Saturday, September 05, 2009

ಹಾವು ಅಂದ್ರೆ ನಮ್ಮ್ ಪುಟ್ಟಿಗೆ ದಿಗಿಲೇ ಇಲ್ವೇನೆ !!

ಪುಟ್ಟಿಗೆ ಹಾವು ಅಂದ್ರೆ ಸಾಕು ತನ್ನ ಕೈಯನ್ನ ಹಾವಿನ ಹೆಡೆಯಂತೆ ಬಾಗಿಸಿ "ಹಿಸ್ಸ್ ಹಿಸ್ಸ್" ಅಂತ ಸದ್ದು ಮಾಡುತ್ತಾ ತನ್ನನ್ನ ತಾನೆ ಕಚ್ಚಿಸಿಕೊಳ್ತಾಳೆ!! ಜೂನ್ ನಲ್ಲಿ ಜ್ಯಾಕ್ಸನ್ ವಿಲ್ಲ್ ಎಂಬ ಊರಿನ ಪ್ರಾಣಿ ಸಂಗ್ರಹಾಲಯದಲ್ಲಿ ನೋಡಿದ ಹೆಬ್ಬಾವಿದು.



ಹಾವು ಅಂದ್ರೆ ಮರಿ ಗುಬ್ಬಿಗೆ ಬಾರಿ ದಿಗಿಲೇನೆ

ನೆನಿಸಿಕೊಂದ್ರೆ ಮೈ ನಡುಗುತ್ತೆ ಹಾಡೇ ಹಗಲೇನೆ -

ಒಂದು ಸಾರಿ ಪುಟಾಣಿ ಗುಬ್ಬಿ ಅಮ್ಮನ ಕೇಳುತ್ತೆ - ೨

ಅಮ್ಮ ಅಮ್ಮ ಬೂಸ್ಸ್ ಬೂಸ್ಸ್ ಹಾವು ಹ್ಯಾಗಿರತ್ತೆ ?




ಹಾವು ಅಂದ್ರೆ ಮರಿ ಗುಬ್ಬಿಗೆ ಬಾರಿ ದಿಗಿಲೇನೆ

ನೆನಿಸಿಕೊಂದ್ರೆ ಮೈ ನಡುಗುತ್ತೆ ಹಾಡೇ ಹಗಲೇನೆ




ಒಕ್ಕಲಿ ಬೆನ್ನು ತಿಕ್ಕಿ ಕೊಳ್ತಾ ಅಮ್ಮ ಅನ್ನುತ್ತೆ

ಒಳ್ಳೆ ಪ್ರಶ್ನೆ ಹಾವು ಹ್ಯಾಗಿರತ್ತೆ ? ಹಾವು ಹ್ಯಾಗಿರತ್ತೆ ?

ಹಾವು ಇರುತ್ತೆ ಹಾವಿನ ಹಾಗೆ ಕಾಗೆ ಕಪ್ಪಗೆ

ಸಪೂರ ತಳ ತಳ ಕೆಂಡದ ಕಣ್ಣು ಕಟ್ಟೆ ದಪ್ಪಗೆ






ಹಾವು ಅಂದ್ರೆ ಮರಿ ಗುಬ್ಬಿಗೆ ಬಾರಿ ದಿಗಿಲೇನೆ

ನೆನಿಸಿಕೊಂದ್ರೆ ಮೈ ನಡುಗುತ್ತೆ ಹಾಡೇ ಹಗಲೇನೆ


ಒಂದು ಸಾರಿ ಪುಟಾಣಿ ಗುಬ್ಬಿ ಅಮ್ಮನ ಕೇಳುತ್ತೆ

ಅಮ್ಮ ಅಮ್ಮ ಬೂಸ್ಸ್ ಬೂಸ್ಸ್ ಹಾವು ಯಾಗಿರತ್ತೆ ?





