ಮನೆಯಲ್ಲಿ ಅಪ್ಪನ ಹತ್ರ ಎಷ್ಟೆಲ್ಲಾ ಸ್ಟಾಂಪ್ಸ್ ಇದ್ರೂ, ಅಪ್ಪ ಅವಳಿಗೆ ಮುಟ್ಟೋಕೆ(ಆಟವಾಡೋಕೆ) ಕೊಡೋದು ಕೆಲವೇ ಕೆಲವು ಮಾತ್ರ. ಅದನ್ನ ಕೂಡ ಅಪ್ಪನ ಹಾಗೆ ಕೈಗೆ ಗ್ಲವ್ಸ್ ಹಾಕಿಸಿಕೊಂಡು ಮುಟ್ಟುತ್ತಾಳೆ. ಅದರಲ್ಲಿರುವ ಪ್ರಾಣಿ, ಪಕ್ಷಿಗಳ ಚಿತ್ರನೋಡಿ ಖುಶಿ ಪಡ್ತಾಳೆ.


ಸರಿ ಮೊನ್ನೆ ಆರ್ಲ್ಯಾಂಡೋ ದಲ್ಲಿ ನಡೆದ Florex 2009 ಅನ್ನೋ ಸ್ಟ್ಯಾಂಪ್ ಎಕ್ಸಿಬಿಷನ್ ನೋಡಲು ಪುಟ್ಟಿ ಅಪ್ಪಅಮ್ಮನ ಜೊತೆ ಹೋಗಿದ್ಲು. ಅಲ್ಲಿದ್ದ ಸಾವಿರಾರು ಸ್ಟ್ಯಾಂಪ್ಸ್ ನೋಡಿ ಅಪ್ಪನಿಗೆ ಎಷ್ಟು ಖುಶಿ ಆಯ್ತೋ ಅದಕ್ಕಿಂತ ಹೆಚ್ಚಿನ ಖುಶಿ ಅಲ್ಲಿ ಮಕ್ಕಳಿಗಾಗಿ ಹಾಕಿದ್ದ ರಾಶಿ ರಾಶಿ ಸ್ಟ್ಯಾಂಪ್ಸ್ ಗಳ ಜೊತೆ ಆಟವಾಡಿ ಪುಟ್ಟಿಗೆ:))
ತನಗೆ ಬೇಕಾದ ಸ್ಟ್ಯಾಂಪ್ಸ್ ಆಯ್ದುಕೊಂಡು ತನ್ನ ಪುಟ್ಟ ಬಕೆಟ್ ತುಂಬಿಸುತ್ತಿರುವ ಪುಟ್ಟಿ...
1 comments:
nice exhibition
Post a Comment