Monday, August 31, 2009

ಓಡಿ ಬಾ ಓಡೋಡಿ ಬಾ - ಚಕ್ರತೀರ್ಥ

ಈ ಇಬ್ಬರು ಬಾಲನಟರು ಯಾರು ಗೊತ್ತಾ?ಚಕ್ರತೀರ್ಥ (1967) - ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಟಿ.ಜಿ.ಲಿಂಗಪ್ಪ ಗಾಯನ: ಬಿ.ಕೆ.ಸುಮಿತ್ರ ಮತ್ತು ಬೆಂಗಳೂರು ಲತಾ. ಝೂಟ್.......ಹಾಹಾಹಾಹಹ ಹಾಹಾ...ಲಲಲಲಲಲಾಲಾ ಓಡಿ ಬಾ ಓಡೋಡಿ ಬಾ ಚಿನ್ನ ನನ್ನ ಬೆನ್ನ ಹಿಂದೆ ಓಡಿ ಬಾಓಡುವೇ ನಾ ಓಡುವೇ ಜಿಂಕೆ ಹಾಗೆ ಓಡೀ ನಿನ್ನಾ ಕೂಡುವೇಓಡಿ ಬಾ..ಝೂಟ್... ಮಣ್ಣಿನಿಂದ ಕಪ್ಪೆಗೂಡು ಕಟ್ಟಬಲ್ಲೆಯಾಅಲ್ಲಿ ನೀನು ಕಪ್ಪೆಯೊಂದ ಸಾಕಬಲ್ಲೆಯಾಕಣ್ಣು ಮುಚ್ಚಿ ನನ್ನಾ ಹಿಡಿಯಬಲ್ಲೆಯಾನಾ ಹಾರೆದಂತೆ ದೂರ ನೀನು ಹಾರಬಲ್ಲೆಯಾ...ಝೂಟ್... ನನ್ನಾ ರೀತಿ ರೆಂಬೆ ಹತ್ತಿ ನೀನು ನೋಡುವಾನನ್ನಾ ಸಾಟಿ ಕುಂಟೊಬಿಲ್ಲೇ ಆಡು ನೋಡುವಾಸುತ್ತಿ ಸುತ್ತಿ ಲಾಗಾ ಹಾಕು ಅಮ್ಮಯ್ಯಾಈ ಕೋತಿಯಾಟ ದೊಂಬರಾಟ ಬೇಡ ದಮ್ಮಯ್ಯಾ...ಝೂಟ್......

Sunday, August 30, 2009

ಗಣಪನ ಹಬ್ಬ!!!

ನಾವು ಗಣೇಶ ಹಬ್ಬಕೆಂದು ಮಣ್ಣಿನ ವಿಗ್ರಹ ಮಾಡುವಾಗ ಪುಟ್ಟಿ ತಾನೂ ಜೊತೆಯಲ್ಲಿ ಕುಳಿತು ಮಣ್ಣಿನಲ್ಲಿ ’ತಪಾತಿ(ಚಪಾತಿ)’ ಇತ್ಯಾದಿಗಳನ್ನು ಮಾಡಿದ್ಲು. ಕೊನೆಗೆ ಅಮ್ಮ ಮಾಡಿದ ವಿಗ್ರಹ ನೋಡಿ ಮೊದಲು ’ಆನಿ ಆನಿ’ ಅಂದಳಾದರೂ ನಂತರ "ಓಂ" ಅಂತ ಕೈ ಮುಗಿದಳು, ಸದ್ಯ ಅದು ಅವಳ ಕಣ್ಣಿಗೂ ಗಣಪನಂತೆ ಕಾಣಿಸಿತಲ್ಲ ಅಂದುಕೊಂಡ್ವಿ! ನಾವು ಇದಕ್ಕೆ ಮೊದಲು ಮಾಡಿದ ವಿಗ್ರಹಗಳ ಫೋಟೋ ಇಲ್ಲಿವೆ.ಹಬ್ಬದ ದಿನವಂತೂ ದಿನವಿಡೀ ಸಂಭ್ರಮದಿಂದ ಓಡಾಡುತ್ತಿದ್ದು, ಮದ್ಯಾಹ್ನ ನಿದ್ದೆಯನ್ನೂ ಸರಿಯಾಗಿ...

