Thursday, September 03, 2009

ಜೂ.. ಜೂ ...ಆಗಟ್

ಪುಟ್ಟಿಗೆ ಏನೇ ಹೊಸ ವಿಚಾರ ತೋರ್ಸಿದ್ರೂ / ಹೇಳಿಕೊಟ್ಟರೂ ಬಲು ಬೇಗ ಕಲಿತಾಳೆ. ಮಕ್ಕಳೇ ಹಾಗೆ ಅಲ್ವಾ, ಸ್ಪಂಜಿನಂತೆ ಎಲ್ಲವನ್ನೂ ತಮ್ಮೊಳಗೆ ಹೀರಿಕೊಳ್ತಾರೆ:-)
ಈಗ ಬೆಳಗ್ಗಿನ ನಿದ್ದೆಯನ್ನು ಬಿಟ್ಟು ಕೇವಲ ಮದ್ಯಾಹ್ನ ಮಾತ್ರ ೧ ಘಂಟೆ ಮಲಗೋ ಪುಟ್ಟಿಯನ್ನ ಇಡೀ ದಿನ ಬಿಜಿಯಾಗಿ ಬೋರ್ ಆಗದಂತೆ ನೋಡಿಕೊಳ್ಳೊದು ನನ್ನ ಕೆಲ್ಸ! ರೈಮ್ಸ್, ಪ್ರಾಣಿಗಳ ವಿಡಿಯೋ ಹೊರತಾಗಿ ಟಿವಿಯಂತೂ ನೋಡೊದೇ ಇಲ್ಲ. ಸರಿ, ಉಳಿದಂತೆ ಅದೂ ಇದೂ ಹೇಳ್ಕೊಡ್ತಾಯಿರ್ತೀನಿ. ಪುಟ್ಟಿಗೆ ಒಮ್ಮೆ ಹೇಳ್ಕೊಟ್ಟ್ರೆ ಮತ್ತೆ ಮತ್ತೆ ಅದನ್ನೇ ಕೇಳ್ತಾಳೆ. ಅವಳು ಈಗ ದಿನಗಳ, ಮಾಸಗಳ ಮತ್ತು ಗ್ರಹಗಳ ಇಂಗ್ಲಿಷ್ ಹೆಸ್ರು ಹೇಳ್ತಾಳೆ. ಅಲ್ಲದೇ ಒಂದರಿಂದ ಹತ್ತರವರೆಗೆ ಅಂಕಿ, ಹಲವು ರೈಮ್ಸ್/ ಹಾಡು ಎಲ್ಲಾ ಗೊತ್ತು ಪುಟ್ಟಿಗೆ.


ಇನ್ನು ಬರಿಯೋ ವಿಚಾರಕ್ಕೆ ಬಂದ್ರೆ ಅದು ಪುಟ್ಟಿಗೆ ಬಲು ಇಷ್ಟದ ಕೆಲ್ಸ! ಇತ್ತೀಚೆಗೆ ಅವಳ ಗೀಚುವಿಕೆ ನೇರ ಗೆರೆ ಅಥವಾ ಸೊನ್ನೆ ಸುತ್ತೋ ರೀತಿ ಕಾಣಿಸುತ್ತಿದೆ. ಅವಳು ಬರಿಯುವಾಗ ಗೆರೆ ಎಳೆದಾಗ ಒನ್/ ಒಂದು ಅಂತಲೂ .. ಸೊನ್ನೆ ಸುತ್ತಿದಾಗ ಸೊನ್ನೆ/ಜೀರೊ ಅಂತಲೂ ಹೇಳಿದ್ದಾಗಿದೆ, ಅದೀಗ ಅವಳಿಗೆ ಕರತಲಾಮಲಕ. ಕೇಳಿದಾಗ ಒನ್ ಅಥವಾ ಜೀರೋ ಬರೆದು ತೋರಿಸ್ತಾಳೆ! ಸದ್ಯದಲ್ಲೇ ಅವಲಿಗೆ ’ಅಕ್ಷರಾಭ್ಯಾಸ’ ಮಾಡಿಸೋಣವೆಂದಿದ್ದೇವೆ:)

