Friday, September 11, 2009

ಅವ್ವ ಅಪ್ಪ ಯಾರು ಗೊತ್ತಾ ನಿಮ್ಗೆ?

ಮೊನ್ನೆ ಪುಟ್ಟಿ ಅವರಜ್ಜಿ ಜೊತೆ ಮಾತಾಡುತ್ತಿದ್ಲು. ನಾನು ಒಂದ್ ನಿಮ್ಷ ಒಳಗೆ ಹೋಗಿ ಬಂದೆ ಅಷ್ಟ್ರಲ್ಲಿ ಅಮ್ಮ ಇದೇನೆ ರೂಪ, ಪುಟ್ಟಿ ’ಅವ್ವ ಅಪ್ಪ’ ಅಂತ ಹೇಳ್ತಿದ್ದಾಳೆ ಆಗಿನಿಂದ ಅಂದ್ರು. ನನಗೂ ಆಶ್ಚರ್ಯವೆನಿಸಿ ಪುಟ್ಟಿಗೆ ಏನಮ್ಮ ಅದು ಅಂದೆ. ಅದಕ್ಕವಳು ತನ್ನ ಕೈಗಳನ್ನ ಟ್ವಿಂಕ್ಲಿಂಗ್ ಮಾಡುತ್ತಾ ’ಅವ್ವ ಅಪ್ಪ’ ಅಂದ್ಲು. ಅವಳು ೨-೩ ಸರ್ತಿ ತೋರ್ಸಿದಮೇಲೆ ಗೊತ್ತಾಯ್ತು ಅವಳು ’ಟ್ವಿಂಕಲ್ ಟ್ವಿಂಕಲ್ ಲಿಟ್ಟಲ್ ಸ್ಟಾರ್’ ರೈಮಿನ ’ಹೌ ಐ ವಂಡರ್’(ಅವ್ವ).. ಅಪ್ ಅಬೋವ್(ಅಪ್ಪ) ಹೇಳಲು ಪ್ರಯತ್ನಿಸ್ತಾಯಿದ್ದಾಳೆ ಅಂತ!!

ಇಲ್ಲಿಯವರೆಗೆ ತನಗೆ ಹಾಡಬೇಕೆನಿಸಿದಾಗ ಅಮ್ಮನಿಗೆ ಆಕ್ಷನ್ ಮೂಲಕ ಯಾವ ಹಾಡು/ ರೈ ಅಂತ ಹೇಳ್ತಾಯಿದ್ದ ಪುಟ್ಟಿ, ಇತ್ತೀಚೆಗೆ ಬಹಳಷ್ಟು ರೈಮ್ ಗಳನ್ನ ಹೇಳಲು ಪ್ರಯತ್ನಿಸುತ್ತಿದ್ದಾಳೆ.
ಅವಳು ಹೇಳೊದನ್ನ ನನ್ನ ಸ್ನೇಹಿತೆ ’ ಫಿಲ್ಲ್ ಅಪ್ ದ ಬ್ಯ್ಲಾಂಕ್ಸ್’ ಅಂತ ಕರಿತಾರೆ. ಅವಳು ಹೇಳೋ ರೀತಿ ಹೀಗೆ
ಪುಟ್ಟಿ: ಉಂಡಾ ಉಂಡ (ಉಂಡಾಡಿ ಗುಂಡ)
ನಾನು: ಮದ್ವೆ ಮನೆಗೆ ಹೋದ
ಪುಟ್ಟಿ: ತನ್ನೆಲ್ಲ ಬೆರಳುಗಳನ್ನ ತೋರಿಸುತ್ತಾ.... ಹತ್ತು
ನಾನು: ಹತ್ತು ಲಾಡು
ಪುಟ್ಟಿ: ತಿಂಟ(ತಿಂದ)
ಪುಟ್ಟಿ: ಇನ್ನು
ನಾನು: ಇನ್ನು ಬೇಕು ಎಂದ
ಪುಟ್ಟಿ: ಅಮ್ಮ ಬೆ....
ನಾನು: ಅಮ್ಮ ಬೆಣ್ಣೆ ಕೊಟ್ಟ್ರು
ಪುಟ್ಟಿ: ಅಪ್ಪ ...
ನಾನು: ಅಪ್ಪ ದೊಣ್ಣೆ ತಂದ್ರು
ಪುಟ್ಟಿ: ತನ್ನ ಕೈಗಳನ್ನ ಕಟ್ಟಿ, ಬೆರಳಿಂದ ಬಾಯ್ ಮುಚ್ಚಿಕೊಳ್ಳುವಳು
ನಾನು: ಕೈ ಕಟ್ಟ್ ಬಾಯ್ ಮುಚ್ಚ್

ಬಾ ಬಾ .. ಈಪ್(ಶೀಪ್).. ವೂಲ್.. ಎಚ್ಚ ಎಚ್ಚ(ಯಸ್ ಸರ್ ಯಸ್ ಸರ್)... ಇದು ಅವಳು ಬಾ ಬಾ ಬ್ಲ್ಯಾಕ್ ಶೀಪ್ ಹೇಳೊ ರೀತಿ :)

ಅಲ್ಲದೇ ನಾಯಿಮರಿ ಹಾಡು, ನಮ್ಮ ಮನೆಯ ಪಾಪ, ಒಂದು ಎರಡು ಮುಂತಾದವನ್ನ ಸ್ವಲ್ಪ ಸ್ವಲ್ಪ ಹೇಳಲು ಶುರು ಮಾಡಿದ್ದಾಳೆ!

5 comments:

ಕಂದನ ತೊದಲು ತೊದಲು ನುಡಿಗಳೇ ಬಹಳ ಚಂದ... ಅಪ್ಪ ಅವ್ವ ಅನ್ನೊ ಮಾತುಗಳ ತಾತ್ಪರ್ಯ ಓದಿ ಅಚ್ಚರಿಯಾಯ್ತು.
ಮಕ್ಕಳೆ ಮಾತೇ ವಿಚಿತ್ರ

:-) ಮಕ್ಕಳ ಮಾತೇ ಚಂದ. Cute words

ಥ್ಯಾಂಕ್ಸ್ ಕಿರಣ್, ಪ್ರಭು ಮತ್ತು ಹರೀಶ್ !!

nice blog.. tumbaa chennaagide.. pratiyondu posts kooda ishta aaythu..

Post a Comment