Tuesday, September 29, 2009

ಕಂದ ಕಣ್ಮಣಿಯೆ ಜೋ ಜೋ...

ಚಿತ್ರ: ಬಾಲ ನಾಗಮ್ಮ (1966)ರಚನೆ: ಚಿ.ಉದಯಶಂಕರ್ಸಂಗೀತ: ಎಸ್.ರಾಜೇಶ್ವರ ರಾವ್ಗಾಯಕಿ : ಎಲ್.ಆರ್.ಈಶ್ವರಿ ಕಂದ ಕಣ್ಮಣಿಯೆ ಅಮ್ಮನ ಅರಗಿಣಿಯೆ ಓ ರಾಜ.....ಹೂವಿನ ಹಾಸಿಗೆಯ ಹಾಸುವೆನು ತೂಗುವೆನುಜೋ ಜೋ ಹಾಡುವೆನುಕಂದ ಕಣ್ಮಣಿಯೆ ಅಮ್ಮನ ಅರಗಿಣಿಯೆ ಓ ರಾಜ.....ಮೋಡದ ತೆರೆಯಿಂದ ಚಂದಿರ ಕೈಚಾಚಿನಿನ್ನನು ಕರೆಯುತಿಹ ನಗುತ ವಿನೋದದಿಮೋಡದ ತೆರೆಯಿಂದ ಚಂದಿರ ಕೈಚಾಚಿನಿನ್ನನು ಕರೆಯುತಿಹ ನಗುತ ವಿನೋದದಿಕೊಡುವ ತಾರೆಗಳ ಆಡಲಿಕ್ಕೆ ಎನುತಿರುವಕಂದ ಕಣ್ಮಣಿಯೆ ಅಮ್ಮನ ಅರಗಿಣಿಯೆ ಓ ರಾಜ......ಅಮ್ಮನ ಪೂಜೆಗಳ ಪುಣ್ಯದ ರೂಪ ನೀಅಮ್ಮನ ಸಂಕಟವ ಹರಿಸಲು ಬಂದಿರುವಅಮ್ಮನು ಪೂಜೆಗಳ ಪುಣ್ಯದ ರೂಪ ನೀಅಮ್ಮನ ಸಂಕಟವ ಹರಿಸಲು ಬಂದಿರುವಮಗುವೆ ಶಂಕರನು ನಿನ್ನನು ತಾ ಪಾಲಿಸಲಿಕಂದ ಕಣ್ಮಣಿಯೆ ಅಮ್ಮನ ಅರಗಿಣಿಯೆ...

Friday, September 11, 2009

ಅವ್ವ ಅಪ್ಪ ಯಾರು ಗೊತ್ತಾ ನಿಮ್ಗೆ?

ಮೊನ್ನೆ ಪುಟ್ಟಿ ಅವರಜ್ಜಿ ಜೊತೆ ಮಾತಾಡುತ್ತಿದ್ಲು. ನಾನು ಒಂದ್ ನಿಮ್ಷ ಒಳಗೆ ಹೋಗಿ ಬಂದೆ ಅಷ್ಟ್ರಲ್ಲಿ ಅಮ್ಮ ಇದೇನೆ ರೂಪ, ಪುಟ್ಟಿ ’ಅವ್ವ ಅಪ್ಪ’ ಅಂತ ಹೇಳ್ತಿದ್ದಾಳೆ ಆಗಿನಿಂದ ಅಂದ್ರು. ನನಗೂ ಆಶ್ಚರ್ಯವೆನಿಸಿ ಪುಟ್ಟಿಗೆ ಏನಮ್ಮ ಅದು ಅಂದೆ. ಅದಕ್ಕವಳು ತನ್ನ ಕೈಗಳನ್ನ ಟ್ವಿಂಕ್ಲಿಂಗ್ ಮಾಡುತ್ತಾ ’ಅವ್ವ ಅಪ್ಪ’ ಅಂದ್ಲು. ಅವಳು ೨-೩ ಸರ್ತಿ ತೋರ್ಸಿದಮೇಲೆ ಗೊತ್ತಾಯ್ತು ಅವಳು ’ಟ್ವಿಂಕಲ್ ಟ್ವಿಂಕಲ್ ಲಿಟ್ಟಲ್ ಸ್ಟಾರ್’ ರೈಮಿನ ’ಹೌ ಐ ವಂಡರ್’(ಅವ್ವ).. ಅಪ್ ಅಬೋವ್(ಅಪ್ಪ)...

