Tuesday, September 29, 2009

ಕಂದ ಕಣ್ಮಣಿಯೆ ಜೋ ಜೋ...

ಚಿತ್ರ: ಬಾಲ ನಾಗಮ್ಮ (1966)
ರಚನೆ: ಚಿ.ಉದಯಶಂಕರ್
ಸಂಗೀತ: ಎಸ್.ರಾಜೇಶ್ವರ ರಾವ್
ಗಾಯಕಿ : ಎಲ್.ಆರ್.ಈಶ್ವರಿ


ಕಂದ ಕಣ್ಮಣಿಯೆ ಅಮ್ಮನ ಅರಗಿಣಿಯೆ ಓ ರಾಜ.....
ಹೂವಿನ ಹಾಸಿಗೆಯ ಹಾಸುವೆನು ತೂಗುವೆನು
ಜೋ ಜೋ ಹಾಡುವೆನು

ಕಂದ ಕಣ್ಮಣಿಯೆ ಅಮ್ಮನ ಅರಗಿಣಿಯೆ ಓ ರಾಜ.....

ಮೋಡದ ತೆರೆಯಿಂದ ಚಂದಿರ ಕೈಚಾಚಿ
ನಿನ್ನನು ಕರೆಯುತಿಹ ನಗುತ ವಿನೋದದಿ
ಮೋಡದ ತೆರೆಯಿಂದ ಚಂದಿರ ಕೈಚಾಚಿ
ನಿನ್ನನು ಕರೆಯುತಿಹ ನಗುತ ವಿನೋದದಿ
ಕೊಡುವ ತಾರೆಗಳ ಆಡಲಿಕ್ಕೆ ಎನುತಿರುವ

ಕಂದ ಕಣ್ಮಣಿಯೆ ಅಮ್ಮನ ಅರಗಿಣಿಯೆ ಓ ರಾಜ......

ಅಮ್ಮನ ಪೂಜೆಗಳ ಪುಣ್ಯದ ರೂಪ ನೀ
ಅಮ್ಮನ ಸಂಕಟವ ಹರಿಸಲು ಬಂದಿರುವ
ಅಮ್ಮನು ಪೂಜೆಗಳ ಪುಣ್ಯದ ರೂಪ ನೀ
ಅಮ್ಮನ ಸಂಕಟವ ಹರಿಸಲು ಬಂದಿರುವ
ಮಗುವೆ ಶಂಕರನು ನಿನ್ನನು ತಾ ಪಾಲಿಸಲಿ

ಕಂದ ಕಣ್ಮಣಿಯೆ ಅಮ್ಮನ ಅರಗಿಣಿಯೆ ಓ ರಾಜ......
ಹೂವಿನ ಹಾಸಿಗೆಯ ಹಾಸುವೆನು ತೂಗುವೆನು
ಜೋ ಜೋ ಹಾಡುವೆನು

ಕಂದ ಕಣ್ಮಣಿಯೆ ಅಮ್ಮನ ಅರಗಿಣಿಯೆ ಓ ರಾಜ....

3 comments:

ಬಾಲ ನಾಗಮ್ಮ ನನ್ನ ಬಾಲ್ಯದ ಅಚ್ಚು ಮೆಚ್ಚಿನ ಚಿತ್ರ. ಕನಿಷ್ಟ ೭-೮ ಬಾರಿ ನೋಡಿದ್ದೇನೆ. ಎ೦ಪಿ ಶ೦ಕರ ನನ್ನ ಮೆಚ್ಚಿನ ಪಾತ್ರ. ಶಾಲೆಯಲ್ಲಿ ನಾನು ಆ ಪಾತ್ರದ ಏಕಾಭಿನಯವನ್ನು ಮಾಡಿ ಜನರನ್ನು ರ೦ಜಿಸಿದ ಕ್ಷಣಗಳ ನೆನಪಾಯಿತು. ಧನ್ಯವಾದಗಲು ರೂಪಶ್ರೀಯವರೇ. ಈ ಚಿತ್ರದ ಕಥೆಯೇ ನನಗೆ ಕ೦ಠಪಾಠವಾಗಿತ್ತು ಆಗ.

ಸೀತಾರಾಮ್ ಅವರೆ,
ನಿಮ್ಮ ಬಾಲ್ಯದ ನೆನಪುಗಳನ್ನ ಹಂಚಿಕೊಂಡಿದಕ್ಕೆ ಥ್ಯಾಂಕ್ಸ್! ನಾನು ಈ ಚಿತ್ರ ನೋಡಿಲ್ಲ, ಅವಕಾಶ ಸಿಕ್ಕಾಗ ಖಂಡಿತಾ ನೋಡುವೆ:)

ಸೀತಾರಾಮ್ ಅವರೆ,
ನಿಮ್ಮ ಬಾಲ್ಯದ ನೆನಪುಗಳನ್ನ ಹಂಚಿಕೊಂಡಿದಕ್ಕೆ ಥ್ಯಾಂಕ್ಸ್! ನಾನು ಈ ಚಿತ್ರ ನೋಡಿಲ್ಲ, ಅವಕಾಶ ಸಿಕ್ಕಾಗ ಖಂಡಿತಾ ನೋಡುವೆ:)

Post a Comment