Thursday, June 11, 2009

ಯಾವ ತಾಯಿಯು ಹಡೆದ ಮಗಳಾದರೇನು - ಬಿಳಿ ಹೆಂಡ್ತಿ

ಎಂ.ಜೆ.ಎಂ. ಪ್ರೊಡಕ್ಷನ್ಸ್ ಅವರ, ಮ.ನ.ಮೂರ್ತಿಯವರ ಕಾದಂಬರಿ ಆಧಾರಿತ ಚಿತ್ರ ’ಬಿಳಿ ಹೆಂಡ್ತಿ’ ಯಲ್ಲಿರೋ ಈ ಹಾಡು ನನ್ನ ನೆಚ್ಚಿನ ಗೀತೆಗಳಲ್ಲೊಂದು.
ಸಾಹಿತ್ಯ : ವಿಜಯನರಸಿಂಹ
ಸಂಗೀತ : ವಿಜಯಭಾಸ್ಕರ್
ಗಾಯನ : ಕಸ್ತೂರಿ ಶಂಕರ್

ಯಾವ ತಾಯಿಯು ಹಡೆದ ಮಗಳಾದರೇನು
ಕನ್ನಡಾಂಬೆಯ ಮಡಿಲ ಹೂವಾದೆ ನೀನು
ಯಾವ ತಾಯಿಯು ಹಡೆದ ಮಗಳಾದರೇನು
ಕನ್ನಡಾಂಬೆಯ ಮಡಿಲ ಹೂವಾದೆ ನೀನು
ಯಾವ ತಾಯಿಯು ಹಡೆದ ಮಗಳಾದರೇನು

ಈ ತಾಯ ಕರುಣೆಯ ತಂಪಿನಲಿ
ಈ ತಾಯ ಕಣ್ಣಿನ ಕಾಂತಿಯಲಿ
ಈ ತಾಯ ಬಂಧನದ ರಕ್ಷೆಯಲ್ಲಿ
ಈ ತಾಯ ಬಂಧನದ ರಕ್ಷೆಯಲ್ಲಿ
ಈ ಮನೆಗೆ ನೀನಾಗು ಕಲ್ಪವಲ್ಲಿ
ಯಾವ ತಾಯಿಯು ಹಡೆದ ಮಗಳಾದರೇನು

ಈ ಮನೆಯ ಭಾಗ್ಯದ ಬಾಗಿಲಲ್ಲಿ
ಈ ಮನೆಯ ಧರ್ಮದ ದೀಪದಲ್ಲಿ
ಈ ಮನೆಯ ಪ್ರೀತಿಯ ಗೀತೆಯಲ್ಲಿ
ಈ ಮನೆಯ ಪ್ರೀತಿಯ ಗೀತೆಯಲ್ಲಿ
ಈ ಮನೆಗೆ ನೀನಾಗು ಕಲ್ಪವಲ್ಲಿ
ಯಾವ ತಾಯಿಯು ಹಡೆದ ಮಗಳಾದರೇನು

ಈ ಬಾಳ ಪೂಜೆಯ ರಾಶಿಯಲ್ಲಿ
ಈ ಬಾಳ ಹಾದಿಯ ಸಂಗಮದಲ್ಲಿ
ಈ ಬಾಳ ಹಾಡಿನ ಪಲ್ಲವಿಯಲ್ಲಿ
ಈ ಮನೆಗೆ ನೀನಾಗು ಕಲ್ಪವಲ್ಲಿ
ಯಾವ ತಾಯಿಯು ಹಡೆದ ಮಗಳಾದರೇನು
ಕನ್ನಡಾಂಬೆಯ ಮಡಿಲ ಹೂವಾದೆ ನೀನು
ಯಾವ ತಾಯಿಯು ಹಡೆದ ಮಗಳಾದರೇನು


7 comments:

ಬಿಳಿಹೆ೦ಡ್ತಿ ಚಿತ್ರದ ಸು೦ದರ ಹಾಡನ್ನು ಕೇಳುವ/ಓದುವ ಅವಕಾಶ ಒದಗಿಸಿದ್ದಕ್ಕೆ thanks.

ರೂಪಶ್ರಿ,
ಕಳಿಸಿದ್ದಕ್ಕೆ ಧನ್ಯವಾದಗಳು, ಹಳೆಯ ಹಾಡುಗಳು ಮನಕೆ ಇಂಪು ಮಾತ್ರವಲ್ಲ ಒಂದು ಅವ್ಯಕ್ತ ಭಾವನೆಯನ್ನು ಜಾಗ್ರತಗೊಳಿಸುತ್ತವೆ.

ರೂಪ,

ಬಿಳಿಹೆಂಡ್ತಿ ಒಂದು ಚೆಂದದ ಸಿನಿಮಾ...ಮತ್ತು ಅದರಲ್ಲಿನ ಈ ಹಾಡಂತೂ ತುಂಬಾ ಇಷ್ಟವಾದದ್ದು...ಇದನ್ನು ಮತ್ತೆ ಇಲ್ಲಿ ಕೇಳಿಸಿದ್ದಕ್ಕೆ ಧನ್ಯವಾದಗಳು.

olleya haadannu kottiddakke dhanyavadagaLu

ಸುಂದರವಾದ ಹಾಡನ್ನು ನೆನಪುಮಾಡಿ ಕೇಳಿಸಿರುವಿರಿ. ಧನ್ಯವಾದಗಳು. ಕನ್ನಡಿಗರ ಔದಾರ್ಯ, ವಿಶಾಲ ಹೃದಯ, ಎಲ್ಲರನ್ನೂ ಒಳಗೊಳ್ಳುವ ಮನಸ್ಸು ಈ ಹಾಡಲ್ಲಿ ಪ್ರತಿಬಿಂಬಿತವಾಗಿದೆ.

ಆಗಿನ ಹಾಡುಗಳು ಎಷ್ಟು ಅರ್ಥಪೂರ್ಣವಾಗಿರುತ್ತಿದ್ದವು. ಆದರೆ ಈಗೀಗ ಪರವಾಗಿಲ್ಲ, ಹೊಸ ಹಾಡುಗಳೂ ಅನೇಕ ಕೇಳುವಂತಹವೇ ಬರುತ್ತಿವೆ ಮತ್ತೆ. ನನ್ನ ಬ್ಲಾಗಿನಲ್ಲಿ ಕನ್ನಡ ಚಿತ್ರಗಳಲ್ಲಿ ಬಳಸಿದ ಇತರ ಭಾಷೆ ಗೀತೆಗಳ ಬರೆದಿದ್ದು ನೀವು ಓದಿದ್ದೀರಿ.

ನನ್ನಂತೆಯೇ ಈ ಹಾಡನ್ನು ಮೆಚ್ಚಿ, ಪ್ರತಿಕ್ರಿಯಿಸಿದ ನಿಮಗೆಲ್ಲರಿಗೂ ಧನ್ಯವಾದಗಳು!! ತಡವಾಗಿ ಉತ್ತಿರಿಸಿದಕ್ಕೆ ಕ್ಷಮೆಯಿರಲಿ...

Post a Comment