Sunday, August 30, 2009

ಗಣಪನ ಹಬ್ಬ!!!

ನಾವು ಗಣೇಶ ಹಬ್ಬಕೆಂದು ಮಣ್ಣಿನ ವಿಗ್ರಹ ಮಾಡುವಾಗ ಪುಟ್ಟಿ ತಾನೂ ಜೊತೆಯಲ್ಲಿ ಕುಳಿತು ಮಣ್ಣಿನಲ್ಲಿ ’ತಪಾತಿ(ಚಪಾತಿ)’ ಇತ್ಯಾದಿಗಳನ್ನು ಮಾಡಿದ್ಲು. ಕೊನೆಗೆ ಅಮ್ಮ ಮಾಡಿದ ವಿಗ್ರಹ ನೋಡಿ ಮೊದಲು ’ಆನಿ ಆನಿ’ ಅಂದಳಾದರೂ ನಂತರ "ಓಂ" ಅಂತ ಕೈ ಮುಗಿದಳು, ಸದ್ಯ ಅದು ಅವಳ ಕಣ್ಣಿಗೂ ಗಣಪನಂತೆ ಕಾಣಿಸಿತಲ್ಲ ಅಂದುಕೊಂಡ್ವಿ! ನಾವು ಇದಕ್ಕೆ ಮೊದಲು ಮಾಡಿದ ವಿಗ್ರಹಗಳ ಫೋಟೋ ಇಲ್ಲಿವೆ.

ಹಬ್ಬದ ದಿನವಂತೂ ದಿನವಿಡೀ ಸಂಭ್ರಮದಿಂದ ಓಡಾಡುತ್ತಿದ್ದು, ಮದ್ಯಾಹ್ನ ನಿದ್ದೆಯನ್ನೂ ಸರಿಯಾಗಿ ಮಾಡದೆ ಅಮ್ಮನಿಗೆ ಹೆಲ್ಪ್ ಮಾಡುತ್ತಿದ್ದು ಹಬ್ಬ ಮಾಡಿದ್ದು ಹೀಗೆ...

ಮಣ್ಣಿನ ಗಣಪನ
ವಿಗ್ರಹ ಮಾಡಿ
ಸುಂದರ ಪೀಠದಿ ಕುಳ್ಳಿರಿಸಿ
ಗಣಪನ ಕೊರಳಿಗೆ
ಕಡಲೆ ಹಾರವ ಹಾಕಿ
ಸುಂದರ ರಂಗೋಲಿಯ ಬಿಡಿಸಿ

ಕರಿದ ಕಡುಬು
ಮೋದಕ ಹುಸಲಿ
ಎಲ್ಲವ ಗಣಪನ ಮುಂದಿಡಲು

ಹಿರಿಯರು ಕಿರಿಯರು
ಮಕ್ಕಳು ಮುದುಕರು
ಗೆಳೆಯರೆಲ್ಲ ಮನೆಗೆ ಬಂದಿರಲು
ಆರತಿ ಬೆಳಗಿ
ಅಕ್ಷತೆ ಹಾಕಿ
ಪೂಜೆಯ ಮಾಡಿ ಕೈಮುಗಿದು
ಅಪ್ಪನೊಡನೆ ಕೂಡಿ
ಜಯ್ ಜಯ್ ಹಾಡಿ
ಗಣಪನ ವಿಸರ್ಜಿಸಲು ಹಬ್ಬವು ಮುಗಿದಿತ್ತು!

-ರೂpaश्री

ಗಣಪನ ಮುಂದೆ ಶಕ್ತಿ ಮತ್ತು ಶ್ರೀನಾ ಜೊತೆ..
ವಿಘ್ನೇಷ್ವರ ನಿನಗೆ ಇಪ್ಪತ್ತೊಂದು ನಮಸ್ಕಾರಗಳು!
ಅಕ್ಕ-ತಮ್ಮ ಅನಿಶಾ ಅಮೋಘ್ ಮತ್ತು ಶಕ್ತಿ!
ಗೀತಿಕಾ ಅಕ್ಕ!ರಿಂಗಾ ರಿಂಗಾ ರೋಸಸ್ಸ್

4 comments:

Nice celebration Roopashree. keep it up.

Putti habbana friends jothege chennagi acharisidaale. nimma hosa book shelf tumba ishta ayitu.

Vidya,
hoon habbada khushi namaginta eega avarugaLige hecchu:)
bookshelf ishta aaytu andidakke thanks!

Post a Comment