Tuesday, October 20, 2009

ಬೆಳಕನು ಚೆಲ್ಲಿ ಬಂದೇ ಬಂತು ದೀಪಾವಳಿ..

ಎರಡು ದಿನ ಅಪ್ಪನಿಗೆ ರಜೆಯಿದ್ದರಿಂದ ಪುಟ್ಟಿ ಈ ವರ್ಷ ದೀಪಾವಳಿಯನ್ನ ತುಂಬಾನೇ ಖುಶಿಯಾಗಿ ಆಚರಿಸಿದ್ಲು. ಅಮ್ಮಬಣ್ಣ ಬಣ್ಣದ ದೀಪಗಳನ್ನ ಮಾಡೊವಾಗ ಜೊತೆಯಲ್ಲಿ ಕುಳಿತು ತಾನೂ ’ತಪಾಚಿ(ಚಪಾತಿ)’ ’ಬಾಲ್’ ಇತ್ಯಾದಿ ಮಾಡುತ್ತಾ, ಮಾಡಿದ ಮಣ್ಣಿನುಂಡೆಯನ್ನ ಬಾಯಿಗೆ ಹಾಕಲು ಹೋಗಿ ಅಮ್ಮನಿಂದ ಬೈಯಿಸಿಕೊಂಡಿದ್ದು ಎಲ್ಲಾ ಆಯ್ತು.ಹಬ್ಬದ ದಿನ ದೀಪಗಳನ್ನ ಹಚ್ಚಿದ್ದು ಹೀಗೆ..ಸುರು ಸುರು ಸುರ್ ಸುರ್ಬತ್ತಿ ಹಚ್ಚಿದ್ದು ಹೀಗೆ !ಕಳೆದ ವರ್ಷದ ಹಬ್ಬದ ಫೋಟೋ... ...

Thursday, October 15, 2009

ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು!

ಮನೆ ಮನವ ಬೆಳಗಲು ಮತ್ತೆ ಬಂದಿದೆ ದೀಪಾವಳಿ. ಅಜ್ಞಾನದ ಅಂಧಕಾರ ಅಳಿಸಿ, ಅರಿವನು ಅರಳಿಸುವ ಹಣತೆಗಳು ಎಲ್ಲೆಲ್ಲೂ ಬೆಳಗಲಿ:)ವಾರಾಂತ್ಯದಲ್ಲಿ ಬಂದಿರುವುದರಿಂದ ಗೆಳೆಯರ ಜೊತೆಗೂಡಿ ಹಬ್ಬ ಆಚರಿಸಬಹುದು. ಕಳೆದ ವರ್ಷ ನನ್ನ ಕೆಲವು ಸ್ನೇಹಿತೆಯರು ಮಾಡಿದ್ದ ಬಣ್ಣಬಣ್ಣದ ದೀಪಗಳ ಫೋಟೋ ಮತ್ತೆ ಕೆಲವು ದೀಪಾವಳಿ ಹಾಡುಗಳನ್ನು ಇಲ್ಲಿ ಹಂಚಿಕೊಂಡಿದ್ದೆ. ಈ ವರ್ಷ ನಾನೂ ಕೂಡ ಮಕ್ಕಳಾಟದ ಮಣ್ಣಿನಿಂದ(Play Dough) ಕೆಲವು ದೀಪಗಳನ್ನು ಮಾಡಿರುವೆ ನೋಡಿ!ಹಾಗೆಯೆ, ನಿಂತು ಹೋಗಿರುವ...

Wednesday, October 14, 2009

ಮಣಿ ಮಣಿ ಮಣಿ ಮಣಿ ಮಣಿಗೊಂದು ದಾರ

ಮಣಿ ಮಣಿ ಮಣಿ ಮಣಿ ಮಣಿಗೊಂದು ದಾರದಾರದ ಜೊತೆ ಮಣಿ ಸೇರಿ ಚೆಂದದೊಂದು ಹಾರತಾನಿ ತಂದಾನ ತಂದನ ತಂದಾನ ತಂದನ ತಂದಾನ ನ... ಒಂದು ಒಗಟಿನಂತೆ, ಸವಾಲ್-ಜವಾಬ್ ಎಂಬಂತಿರುವ "ಜನುಮದ ಜೋಡಿ" ಚಿತ್ರದ ಈ ಹಾಡು ನನಗಿಷ್ಟ:)ಇಲ್ಲಿ ಈಗ ನಿಧಾನಕ್ಕೆ ಛಳಿ ಶುರುವಾಗ್ತಾಯಿದೆ. ಇನ್ನ್ಮೇಲೆ ಪುಟ್ಟಿನ ಹೊರಗೆ ಕರ್ಕೊಂಡು ಹೋಗೋದು ಕಷ್ಟ. ಮನೆಯಲ್ಲೇ ಹೊಸ ಹೊಸ ಆಟ ಆಡಿಸ್ಬೇಕು. ಜೊತೆಗೆ ಅವಳ ಕೈ ಬೆರೆಳುಗಳಿಗೆ ಒಳ್ಳೆ ಎಕ್ಸರ್ಸೈಸ್ ಕೂಡ ಆಗಬೇಕು ಅಂತ ಮೊನ್ನೆ ಅವಳಿಗೆ ಒಂದು ಶೂ ಲೇಸ್ ಕೊಟ್ಟು,...

Monday, October 05, 2009

ಪುಟ್ಟಿಯ ಅಕ್ಷರಾಭ್ಯಾಸ !!

ಪುಟ್ಟಿಗೆ ಅಕ್ಷರಾಭ್ಯಾಸ ಮಾಡಿಸಲು ಅಟ್ಲಾಂಟ ದೇವಸ್ಥಾನಕ್ಕೆ ಹೋಗೋಣ ಅಂತ ಎಲ್ಲಾ ಸಿದ್ದತೆ ಮಾಡಿಕೊಂಡಿದ್ವಿ. ಆದ್ರೆ ಅದೇ ಸಮಯಕ್ಕೆ ಮೂರೂ ಜನ ಫ್ಲೂ ಬಂದು ಮಲಗಿ, ಎದ್ದಿದ್ದರಿಂದ ವಿಜಯದಶಮಿಯ ದಿನ ಸಿಂಪಲ್ಲಾಗಿ ಮನೆಯಲ್ಲೇ ಸರಸ್ವತಿಯ ಪೂಜೆ ಮಾಡಿ ಅವಳ ಕೈಯಲ್ಲಿ ಅಕ್ಕಿಯ ಮೇಲೆ "ಓಂ" ಬರೆಸಿದ್ರು ಹೇಮಂತ್:) v\:* {behavior:url(#default#VML);} o\:* {behavior:url(#default#VML);} w\:* {behavior:url(#default#VML);} .shape {behavior:url(#default#VML);}...