ಹರಿವಲಹರಿ ಬ್ಲಾಗ್-ನಲ್ಲಿ ಸುಪ್ತ ದೀಪ್ತಿಯವರು ಬರೆದ ಈ ಪದ್ಯ ನಂಗೆ ಬಹಳ ಇಷ್ಟ.
ಮಲಗು ಮಲಗು ಪುಟ್ಟ ಮಗು
ಮಲಗು ನನ್ನ ಮುದ್ದು ಮಗು
ಮಲಗು ನನ್ನ ಮುದ್ದು ಮಗು
ಅಳದಿರು ನೀನು ಬಿಕ್ಕಳಿಸಿ
ಅಪ್ಪುವೆ ನಿನಗೊಂದು ಮುತ್ತಿರಿಸಿ
ಅತ್ತು ಸುತ್ತಿ ಹೊರಳದಿರು
ಅರಚಿ ಪರಚಿ ಕಿರುಚದಿರು
ಅರಚಿ ಪರಚಿ ಕಿರುಚದಿರು
ನಿದಿರಾದೇವಿ ಬರುತಿಹಳು
ನಿನ್ನಯ ಕಣ್ಣಲೇ ಕೂರುವಳು
ಚಂದಿರ ಮಾಮ ಬಂದಿಳಿವ
ಚಂದದ ಊರಿಗೆ ಕರೆದೊಯ್ಯುವ
ತಾರೆಗಳೊಡನೆ ನೀ ಆಡು
ತಾರೆಯ ತೋಟದಿ ನಲಿದಾಡು
ನಿದಿರೆ ಮುಗಿಸಿ ನೀ ಎದ್ದಾಗ
ನನ್ನಯ ಅರಸಿ ಬಂದಾಗ
ಚಿನ್ನಾರಿ ಚೆಲುವೆಗೆ ಹಾಲ್ಕೊಡುವೆ
ಚೆನ್ನಾದ ಆಟಿಕೆ ಕೈಲಿಡುವೆ
ಇದು ಪುಟ್ಟಿ ಎಂಟು ತಿಂಗಳ ಮಗುವಾಗಿದ್ದಾಗ ತೆಗೆದ ಫೋಟೋ. 

1 comments:
chenadada padya!!
Post a Comment