
ಅಜ್ಜಿ-ತಾತನ ಊರು ಅಂದ್ರೆ ಎಲ್ಲರಿಗೂ ವಿಶೇಷವಾದ ಪ್ರೀತಿಯಿರುತ್ತೆ. ೩ ವರ್ಷದವಳಿದ್ದಾಲೇ ಅಜ್ಜಿ-ತಾತರನ್ನು ಕಳೆದುಕೊಂಡ ನನಗೆ ನಮ್ಮ್ ತಾತನ ಊರಿನ ಬಗ್ಗೆ ಪ್ರೀತಿ ಹುಟ್ಟಲು ಕಾರಣವೇ ಅಲ್ಲಿರುವ ದೇವಸ್ಥಾನ. ನನ್ನ ತಾತನ (ತಂದೆಯ ತಂದೆ) ಊರು ಮಂಡ್ಯ ಜಿಲ್ಲೆಯಲ್ಲಿರುವ ಹೊಸಹೊಳಲು, ಹೊಯ್ಸಳ ಶೈಲಿಯ ಗುಡಿಯಿರುವ ಊರು. 'ಹೊಳಲು' ಅಂದರೆ ಹಳೆಗನ್ನಡದಲ್ಲಿ ಪಟ್ಟಣವೆಂದು. ಊರಿನಲ್ಲಿರೋ ಶಿಲಾಶಾಸನದ ಪ್ರಕಾರ 1125 ADಯಲ್ಲಿ ವೀರ ಗಂಗನರಸಿಂಹ ಬಲ್ಲಾಳರ ಕಾಲದಲ್ಲಿ ನೊಳಂಬ ಶೆಟ್ಟಿ...