ಪುಟ್ಟಿದು ಈ ಸಾರ್ತಿ ಫಿಶ್ ಥೀಮ್ ಪಾರ್ಟಿ ಅಂತ ಅವಳ ಆಮಂತ್ರಣ ನೋಡಿದಾಗ್ಲೇ ನಿಮಗೆಲ್ಲಾ ಗೊತ್ತಾಗಿದೆ. ಫಿಶ್ ಅಂತ ತಕ್ಷಣ ಹೆಚ್ಚಾಗಿ ಎಲ್ಲೆಡೆ ’ಫೈಂಡಿಂಗ್ ನೀಮೋ’ ಚಲನಚಿತ್ರ ಆಧಾರಿತ ಪಾರ್ಟಿ ಸಾಮಾನುಗಳೇ ಸಿಗುತ್ತವೆ, ಆದ್ರೆ ನಂಗೆ ಬೇಕಿದ್ದು ಅದಲ್ಲ.. ಹಾಗಾಗಿ ಅಂತರ್ಜಾಲದಲ್ಲಿ ಬಹಳಷ್ಟು ಹುಡುಕಾಡಬೇಕಾಯ್ತು! ಫಿಶ್ ಬಲೂನ್ಸ್, ತಟ್ಟೆ, ಪಾರ್ಟಿ ಟೋಪಿ, ಟೇಬಲ್ ಕವರ್, ಸೆಂಟರ್ ಪೀಸ್, ಕ್ರೇಪ್ ರಿಬ್ಬನ್ ಎಲ್ಲವೂ ಸಿಕ್ಕ್ತು...
The party Deco....
ಫಿಶ್ ಫೋಟೊ ಫ್ರೇಮಿನಲ್ಲಿ ಪುಟ್ಟಿ ಫೋಟೋಗಳು..
ಡೆಕೊರೇಷನ್ ಹೇಗೋ ಹುಡುಕಾಡಿ ತರಿಸಿದ್ದಾತು, ಆದ್ರೆ ಫಿಶ್ ಶೇಪಿನ್ ಕೇಕ್ ಯಾವ ಅಂಗಡಿಯವರೂ ಮಾಡಿಕೊಡಲು ತಯಾರಿರಲಿಲ್ಲ. ಅಲ್ಲಿ ಇಲ್ಲಿ ವಿಚಾರಿಸಿ, ಕೊನೆಗೆ ನಮ್ಮೂರಿನ ಆನ್ಲೈನ್ ಫೋರಂ ನಲ್ಲಿ ಬಹಳಷ್ಟು ಜನ ಹೇಳಿದ ಹೆಸರು ’ಮಿಸ್. ಕ್ಯಾಥಿ ಕೋವನ್’. ಬೇರೆ ದಾರಿಯಿಲ್ಲದೆ ಅವರಿಗೇ ಆರ್ಡರ್ ಕೊಟ್ಟೆ. ಆದ್ರೆ ಮನಸಿನಲ್ಲಿ ಆತಂಕ ತುಂಬಿತ್ತು, ಯಾವತ್ತೂ ಅವರ ಕೇಕ್ ರುಚಿ ನೋಡಿಲ್ಲ, ಹೇಗಿರುತ್ತೋ ಏನೋ ಅಂತ. ಅವರು ಮಾಡಿದ ಕೇಕ್ ನೋಡಿ ಬಹಳ ಖುಶಿ ಆಯ್ತು, ತಿನ್ನಲೂ ಅಷ್ಟೇ ರುಚಿಯಾಗಿತ್ತು:))The party Deco....

ಫಿಶ್ ಕೇಕ್ ಮತ್ತು ಫಿಶ್ ಕ್ಯಾಂಡಲ್ಸ್..

2 comments:
Great Celebration!!
Good spirit of parents!!
Let it continue long
with best wishes to your family.
Nice celebration Putti & wonderful Decoration Roopa..
Have a wonderful year to u all again,
Vanitha.
Post a Comment