Thursday, August 27, 2009

ಅಂದ ಚೆಂದದ ಹೂವೆ

ನಾಲ್ಕು ತಿಂಗಳ ಕಂದ!ಅಂದ ಚೆಂದದ ಹೂವೆಮಮತೆಯ ಮಗುವೆತಾಯ್ಮಡಿಲ ತುಂಬಿರುವಪ್ರೇಮದ ಫಲವೆಈ ಮನೆಯ ದೀಪವಾಗಿರುವೆ ಅಂದ ಚೆಂದದ ಚೆಲುವೆಓಲವಿನ ಹೂವೆಹೃದಯ ಮಂದಿರದಲ್ಲಿನೀ ಬೆಳಗುತ್ತಿರುವೆಮನಕೆ ಆನಂದ ತಂದಿರುವೆ ನಿನ್ನ ಕಣ್ಣ್ ಬೆಳಕಿಂದಮನವು ಬೆಳಗಿಹುದುನಿನ್ನ ಕಿರು ನಗುವಿಂದಹರುಷ ಮೂಡಿಹುದುನಿನ್ನುದಯದಿಂದಮನೆ ಸ್ವರ್ಗ ತಾನಾಗಿಹುದುತಾಯಾದ ಭಾಗ್ಯವುನನ್ನದಾಗಿಹುದು ಅಂದ ಚೆಂದದ ಹೂವೆಮಮತೆಯ ಮಗುವೆತಾಯ್ಮಡಿಲ ತುಂಬಿರುವಪ್ರೇಮದ ಫಲವೆಈ ಮನೆಯ ದೀಪವಾಗಿರುವೆ ನಿನ್ನ ಕಣ್ಣ್ ಬೆಳಕಿನಲಿನಾ...

Friday, August 21, 2009

ಗಣಪನಿಂದ ಆಗದಿರಲಿ ಪರಿಸರಕ್ಕೆ ಲೋಪ!!

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು!!ಗಣೇಶ ಹಬ್ಬ ಬಂತೆಂದ್ರೆ ಈಮೈಲ್, ಆರ್ಕುಟ್, ಬ್ಲಾಗ್, ಫೇಸ್ಬುಕ್, ಟ್ವಿಟ್ಟರ್, ಎಲ್ಲೆಲ್ಲೂ ಹಬ್ಬದ ಶುಭಾಶಯಗಳ ಸುರಿಮಳೆ.:)ಹಬ್ಬ ಮುಗಿದಮೇಲೆ ಮುಂಬೈಯಲ್ಲಿ ಅರ್ಧಂಬರ್ಧ ಮುಳುಗಿದ/ ಮುರಿದ ಮೂರ್ತಿಗಳ ಫೋಟೋ ಮತ್ತು ವಿಗ್ರಹಗಳಲ್ಲಿ ಉಪಯೋಗಿಸುವ ಬಣ್ಣಗಳಲ್ಲಿರುವ ಲೆಡ್ ಮತ್ತಿತರೆ ರಾಸಾಯನಿಕಗಳಿಂದ ಆಗುವ ಹಾನಿಗಳ ಕುರಿತು ಹಲವು forward ಮೈಲ್ ಗಳು !!ಇದು ಪ್ರತಿವರ್ಷ ನಡಿಯುತ್ತಲೇ ಇದೆ. ಆದರೆ ಪರಿಸರಪ್ರೇಮಿ ಗಣಪನ ವಿಗ್ರಹಗಳು ಈಗ ಹೆಚ್ಚು ಜನಪ್ರಿಯವಾಗಿದೆ. ಯಾವುದೇ ಬಣ್ಣವಿಲ್ಲದೇ ಅಥವಾ ತರಕಾರಿ/ಹೂವುಗಳಿಂದ ತಯಾರಿಸಲಾದ ಬಣ್ಣಗಳಿಂದ ಅಲಂಕರಿಸಲ್ಪಟ್ಟ ಮೂರ್ತಿಗಳು ಈಗ ಎಲ್ಲೆಲ್ಲೂ ಸಿಗುತ್ತವೆ. ತಲಹಸಿ ಅಂತಹ ಸಣ್ಣ ಊರಿನಲ್ಲೂ ಈಗ ಇವು ಲಭ್ಯವಿದೆ....

Tuesday, August 18, 2009

ಎಲ್ಲರ ಮನೆಯ ಬಾಲ ಮುಕುಂದರು...

