Monday, October 05, 2009

ಪುಟ್ಟಿಯ ಅಕ್ಷರಾಭ್ಯಾಸ !!



ಪುಟ್ಟಿಗೆ ಅಕ್ಷರಾಭ್ಯಾಸ ಮಾಡಿಸಲು ಅಟ್ಲಾಂಟ ದೇವಸ್ಥಾನಕ್ಕೆ ಹೋಗೋಣ ಅಂತ ಎಲ್ಲಾ ಸಿದ್ದತೆ ಮಾಡಿಕೊಂಡಿದ್ವಿ. ಆದ್ರೆ ಅದೇ ಸಮಯಕ್ಕೆ ಮೂರೂ ಜನ ಫ್ಲೂ ಬಂದು ಮಲಗಿ, ಎದ್ದಿದ್ದರಿಂದ ವಿಜಯದಶಮಿಯ ದಿನ ಸಿಂಪಲ್ಲಾಗಿ ಮನೆಯಲ್ಲೇ ಸರಸ್ವತಿಯ ಪೂಜೆ ಮಾಡಿ ಅವಳ ಕೈಯಲ್ಲಿ ಅಕ್ಕಿಯ ಮೇಲೆ "ಓಂ" ಬರೆಸಿದ್ರು ಹೇಮಂತ್:)

ನವರಾತ್ರಿಯ ಮರು ದಿನ ಅಂದರೆ ವಿಜಯ ದಶಮಿಯಂದು ಮಗುವಿಗೆ ’ಅಕ್ಷರಾಭ್ಯಾಸಮಾಡಿಸುವ ರೂಢಿಯಿದೆ. ಮಗು ಶಿಶು ರೂಪದಲ್ಲಿ ಈ ಜಗತ್ತಿಗೆ ಪ್ರವೇಶಿಸಿದೊಡನೆಯೇ ಯಾರೂ ಕಲಿಸದೆ ಅಮ್ಮಾಅನ್ನುತ್ತದೆ. ಅಳುವಿನ ಮೂಲಕ ಅನ್ನದ ರೂಪದಲ್ಲಿರುವ ಶಕ್ತಿಯನ್ನು ಸಾಕ್ಷಾತ್ಕರಿಸಿಕೊಳ್ಳುತ್ತದೆ. ಇದು ಮಗುವಿನ ದೇಹ ಬೆಳೆಸುತ್ತದೆ. ಆದರೆ ಆತ್ಮಸಾಕ್ಷಾತ್ಕಾರಕ್ಕೆ ಜ್ಞಾನ ಬೇಕು. ಅದು ಅಕ್ಷರ ರೂಪದಲ್ಲಿ ಲಭಿಸುತ್ತದೆ. ವಿಜಯದಶಮಿಯಂದು ವಿದ್ಯಾದೇವಿ ಶಾರದೆಯ ಮುಂದೆ ಜ್ಞಾನದ ಲೋಕಕ್ಕೆ ಹಾದಿ ಸುಗಮವಾಗುವುದು ಎಂದು ಅನಾದಿಕಾಲದಿಂದ ನಮ್ಮಲ್ಲಿರುವ ನಂಬಿಕೆ. ವಿದ್ಯಾರಂಭ ಎಂದರೆ ಅಜ್ಞಾನದ ಕತ್ತಲಿನಿಂದ ಸುಜ್ಞಾನದ ಬೆಳಕಿನೆಡೆಗೆ ಒಯ್ಯುವ ಅಕ್ಷರಾಭ್ಯಾಸ ಎಂದಷ್ಟೇ ಅರ್ಥ. ಇಂದಿನ ಕಂಪ್ಯೂಟರ್ ರೋಬೋಟ್ ಯುಗದಲ್ಲೂ ಅಕ್ಷರಾಭ್ಯಾಸ ಅಷ್ಟೇ ನಿಷ್ಠೆ, ಭಕ್ತಿಯಿಂದ ನಡೆಯುತ್ತಿದೆ. ಮಾತಾಪಿತೃಗಳ ಮೂಲಕ ಲೌಕಿಕ ಬದುಕಿಗೆ ಅಡಿಯಿಡುವ ಮಗು, ವಿದ್ಯಾರಂಭದಂದು ದೇವರ ಇನ್ನೊಂದು ರೂಪವಾದ ಗುರುದರ್ಶನವನ್ನು ಪಡೆಯುತ್ತದೆ. ಗುರು ಸಾಧನೆಯ ಹಾದಿಯಲ್ಲಿ ಮಾರ್ಗದರ್ಶನ ಮಾಡುತ್ತಾನೆ.

ಕಾಗದ, ಸ್ಲೇಟು-ಬಳಪಗಳಿಲ್ಲದೆ ಪುರಾತನ ಶೈಲಿಯಂತೆ ನೆಲದಲ್ಲಿ ಮರಳು ಹರಡಿ ಮಗುವಿನ ಬಲಗೈಯ ತೋರು ಬೆರಳಿನಲ್ಲಿಓಂ’, ಶ್ರೀ’, ‘ಓಂ ಗಣಪತಯೇ ನಮಃಎಂದು ಬರೆಸಿ, ಬಳಿಕ ಆಯಾ ಭಾಷೆಯ ಅಕ್ಷರ ಮಾಲೆಯನ್ನು ಬರೆಸುತ್ತಾರೆ. ಆದರೆ ಮಗುವಿನ ಎಳಸು ಕೈಗಳಿಗೆ ನೋವಾಗದಿರಲೆಂದು ಹೊಸ ಹರಿವಾಣದಲ್ಲಿ ಇರಿಸಿದ ಹೊಸ ಅಕ್ಕಿಯ ಮೇಲೆ ಬೆರಳಿಂದ ಬರೆಯಿಸಿಯೂ ವಿದ್ಯಾರಂಭ ಮಾಡಿಸುವ ಈಗ ಬಳಕೆಯಲ್ಲಿದೆ.

-ಪ್ರಜಾವಾಣಿಯಲ್ಲಿ ಪ್ರಕಟಕೊಂಡಿದ್ದ ಲೇಖನ

7 comments:

ಇನ್ನು ಪುಟ್ಟಿಯ ಅ೦ಕಣದ ಬರಹಗಳನ್ನ ಅವಳೇ ಬರೆಯುತ್ತಾಳೆ. ಅಮ್ಮನ ಸಹಾಯ ಬೇಡ :-)

Good information roopa .I didn't know much about
akshara-abhyasa.Thankyou & best wishes to Putti.She must be excited to learn and write.
She's looking very cute in 'langa'.

putti ge aksharabhyasa madisidra, so inmele putti vidhyabhyasa shuru. my best wishes to putti:) I hope that putti will learn to read and write kannada and will some day write here in her blog:)

ಸೀತಾರಾಮ್ ಅವರೆ,
ನೀವು ಹೇಳಿದಂತೆ ಆದ ದಿನ ನನ್ನೀ ಬ್ಲಾಗಿಗೆ ನಿಜವಾದ ಅರ್ಥ ಬರುತ್ತೆ!!

Thanks so much for ur wishes and encouragement shruthi:))
btw, that article is from prajavani !

Thank you vidya for ur wishes!! I too wish that ur words come true... thats the basic idea for this blog right? :)

All the very best to putti:)

Post a Comment