ಪುಟ್ಟಿ ಶಾಲೆಯಲ್ಲಿ ನಿನ್ನೆ ಭಾನುವಾರ ’ಮಲ್ಟಿ ಕಲ್ಚರ್ ಡೇ’ ಆಚರಿಸಿದರು. ಎಲ್ಲರೂ ಅವರವರ ದೇಶದ ಉಡುಗೆ ತೊಟ್ಟು ಹೋಗಬೇಕಿತ್ತು. ಪುಟ್ಟಿ ಎಂದಿನಂತೆ ಉತ್ಸಾಹದಿಂದ ಸಿಂಗರಿಸಿಕೊಂಡು ಹೊರಟಳು. ಅಲ್ಲಿ ಎಲ್ಲಾ ಮಕ್ಕಳಿಂದ ಒಂದು ಸಣ್ಣ ಕಾರ್ಯಕ್ರಮವೂ ಇತ್ತು. ಅದರ ವಿಡಿಯೋ ತುಣುಕು.....ನಮ್ಮ ತ್ರಿರಂಗ..ನೆಚ್ಚಿನ ಐರೀನ್ ಜೊತೆಯಲ್ಲಿ...ಇದಾದ ನಂತರ ಎಲ್ಲರ ಜೊತೆಗೂಡಿ ಊಟ ಮಾಡುವ ಕಾರ್ಯಕ್ರಮ. ಎಲ್ಲರೂ ಅವರವರ ದೇಶದ ಒಂದು ಅಡಿಗೆಯನ್ನು ತಂದಿದ್ದರು. ಇದೊಂದು ತರಹ ವಿಶೇಷ...