ಬೆಣ್ಣೆ ಕದ್ದ ನಮ್ಮ ಪುಟ್ಟಿ ಕೃಷ್ಣ.. ಪಿಳ್ಳಂಗೋವಿಯ ಚೆಲುವ ಕೃಷ್ಣಪುಟ್ಟಿಯ ಸೋದರ ಮಾವನ ಮಗಳು ’ಖುಶಿ’ ...ಜೋ ಜೋ ಶ್ರೀಕೃಷ್ಣ ಪರಮಾನಂದತೂಗುವೆ ರಂಗನ ತೂಗುವೆ ಕೃಷ್ಣನ...”ಶಕ್ತಿ’ ’ನನ್ನಕಂದ’ ಬ್ಲಾಗಿನ... ಕಂದಾ ಓ ನನ್ನ ಕಂದ ಕೃಷ್ಣಾ ಮುಕುಂದ...ಎರಡು ತಿಂಗಳ ಮಗು ’ಅಮೇಯ” ಈತನೀಗ ವಾಸುದೇವನು...'ದಿಶಾ’ಗುಮ್ಮನ ಕರೆಯದಿರೆ ಅಮ್ಮಆರೂವರೆ ತಿಂಗಳ ಮುದ್ದು ’ಶಿಶಿರ್’ನ ಅಮ್ಮ ಹಾಡಿದ್ದು ’ಉಂಡಾಡಬಹುದು ಓಡಿ ಬಾ ಎನ್ನಪ್ಪ..ಕೃಷ್ಣ ನೀ ಬೇಗನೆ ಬಾರೋ.. ಸಮೀಕ್ಷಾಎಂಟು ತಿಂಗಳ...

Wednesday, August 12, 2009

ಚೂರಿ ಚಿಕ್ಕಣ್ಣ!

ಸಣ್ ಪುಟ್ ಕಳ್ಳಾ ಬಂದ ನೋಡಿ ಮಳ್ಳಾಹೇಳೋದಿಲ್ಲ ಸುಳ್ಳಾಇವನಲ್ಲ ಕುಳ್ಳಾ!ಕೈಯಲ್ಲಿ ಚೂರಿಕುಯ್ಯಲು ಪೂರಿನಗು ಮುಖ ತೋರಿಇಲ್ಲಿಂದ ಪರಾರಿ!!ಕದಿವನು ಮನವಲುಂಗಿಯ ಸುತ್ತಿದವಊ ಹಾ ಹ್ಹಾ ಎನ್ನುವಚೂರಿ ಚಿಕ್ಕಣ್ಣನಿವ!!!-ರೂpaश्री...

Tuesday, August 11, 2009

ಕವನಕ್ಕೆ ಶೇಪ್!!

ಕೆಲವು ದಿನಗಳ ಹಿಂದೆ ಡಿಸೈನರ್ ಕವಿತೆಗಳ ಬಗ್ಗೆ ಬರೆದಿದ್ದೆ. ಅದನ್ನೋದಿದ ಸ್ನೇಹಿತರು ಅದೇ ರೀತಿ ಪ್ರಯತ್ನಿಸಲು ಉತ್ತೇಜಿಸಿದರು. ನನ್ಗೆ ಕವನ ಬರಿಯೋಕೇ ಬರೋಲ್ಲ ಅಂಥದ್ರಲ್ಲಿ ಶೇಪ್ಡ್ ಕವಿತೆ ಇನ್ನೆಲ್ಲಿ ಅಂತ ನನ್ನ್ ಪಾಡಿಗೆ ಸುಮ್ನಿರೋದು ಬಿಟ್ಟು, ಅವರಿವರ ಕವನಕ್ಕೆ ಶೇಪ್ ಕೊಡೋಣ ಅಂತ ಕೂತೆ.ಮೊದಲು ಸುಬ್ರಮಣ್ಯ ಭಟ್ಟರ ಮೀನು ನನ್ನ ಕೈಸೇರಿ ಹೀಗಾಯ್ತು...(ಕವನದ ಮೇಲೆ ಕ್ಲಿಕ್ ಮಾಡಿದ್ರೆ ದೊಡ್ಡದಾಗಿ ತೆರೆದುಕೊಳ್ಳುತ್ತೆ, ಓದಲು ಸುಲಭ)ಇದು ಸ್ವಲ್ಪ ಸುಮಾರಾಗಿ ಮೂಡಿದ್ದರಿಂದ...

ಪುಟ್ಟ್ ಸಿಂಗ್!!

ಪಚಾಸ್ ಪಚಾಸ್ ಕೋಸ್ ದೂರ್ ಗಾವ್ ಮೇ ಜಬ್ ಬಚ್ಚಾ ರೋತಾ ಹೈ ತೋ ಮಾ ಕೆಹ್ತಿ ಹೈ "ಬೇಟಾ ಸೋಜಾ, ವರ್ನ ಪುಟ್ಟ್ ಸಿಂಗ್ ಆ ಜಾಯೇಗಿ"ಊಹಹ್ಹಾಹ...