Thursday, August 27, 2009

ಅಂದ ಚೆಂದದ ಹೂವೆ

ನಾಲ್ಕು ತಿಂಗಳ ಕಂದ!

ಅಂದ ಚೆಂದದ ಹೂವೆ
ಮಮತೆಯ ಮಗುವೆ
ತಾಯ್ಮಡಿಲ ತುಂಬಿರುವ
ಪ್ರೇಮದ ಫಲವೆ
ಈ ಮನೆಯ ದೀಪವಾಗಿರುವೆ

ಅಂದ ಚೆಂದದ ಚೆಲುವೆ
ಓಲವಿನ ಹೂವೆ
ಹೃದಯ ಮಂದಿರದಲ್ಲಿ
ನೀ ಬೆಳಗುತ್ತಿರುವೆ
ಮನಕೆ ಆನಂದ ತಂದಿರುವೆ

ನಿನ್ನ ಕಣ್ಣ್ ಬೆಳಕಿಂದ
ಮನವು ಬೆಳಗಿಹುದು
ನಿನ್ನ ಕಿರು ನಗುವಿಂದ
ಹರುಷ ಮೂಡಿಹುದು
ನಿನ್ನುದಯದಿಂದ
ಮನೆ ಸ್ವರ್ಗ ತಾನಾಗಿಹುದು
ತಾಯಾದ ಭಾಗ್ಯವು
ನನ್ನದಾಗಿಹುದು

ಅಂದ ಚೆಂದದ ಹೂವೆ
ಮಮತೆಯ ಮಗುವೆ
ತಾಯ್ಮಡಿಲ ತುಂಬಿರುವ
ಪ್ರೇಮದ ಫಲವೆ
ಈ ಮನೆಯ ದೀಪವಾಗಿರುವೆ

ನಿನ್ನ ಕಣ್ಣ್ ಬೆಳಕಿನಲಿ
ನಾ ಮೀಯುತಿರುವೆ
ನಿನ್ನ ಕಿರುನಗುವಿನಲಿ
ನಾ ನಲಿಯುತಿರುವೆ
ನೀ ಬಂದು ಈ ಮನೆಯ
ಸ್ವರ್ಗಗವನೇ ಮಾಡಿರುವೆ
ನನ್ನ ಬಾಳಿನ ಭಾಗ್ಯ
ತಾರೆಯಾಗಿರುವೆ

ಅಂದ ಚೆಂದದ ಚೆಲುವೆ
ಓಲವಿನ ಹೂವೆ
ಹೃದಯ ಮಂದಿರದಲ್ಲಿ
ನೀ ಬೆಳಗುತ್ತಿರುವೆ
ಮನಕೆ ಆನಂದ ತಂದಿರುವೆ

8 comments:

ತು೦ಬಾ ಒಳ್ಳೇ ಹಾಡು. ನಾನು ಕೇಳಿರಲೇ ಇಲ್ಲ.
ಜೊತೆಗೆ ಪುಟ್ಟಿಯ ಮುದ್ದಾದ ಚಿತ್ರ(ಹೇಳೋದೆ ಬೇಡ. :-)

ಅಬ್ಬಾ ಮಗುವಿನ ಮೇಲೆ ಬ್ಲಾಗ ಮಾಡಿ ಏನೆಲ್ಲ ಬರೆದಿದ್ದೀರಿ, ಮಗಳು ದೊಡ್ಡವಳಾದ ಮೇಲೆ ಹೆಮ್ಮೆ ಪಡ್ತಾಳೆ. ಪುಟಾಣಿ ಪುಟ್ಟಿಯ ಕೃಷ್ಣವೇಷವೂ ಚೆನ್ನಾಗಿತ್ತು. ಪುಟ್ಟಿ ಇನ್ನೂ ಹೆಚ್ಚು ಹೆಚ್ಚು ಸಾಧನೆ ಮೈಲಿಗಲ್ಲುಗಳನ್ನು ದಾಟಲಿ... ಹೀಗೆ ಬರೀತಾ ಇರಿ.

ಸೀತಾರಾಮ್ ಅವರೆ,
ಈ ಹಳೆ ಹಾಡುಗಳೆಲ್ಲ ನಮ್ಮ ತಾಯಿಯವರು ಗುನುಗುನಾಯಿಸ್ತಾಯಿರ್ತಾರೆ, ಹಾಗಾಗಿ ನನಗೆ ಪರಿಚಿತ. ಇವನ್ನು ಯೂಟ್ಯೂಬಿನಲ್ಲಿ ಏರಿಸಿದವರಿಗೆ ಥ್ಯಾಂಕ್ಸ್!

ಪ್ರಭು ಅವರೆ,
ಮಕ್ಕಳ ಬ್ಲಾಗ್ ಬಹಳಷ್ಟಿವೆ ಸಾರ್, ನೀವು ’ನಿಮ್ಮಾK' ಜೊತೆ ಬಿಜಿಯಾದ್ದರಿಂದ ನಿಮಗೆ ತಿಳಿದಿಲ್ಲದಿರಬಹುದು;)
ಹೆಚ್ಚಾಗಿ ಮಕ್ಕಳ ಬ್ಲಾಗ್ ಆಂಗ್ಲದಲ್ಲಿವೆ. ಕನ್ನಡದಲ್ಲಿರುವುದು ’ನಿಶುಮನೆ’ ’ನಂದಗೋಕುಲ’ ’ನವನೀತ’ ಇತ್ಯಾದಿ... ನಾನು ಈ ಬ್ಲಾಗ್ ಶುರು ಮಾಡಿದ್ದು ಕನ್ನಡದಲ್ಲಿರುವ ಕಂದ ಪದ್ಯಗಳನ್ನು ಕಲಿಯಲು/ ಒಂದೆಡೆ ಕೂಡಿಹಾಕಲು!
ನಿಮ್ಮ ಹಾರೈಕೆಗಳಿಗೆ ವಂದನೆಗಳು:)

ನಿಮ್ಮ ಮಗಳು ತುಂಬಾ ಮುದ್ದಾಗಿದಾಳೆ ಈ ಫೋಟೊದಲ್ಲಿ.. ಹಾಡು ಇಷ್ಟ ಆಯ್ತು.. ಆದ್ರೆ ಹಾಡಿಗಿಂತ ಜಾಸ್ತಿ ನಿಮ್ಮ ಪುಟ್ಟಿ ಫೋಟೊ :-)

ಹಾಡಿಗಿಂತ ಹೆಚ್ಚಾಗಿ ನನ್ನ ಪುಟ್ಟಿಯ ಫೋಟೋ ಇಷ್ಟಪಟ್ಟಿದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್ ಮಂಜುಳಾ ಅವರೆ!
ನಿಮ್ಮ ನಂದನವನದಲ್ಲೂ ಹೊಸ ಹೊಸ ಹಾಡು/ ವಿಡಿಯೋಗಳನ್ನು ನೋಡಲು ಕಾಯುವೆವು:)

Post a Comment