ನಮ್ಮ್ ಪುಟ್ಟಿನ ಈಗ ಪಾಪ/ಬೇಬಿ ಅನ್ನುವಂತಿಲ್ಲ! ಹಾಗೇನಾದ್ರೂ ಅಂದ್ರೆ ತನ್ನ ಬಳಿಯಿರುವ ಗೊಂಬೆಗಳನ್ನ ತೋರಿಸಿ ಅದನ್ನ ’ಪಾಪ’ ಅಂತ ಕರಿತಾಳೆ:) ಎಷ್ಟ್ ಬೇಗ ಬೆಳ್ದ್ ಬಿಟ್ಟ್ಲು ಅನ್ನ್ಸುತ್ತೆ, ಈ ರೀತಿ ಅವ್ಳು ಹೇಳಲು ನಾವೂ ಕಾರಣ. ಅವಳಿಗೆ potty ಟ್ರೈನಿಂಗ್ ಶುರು ಮಾಡಿದಾಗಿಂದ ’ನೀನೀಗ big girl, ಡೈಪರ್ಸ್ ಬೇಬಿ ಮಾತ್ರ ಹಾಕೋದು, ನೀನು ಟಾಯ್ಲೆಟಿನಲ್ಲಿ pee, poo ಮಾಡ್ಬೇಕು’ ಅಂತೆಲ್ಲಾ ಹೇಳ್ತಾಯಿದ್ದೀವಿ.
ಏನೋ ಅಂತೂ ಪುಟ್ಟಿ ಈಗ ಹಗಲು ದೈಪರ್ಸ್ ಗೆ ’ಟಾ ಟಾ’ ಹೇಳಿದ್ದಾಳೆ. ಸುಮಾರು ೧೩ ತಿಂಗಳಿಗೇ ಡೈಪರ್ ಭಾರವೆನಿಸಿದಾಗ ಅಮ್ಮ ’ಐವಿ(heavy)' ಅಂತ ಹೇಳೋಕೆ ಶುರುಮಾಡಿದ್ಲು. ಈಗ ಸ್ವಲ್ಪ ದಿನದಿಂದ ಮನೆಯಲ್ಲಿ ಮಾತ್ರ ಅಮ್ಮನಿಗೆ ಹೇಳ್ತಾಯಿದ್ದವಳು ಈಗ ಒಂದು ವಾರದಿಂದ ಹೊರಗೆ ಅಂಗಡಿ/ ಪಾರ್ಕಿಗೆ ಹೋದ್ರೂ ಹೇಳಿ ಅಲ್ಲಿ ರೆಸ್ಟ್ ರೂಮಿನಲ್ಲಿ ಮಾಡ್ತಾಯಿದ್ದಾಳೆ. ಇನ್ನೇನಿದ್ದರೂ ರಾತ್ರಿ ಹೊತ್ತು ಮಾತ್ರ ಡೈಪರ್!!

9 comments:

ಪುಟ್ಟಿಯ ಪುಟ್ಟ ತಲೆಲ್ಲಿ ಎಲ್ಲಾ ತೂರಸ್ತಾ ಇದೀರಾ? ಇ೦ಗ್ಲಿಷ್ ಹಾಗೂ ಹಿ೦ದು ಕಾಲಮಾನಗಳನ್ನು.
ಪುಟ್ಟಿನ ಬೇಗ ದೊಡ್ಡೋಳನ್ನಾಗಿ ಮಾಡೋ ಅತುರ ನಿಮ್ಗೆ ಅನ್ಸುತ್ತೆ. ಪುಟ್ಟಿ ಹೇಳೋದು ಮುದ್ದಾಗಿದೆ.

ಚಕ್ರತೀರ್ಥ ದ ಓಡಿ ಬಾ ಗೀತೆಯ ಬಾಲನಟರು ಯಾರು ಅನ್ನೊದು ತಿಳಿಸೇ ಇಲ್ಲಾ ತಾವು. ಹಾಗೆ ಅದರಲ್ಲಿ ಕಮೆ೦ಟ್ ಮಾಡೋಕು ಅಗ್ತಾ ಇಲ್ಲ. ತಾವು ಅದನ್ನು ರೆಸ್ತ್ರಿಕ್ಟ್ ಮಾಡಿದ್ದೀರಿ ಅನ್ಸುತ್ತೆ?

very cute.. :-) how old is she now?

Hey how old is Sahitya now?? So soon she started telling things thats nice..good effort from ur side..well done..does she go to child care or play group or something like that....

--V Sapna

ಸೀತಾರಾಮ್ ಅವರೆ,
ಪುಟ್ಟಿಗೆ ಇವೆಲ್ಲಾ ಒಂದು ಆಟವಿದ್ದಂತೆ, ಕಲಿಕೆ ಅನಿಸಿಲ್ಲ.. ನನ್ನ ಉದ್ದೇಶ ಅದೇ ಅವಳಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿಸುವುದು ಅಷ್ಟೆ:)
ನಾನು ಆತುರ ಮಾಡದಿದ್ದರೂ ಅವಳೇ ಸರಸರನೆ ಬೆಳಿತಿದ್ದಾಳೆ, ಇನ್ನೇನು ೨ವರ್ಷ ಆಗುತ್ತೆ ಅಂದ್ರೆ ಎಷ್ಟ್ ಬೇಗ ಅನ್ಸುತ್ತೆ:(

ಚಕ್ರತೀರ್ಥ ಹಾಡಿನ ಬಾಲನಟರು ಯಾರು ಅನ್ನೋದು ನನಗೆ ಗೊತ್ತಿಲ್ಲ ಸರ್, ಅದಕ್ಕೆ ಅಲ್ಲಿ ಕೇಳಿರುವುದು:) ಅಲ್ಲಿ ಕಮೆ೦ಟ್ ರಿಸ್ತ್ರಿಕ್ಟ್ ಮಾಡಿಲ್ಲ, ಆದ್ರೂ ಯಾಕೆ ಆಗ್ತಿಲ್ಲ ಗೊತ್ತಿಲ್ಲ.. ನೋಡುವೆ, ತಿಳಿಸಿದಕ್ಕೆ ಥ್ಯಾಂಕ್ಸ್!

Thanks sapna! She is 20mnths now. No, not yet.... at present she is at home with us.

Looks like Putti is trying to teach amma!! Good to know putti is enthusiastic to learn & write.
Gudluck n best wishes to Putti.

Post a Comment