ಇವತ್ತು ಬೆಳಗ್ಗೆ ತಿಂಡಿಗೆ ರೊಟ್ಟಿ ತಿನ್ನೋವಾಗ ಹೇಮಂತ್ ಒಂದೂವರೆ ತಿಂದು ನಂಗೆ ಸಾಕಾಯ್ತು ಅಂದ್ರು. ನಾನು ಇನ್ನರ್ಧ ತಿನ್ನಿ ಅಂದೆ. ಅವರು ಸುಮ್ನೆ ಯಾಕೆ ನಂಗೆ ಬಲವಂತ ಮಾಡ್ತೀಯ ಬೇಡ ಅಂದ್ರು. ನಾನು ಸುಮ್ಮನಿರದೆ, ಅರ್ಧ ರೊಟ್ಟಿ ಹೆಚ್ಚೇನಾಗೊಲ್ಲ ತಿನ್ನಿ ಅಂತ ವತ್ತಾಯಿಸುತ್ತಿದ್ದೆ. ಅಡುಗೆಮನೆಲಿ exhaust fan ಓಡ್ತಾಯಿದ್ದರಿಂದ ಸ್ವಲ್ಪ ಧ್ವನಿ ಏರಿಸಿ ಮಾತಾಡುತ್ತಿದ್ದೆ. ಅವರೂ ಬೇಡ ಬೇಡ ಅಂತನೇ ಇದ್ದ್ರು. ಅಷ್ಟ್ರಲ್ಲಿ ತನ್ನ ಡ್ರಾಯಿಂಗ್ ಟೇಬಲ್ ನಲ್ಲಿ ತಿಂಡಿ ತಿನ್ನುತ್ತಿದ್ದ ಪುಟ್ಟಿ ಬಂದು “ಅಪ್ಪ ಸುಮ್ನೆ ರೊಟ್ಟಿ ತಿನ್ನು, ಅಮ್ಮ ಕೊಟ್ಟಿದ್ದು ನಾನು ತಿಂತಾಯಿಲ್ಲ(ತಿಂತಾಯಿಲ್ವಾ) ಹಂಗೆ ತಿನ್ನು” ಅಂತಂದ್ಲು. ಆಹಾ! ನನ್ನ ಖುಶಿಗೆ ಮಿತಿಯೇ ಇರಲಿಲ್ಲJ
4 comments:
ಆಹಾ! ಚೋಟು ಯಜಮಾನ್ತಿಯ ಮಾತು ಕೇಳಿ, ಹೇಮಂತ್ ಸದ್ದಿಲ್ಲದೆ ರೊಟ್ಟಿ ಮುಗಿಸಿರಬೇಕು!!
ಅಡ್ಡಿ ಇಲ್ಲ! ಹೇಮಂತಗೆ ಇನ್ನೊಂದು ರಿಮೋಟು!
ನೀಲ್ಗಿರಿ ಅವರೆ,
ಹ್ಹ ಹ್ಹ ಹೌದು ಈಗ ಮನೆಯಲ್ಲಿ ಅವಳದೇ ಯಜಮಾನಿಕೆ!
ನೀವೆಲ್ಲಿ ಪತ್ತೆನೇ ಇಲ್ಲ. ಬಿಜಿ ಅನ್ಸುತ್ತೆ.
ಸೀತಾರಾಮ್ ಸರ್,
ಹೇಮಂತ್ ಗೆ ಮಾತ್ರವಲ್ಲ ನನಗೂ:) ನಮ್ಮಿಬ್ಬರಿಗೂ:-)
Post a Comment