Saturday, September 05, 2009

ಹಾವು ಅಂದ್ರೆ ನಮ್ಮ್ ಪುಟ್ಟಿಗೆ ದಿಗಿಲೇ ಇಲ್ವೇನೆ !!

ಪುಟ್ಟಿಗೆ ಹಾವು ಅಂದ್ರೆ ಸಾಕು ತನ್ನ ಕೈಯನ್ನ ಹಾವಿನ ಹೆಡೆಯಂತೆ ಬಾಗಿಸಿ "ಹಿಸ್ಸ್ ಹಿಸ್ಸ್" ಅಂತ ಸದ್ದು ಮಾಡುತ್ತಾ ತನ್ನನ್ನ ತಾನೆ ಕಚ್ಚಿಸಿಕೊಳ್ತಾಳೆ!! ಜೂನ್ ನಲ್ಲಿ ಜ್ಯಾಕ್ಸನ್ ವಿಲ್ಲ್ ಎಂಬ ಊರಿನ ಪ್ರಾಣಿ ಸಂಗ್ರಹಾಲಯದಲ್ಲಿ ನೋಡಿದ ಹೆಬ್ಬಾವಿದು. Normal 0 false false false MicrosoftInternetExplorer4 /* Style Definitions */ table.MsoNormalTable {mso-style-name:"Table...

Thursday, September 03, 2009

ಜೂ.. ಜೂ ...ಆಗಟ್

ಪುಟ್ಟಿಗೆ ಏನೇ ಹೊಸ ವಿಚಾರ ತೋರ್ಸಿದ್ರೂ / ಹೇಳಿಕೊಟ್ಟರೂ ಬಲು ಬೇಗ ಕಲಿತಾಳೆ. ಮಕ್ಕಳೇ ಹಾಗೆ ಅಲ್ವಾ, ಸ್ಪಂಜಿನಂತೆ ಎಲ್ಲವನ್ನೂ ತಮ್ಮೊಳಗೆ ಹೀರಿಕೊಳ್ತಾರೆ:-)ಈಗ ಬೆಳಗ್ಗಿನ ನಿದ್ದೆಯನ್ನು ಬಿಟ್ಟು ಕೇವಲ ಮದ್ಯಾಹ್ನ ಮಾತ್ರ ೧ ಘಂಟೆ ಮಲಗೋ ಪುಟ್ಟಿಯನ್ನ ಇಡೀ ದಿನ ಬಿಜಿಯಾಗಿ ಬೋರ್ ಆಗದಂತೆ ನೋಡಿಕೊಳ್ಳೊದು ನನ್ನ ಕೆಲ್ಸ! ರೈಮ್ಸ್, ಪ್ರಾಣಿಗಳ ವಿಡಿಯೋ ಹೊರತಾಗಿ ಟಿವಿಯಂತೂ ನೋಡೊದೇ ಇಲ್ಲ. ಸರಿ, ಉಳಿದಂತೆ ಅದೂ ಇದೂ ಹೇಳ್ಕೊಡ್ತಾಯಿರ್ತೀನಿ. ಪುಟ್ಟಿಗೆ ಒಮ್ಮೆ ಹೇಳ್ಕೊಟ್ಟ್ರೆ ಮತ್ತೆ ಮತ್ತೆ ಅದನ್ನೇ ಕೇಳ್ತಾಳೆ. ಅವಳು ಈಗ ದಿನಗಳ, ಮಾಸಗಳ ಮತ್ತು ಗ್ರಹಗಳ ಇಂಗ್ಲಿಷ್ ಹೆಸ್ರು ಹೇಳ್ತಾಳೆ. ಅಲ್ಲದೇ ಒಂದರಿಂದ ಹತ್ತರವರೆಗೆ ಅಂಕಿ, ಹಲವು ರೈಮ್ಸ್/ ಹಾಡು ಎಲ್ಲಾ ಗೊತ್ತು ಪುಟ್ಟಿಗೆ. ಇನ್ನು ಬರಿಯೋ...