೩೫-೪೦ ಅಡಿ ಎತ್ತರದ ಮರ. ನೋಡಲು ಮಾವಿನ ಮರದ ಹಾಗೆ...

Thursday, February 12, 2009

ಸೀರೆಯುಟ್ಟ ಚೋರಿ!!!

ನನ್ನ ಸೋದರತ್ತೆಯ ಮಗನ ಮದ್ವೆಗೆ ಪುಟ್ಟಿಗೂ ಒಂದ್ ಪುಟ್ಟ್ ಸೀರೆ ಉಡಿಸಿ ಮೆರೆಸಿದ್ವಿ. ಒಂದ್ ಚೂರು ಗಲಾಟೆ ಮಾಡದೆ ಸಿಂಗಾರ ಮಾಡಿಸ್ಕೊಂಡು ಅವಳೂ ಖುಶಿ ಪಟ್ಲು. ಆಮೇಲೆ ಮದುವೆ ಮನೆ ತುಂಬಾ ಓಡಾಡಿ ಕೊಂಡಿದ್ದು ಎಲ್ಲರ ಮನ ಗೆದ್ಲು:) ಪುಟ್ಟ್ ದೊಂದು ಸೀರೆ ಉಟ್ಟ್ಕೊಂಡುಹೊಟ್ಟೆನೆಲ್ಲ ತೋರ್ಸ್ ಕೊಂಡುಪುಟ್ಟ್ ಪುಟ್ಟ್ ಹೆಜ್ಜೆಯಿಟ್ಟು ಬಂದ್ಲು ಪೋರಿಎಲ್ಲರ್ ಮನ್ಸನ್ನು ಗೆದ್ದು ಓಡಿದ್ಲು ಚೋರಿ...

Sunday, February 08, 2009

ಮಲಗು ಕಂದ ಮಲಗು

ಹರಿವಲಹರಿ ಬ್ಲಾಗ್-ನಲ್ಲಿ ಸುಪ್ತ ದೀಪ್ತಿಯವರು ಬರೆದ ಈ ಪದ್ಯ ನಂಗೆ ಬಹಳ ಇಷ್ಟ. ಮಲಗು ಮಲಗು ಪುಟ್ಟ ಮಗುಮಲಗು ನನ್ನ ಮುದ್ದು ಮಗು ಅಳದಿರು ನೀನು ಬಿಕ್ಕಳಿಸಿ ಅಪ್ಪುವೆ ನಿನಗೊಂದು ಮುತ್ತಿರಿಸಿ ಅತ್ತು ಸುತ್ತಿ ಹೊರಳದಿರುಅರಚಿ ಪರಚಿ ಕಿರುಚದಿರು ನಿದಿರಾದೇವಿ ಬರುತಿಹಳುನಿನ್ನಯ ಕಣ್ಣಲೇ ಕೂರುವಳುಚಂದಿರ ಮಾಮ ಬಂದಿಳಿವಚಂದದ ಊರಿಗೆ ಕರೆದೊಯ್ಯುವ ತಾರೆಗಳೊಡನೆ ನೀ ಆಡು ತಾರೆಯ ತೋಟದಿ ನಲಿದಾಡು ನಿದಿರೆ ಮುಗಿಸಿ ನೀ ಎದ್ದಾಗನನ್ನಯ ಅರಸಿ ಬಂದಾಗಚಿನ್ನಾರಿ ಚೆಲುವೆಗೆ ಹಾಲ್ಕೊಡುವೆಚೆನ್ನಾದ...