Monday, June 22, 2009

ಟೋಪಿ ಬೇಕಾ ಟೋಪಿ!!

ಪುಟ್ಟಿ ಈಗ ಹೊರಗೆ ಹೊರಟಲು ಅಂದ್ರೆ ತಲೆಗೊಂದು ಟೋಪಿ, ಕಣ್ಣಿಗೆ ಗಾಗಲ್ಸ್ ಬೇಕೆ ಬೇಕು. ಟೋಪಿ ಹಾಕೋವರ್ಗೂ ಮನೆಯಿಂದ ಹೊರೊಡೋಲ್ಲ ಅಂತಾಳೆ, ’ತೋಪಿ ತೋಪಿ’ ಅಂತ ತಲೆ ಮೇಲೆ ಬೆರೆಳಿಟ್ಟು ಕೇಳುತ್ತಾಳೆ.


ಅವಳ ಟೋಪಿ ಆಟ ನನ್ಗೆ ಚಿಕ್ಕಂದಿನಲ್ಲಿ ನಾವು ಆಡ್ತಾಯಿದ್ದ ಟೋಪಿ ಆಟ ನೆನಪು ಮಾಡಿಸ್ತು. ನಾವು ಮಕ್ಕಳೆಲ್ಲಾ ವೃತ್ತಕಾರವಾಗಿ ನೆಲದ ಮೇಲೆ ಕೂರೋದು. ನಮ್ಮಲೊಬ್ಬರು ಕರ್ಛೀಪ್/ಟೋಪಿ ಅನ್ನು ಕೈಯಲ್ಲಿ ಹಿಡಿದು ಕುಳಿತವರ ಸುತ್ತ ಗುಂಡಗೆ ಸುತ್ತು ಹಾಕಲಾರಂಭಿಸುತ್ತಾ ಹಾಡೋದು.... ಕುಳಿತ ನಾವು ಒಕ್ಕೊರಳಿನಿಂದ ಉತ್ತರ ಕೊಡೋದು

ಟೋಪಿ ಬೇಕಾ ಟೋಪಿ
ಎಂತಹ ಟೋಪಿ
ಚಿನ್ನದ/ಬಣ್ಣದ ಟೋಪಿ
ಎಷ್ಟು ರೂಪಾಯಿ
ಸಾವಿರ ರೂಪಾಯಿ
ಬೇಡ ಬೇಡ
ಒಂದು ರೂಪಾಯಿ
ನಂಗೆ ಬೇಕೀಗಾ
ಎಲ್ಲರೂ`ನಂಗೇ... ನಂಗೇ' ಅಂತ ಕೂಗಿದಾಗ ಎಲ್ಲರಿಗೂ ಬೆನ್ನು ಬಗ್ಗಿಸಿ ತಲೆಯನ್ನು ನೆಲಕ್ಕಿಡಲು ಹೇಳೋದು. ನಂತರ ಯಾರಾದರೊಬ್ಬರ ಮೇಲೆ ತನ್ನ ಕೈಲಿದ್ದ ಕರ್ಛೀಪ್ ಅನ್ನು ಹಾಕಿ ಓಡೋದು . ಹೀಗೆ ಕರ್ಛೀಪ್/ಟೋಪಿ ಯಾರಿಗೆ ಸಿಕ್ಕುತ್ತೊ ಅವರು ಅದನ್ನು ಹಿಡಿದು ತನಗೆ ಟೋಪಿ ಹಾಕಿದವನ/ಳ ಹಿಂದೆ ಓಡೋದು. ಮೊದಲನೆಯವರು ಟೋಪಿ ಹಾಕಿಸಿಕೊಂಡವರ ಜಾಗದಲ್ಲಿ ಕೂರುವ ಮುನ್ನ ಅವರನ್ನು ಮುಟ್ಟಿಸಬೇಕು. ಹಾಗೆ ಮುಟ್ಟಿಸಲಾಗದಿದ್ದರೆ ಟೋಪಿ ಹಾಕಿಸಿಕೊಂಡವ `ಟೋಪಿ ಬೇಕೆ ಟೋಪಿ ...' ಅಂತ ಸುತ್ತು ಹಾಕುತ್ತಾ ಆಟ ಮೊದಲಿಂದ ಶುರುವಾಗುತ್ತದೆ. ಚಿಕ್ಕಂದಿನಲ್ಲಿ ನಾವುಗಳು ಗಂಟಾನುಗಟ್ಟಲೆ ಆಡುತ್ತಿದ್ದ ಬೇಜಾರೇ ಬರದ ಸಖತ್ತು ಖುಶಿಯ ಆಟದ ಈ ಸವಿ ನೆನಪಿನ ಜೊತೆಗೆ ಪುಟ್ಟಿಯ ಕೆಲವು ಟೋಪಿ ಫೋಟೋಗಳು...
ಹುಟ್ಟಿದ ಮೊದಲೆರ‍ಡು ತಿಂಗಳು..

ಪಾರ್ಟಿ ಟೋಪಿ...ಕುಂಬಳ ಟೋಪಿ!!
ಛಳಿ ಛಳಿ ಟೋಪಿ
ಕ್ರಿಸ್ಮಸ್ ಟೋಪಿ!


ಪುಟ್ಟ್ ತಲೆಗೊಂದ್ ದೊಡ್ಡ್ ಹೆಲ್ಮೆಟ್...

ಬಣ್ಣ ಬಣ್ಣದ ಟೋಪಿ...


8 comments:

ಎಷ್ಟೊಂದು ಬಗೆ ಬಗೆಯ ಟೋಪಿಗಳು....
ಪುಟ್ಟಿಗೆ ತೊಡಿಸಿ ಸಂಭ್ರಮಿಸುವ ನಿಮಗೆ ಅಭಿನಂದನೆಗಳು..
ಖುಷಿಯಾಗುತ್ತದೆ...

ಪುಟ್ಟಿಗೆ ಒಂದು ದ್ರ್‍ಅಷ್ಟಿ ಬೊಟ್ಟು ಇಟ್ಟುಬಿಡಿ...

ವಂದನೆಗಳು ಪ್ರಕಾಶ್ ಅವರೆ! ಮನೆಯಲ್ಲಿದ್ದಾಗ ಪುಟ್ಟಿಗೆ ಮತ್ತೆ ನನಗೆ ಹೊತ್ತು ಕಳೆಯಲು ಹೀಗೆ ಏನಾದ್ರೂ ಮಾಡ್ತಾಯಿರ್ತೀವಿ:)

waah eshtondu variety toip putti hatra!!

abba, putti hatra ententa Topi ide!!! TOpi anta yeshtu muddagi heLta idaaLe :) video noDi khushi ayitu.

Lpot of hats.
Putti is so cute.
yelli nangondu topi kodu putti

Vidya,

illi kelavu dress jotege topi, goggles ella set aagi sigutte alwa.. thanks:)

Thanks sitaram avare:) puTTi ge ee haaDu balu ishta tOpi bekaa Topi..

Post a Comment