Wednesday, February 25, 2009

ಮೊಲದ ಮರಿ!!

ಹೆಬ್ಬಾಳದಲ್ಲಿ ಪ್ರಥಮ ಜಾನುವಾರು, ಕುಕ್ಕುಟ ಮತ್ಸ್ಯ ಮೇಳ ನಡೆದಾಗ ಪುಟ್ಟಿಗೆ ಪ್ರಾಣಿ-ಪಕ್ಷಿಗಳನ್ನು ತೋರಿಸೋಕೆ ಅಂತ ಅವರಪ್ಪ ಅವಳನ್ನ ಕರ್ಕೊಂಡ್ ಹೋಗಿದ್ರು. ಅವಳು ಮೊಲಗಳನ್ನು ನೋಡಿ ಖುಶಿ ಪಟ್ಟಿದ್ದು ಹೀಗೆ.



ಮೊಲದ ಮರಿ ಮೊಲದ ಮರಿ ಆಡ ಬಾರೆ
ಚುಪಕೆ ಚುಪಕೆ ಚುಪಕೆ ಚುಪಕೆ ನೆಗೆದು ಬಾರೆ
ದೊಡ್ಡದಾದ ಕಾಡಿನೊಳಗೆ ನಿನ್ನ ಠಾವೆ
ಹೆಡ್ಡ ನೀನು ಪೊದರಿನೊಳಗೆ ವಾಸಿಸುವೆ
ಪೊದರಿನಿಂದ ಪೊದರ ಬಳಿಗೆ ನಿನ್ನ ಆಟ
ಗಿಡದ ಚಿಗುರು ನಿತ್ಯ ನಿನಗೆ ಸೊಗಸಿನೂಟ
ಗಿಡ್ಡ ಬಾಲ ದೊಡ್ಡ ಕಿವಿಯು ನಿನಗೆ ಚಂದ
ಎದ್ದು ಎನ್ನ ಬಳಿಗೆ ಬಂದು ಆಡೋ ಕಂದಾ
ಗೂಡು ಕಟ್ಟಿ ತಿಂಡಿ ಕೊಡುವೆ ಪ್ರೀತಿಯಿಂದಾ
ಕಾಡ ಬಿಟ್ಟು ಗೂಡು ಸೇರೋ ಮೊಲದ ಕಂದಾ
ಮುದ್ದು ಮುದ್ದು ಮಾತುಗಳನು ನಿನಗೆ ಕಲಿಸುವೆ
ಮುದ್ದು ಮಾಡಿ ಪ್ರೀತಿಯಿಂದ ನಿನ್ನ ಸಲಹುವೆ
ಮೊಲದ ಮರಿ ಮೊಲದ ಮರಿ ಆಡ ಬಾರೆ
ಚುಪಕೆ ಚುಪಕೆ ಚುಪಕೆ ಚುಪಕೆ ನೆಗೆದು ಬಾರೆ
-- ಕೆಮ್ತೂರು ದೊಡ್ಡಣ್ಣ ಶೆಟ್ಟಿ

ಮೊಲದ ಮರಿ ಹಾಡು ಕೇಳಲು ಇಲ್ಲಿ ಕ್ಲಿಕ್ಕಿಸಿ.

2 comments:

ವಾಹ್! ಸೂಪರ್,

ಮೊಲದ ಹಾಡು ಕೇಳಿದೆ...ತುಂಬಾ ಖುಷಿಯಾಯ್ತು...

ಪುಟ್ಟಿ ಮೊಲ ನೋಡಿ enjoy ಮಾಡಿದ್ದು ವಿಡಿಯೋದಲ್ಲಿ ಚೆನ್ನಾಗಿದೆ...

ಶಿವು,
ನಮ್ಮೊಂದಿಗೆ ಹಾಡು ಕೇಳಿ ನೀವೂ ಎಂಜಾಯ್ ಮಾಡಿದ್ದು ತಿಳಿದು ಖುಶಿ ಆಯ್ತು!

Post a Comment