ಪುಟ್ಟಿ ಬರೆದಿರುವ ಪೂರ್ಣ ಮತ್ತು ಅರ್ಧ ಚಂದ್ರ :)
ಬಾ ಬಾ ಚಂದು ಮಾಮ
ಮುತ್ತು ಕೊಡು ಬಾ
ಕಬ್ಬು ಹೆಚ್ಚಿ ತಿರುಳೇ ಕೊಡುವೆ
ಮಾವು ಹೆಚ್ಚಿ ವಾಟೀ ಕೊಡುವೆ
ಬಾಬಾ ಚಂದು ಮಾಮ
ತಿಂಡಿ ತಿನ್ನು ಬಾ
ಕೌಲಿ ಹಾಲು ಕರೆಯಿಸಿ ಕೊಡುವೆ
ಹಾಲು ಕುಡಿಯಲು ಬಟ್ಟಲು ಕೊಡುವೆ
ಬಾ ಬಾ ಚಂದು ಮಾಮ
ಹಾಲು ಕುಡಿ ಬಾ
ತುಪ್ಪದ ದೀಪ ಹಚ್ಚಿ ಇಡುವೆ
ಪುಟ್ಟ ಪುಸ್ತಕ ಓದಲು ಕೊಡುವೆ
ಬಾ ಬಾ ಚಂದು ಮಾಮ
ಪಾಠ ಓದು ಬಾ
ಆಟದ ಸಾಮಾನೆಲ್ಲಾ ಕೊಡುವೆ
ನಿನ್ನ ಸಂಗಡ ಆಡುತಲಿರುವೆ
ಬಾಬಾ ಚಂದು ಮಾಮ ಬಾ
ಕೂಡಿ ಆಡು ಬಾ
-ಹೊಯಿಸಳ
3 comments:
ಪುಟ್ಟಿ ಅಂಕಣದಲ್ಲಿ ಸುಂದರ ಶಿಶು ಗೀತೆ ಚಂದಮಾಮನ ಕುರಿತು!
ಧನ್ಯವಾದಗಳು.
tumba sundara geete
ಚೆನ್ನಾಗಿದೆ.... :-)
Post a Comment