ಸೂರಿಗೆ ಸುತ್ತಿ ಜೋತಾಡುತ್ತೆ ಗೋದಿ ಬೆನ್ನು

ದೀಪದ ಹಾಗೆ ಉರಿತಿರುತ್ತೆ ಹಾವಿನ ಕಣ್ಣು

ಬೂಸ್ ಎನ್ನುತ್ತೆ ದರಿದ್ರ ಹಾವಿಗೆ ತುಂಬದ ಹೊಟ್ಟೆ

ಹಿಡಿ ಹಿಡಿಯಾಗಿ ನುಗ್ ಬಿಡುತ್ತೆ ಹಕ್ಕಿ ಮೊಟ್ಟೆ






ಹಾವು ಅಂದ್ರೆ ಮರಿ ಗುಬ್ಬಿಗೆ ಬಾರಿ ದಿಗಿಲೇನೆ

ನೆನಿಸಿಕೊಂದ್ರೆ ಮೈ ನಡುಗುತ್ತೆ ಹಾಡೇ ಹಗಲೇನೆ






ಹಕ್ಕಿಯ ಮೊಟ್ಟೆ ನುಗಿದ ಮೇಲೆ ಹಿಡಿ ಹಿಡೀಲಿ

ಹಕ್ಕಿ ಮರಿ ಬೆಳ್ಕೊಳುತ್ತೆ ಹಾವಿನ ಹೊಟ್ಟೆಲಿ

ಹಕ್ಕಿ ಮರಿ ಹುಟ್ಟ ಕೊಳುತ್ತೆ ಹಾವಿನ ಹೊಟ್ಟೆಲಿ

ಅಂತ ಪುಟಾಣಿ ಕುಣಿದಾಡ್ತಿತ್ತು ಅಮ್ಮನ ತೋಳಲ್ಲಿ - ೨






ನಿಟ್ಟುಸ್ಸಿರ್ ಇಡ್ತು ಇಲ್ಲ ಬಂಗಾರ

ಇನ್ನು ನಿನಗೆ ತಿಳಿಯದಮ್ಮ ಹಾವಿನ ಹುನ್ನಾರ

ಹಾವಿನ ಹೊಟ್ಟೆ ಸೇರಿದ ಮೇಲೆ ಹೇಳೋದ್ ಇನ್ನೇನು - ೨

ಹಾವಿನ ಮೊಟ್ಟೆ ಆಗ್ ಬಿಡುತ್ತೆ ಹಕ್ಕಿ ಮೊಟ್ಟೇನು



ಹಾವಿನ ಹಾಡು ಇಲ್ಲಿ ಕೇಳಿ









10 comments:

ಅನುಭವಜನ್ಯ ಕವಿತೆ! ಮಕ್ಕಳಿಸ್ಕೂಲು ಮನೇಲಲ್ವೇ ಎನ್ನುವಂತೆ ನೀವು ನಿಮ್ಮ ಮಗಳಿಗೆ ಒಳ್ಳೆಯ ಶಿಕ್ಷಕಿಯೂ ಆಗಿದ್ದೀರ!

Hey roopa! u reminded me one of my fav songs of childhood!!it used to come on tv alva.. putti looks sweet in the pic!!

ರೂಪಾಶ್ರೀಯವರೆ.... (ಪುಟ್ಟಿಯ ಅಮ್ಮ)

ಪುಟ್ಟಿಗೆ ಹಾವು ಮುಟ್ಟಲು ಕೊಡ ಬೇಡಿ...
ಒಮ್ಮೆ ಹೆದರಿದರೆ ಜೀವನ ಪೂರ್ತಿ ಆ ಹೆದರಿಕೆ ತೆಗೆಯುವದು ಕಷ್ಟವಾಗಿ ಬಿಡಬಹುದು...

ಚಂದದ ಕವಿತೆ,,,,

roopa , havina haadu chenagide.I remember this song!! Appreciate your memory and research !!! definitely worth for this generation kids :)
Sad, Gubbi maris are not any more in some regions of karnataka.

ನಿಮ್ಮ ಪ್ರಪಂಚ ನೋಡೋಕೆ ಭಾಳ ಖುಷಿ ಆಗೈತೆ ಅಕ್ಕಾ. ಪುಟ್ಟಿಗೆ ನನ್ ನೆನೆಕೆ ತಿಳಿಸಿ
-ಧರಿತ್ರಿ

ಸತ್ಯ ಸರ್,
’ತಾಯಿಯೇ ಮೊದಲ ಗುರು’ ಅನ್ನೋ ಮಾತು ಎಲ್ಲರ ಮನೆಗೂ ಅನ್ವಯಿಸುತ್ತೆ ಅಲ್ವಾ:)
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..

Spurthi,
Glad to know this is one of ur fav songs. Yes, i infact searched for the video which was being telecast in DD, but dint find:(

ಪ್ರಕಾಶ್ ಅವರೆ,
ನಿಮ್ಮ ಕಿವಿ ಮಾತು ನೆನಪಿನಲ್ಲಿಟ್ಟುಕೊಳ್ಳುವೆ. ಹೌದು, ಒಮ್ಮೆ ಹೆದರಿಕೆ ಮನಸಿನಲ್ಲಿ ಬಂದ್ರೆ ಅದನ್ನ ಹೋಗಲಾಡಿಸುವುದು ಕಷ್ಟ ಇದು ನನ್ನ ಸ್ವಂತ ಅನುಭವ.

Shruthi,
I am happy u too like this one!! Thanks i just make a note of songs as and when i remember and search on net, when available keep sharing here:)
Oh ya miss the gubbacchis in bangalore. US nalli nODidaaga khushi aagatte:))

ಧರಿತ್ರಿ,
ಮಕ್ಕಳ ಪ್ರಪಂಚನೇ ಹಾಗೆ ಅಲ್ವಾ, ಎಲ್ಲ ಮರೆಸಿ ಖುಶಿ ಕೊಡುತ್ತೆ!!
ನಿಮ್ಮ ನೆನೆಕೆ ಪುಟ್ಟಿಗೆ ತಿಳಿಸಿದೆ:)

Post a Comment