ಪುಟ್ಟಿ ಸ್ಕೂಲಿಗೆ ಹೋಗೊಕೆ ಶುರು ಮಾಡಿದಾಗಿನಿಂದ ಮನೆಯಲ್ಲೂ ಆಗಾಗ್ಗೆ ಸ್ವಲ್ಪ ಇಂಗ್ಲೀಷ್ ಮಾತಾಡೋಕೆ ಶುರು ಮಾಡಿದ್ದಾಳೆ, ಆಗೆಲ್ಲಾ ನಾವು"ಹಾಗಂದ್ರೇನು?" ಅಥವಾ "ಕನ್ನಡದಲ್ಲಿ ಅದನ್ನ ಹೇಗೆ ಹೇಳೋದು" ಅಂತ ಅವಳನ್ನು ಮತ್ತೆ ನಮ್ಮ್ ಕನ್ನಡ ಮಾತಾಡೋಕೆ ನೆನಪಿಸುತ್ತೀವಿ. ಇತ್ತೀಚೆಗೆ ಅವಳಿಗೆ ಸಣ್ಣದೊಂದು ಏನೆ ತಗುಲಿದರೂ ಬಂದು "ಉಫ್" ಮಾಡಿಸಿಕೊಳ್ಳೊ ಆಟ ಶುರುವಾಗಿದೆ.
ಇವತ್ತು ಆಟವಾಡುತ್ತಿದ್ದವಳು ಅಡುಗೆ ಮನೆಗೆ ನನ್ನ್ ಹತ್ರ ಓಡಿ ಬಂದು "ಅಮ್ಮ, My Hand Ankle hurt ಆಯ್ತು, ಉಫ್ ಮಾಡು" ಅಂದ್ಲು. "Hand Ankle" ಹಾಗಂದ್ರೇನು ಪುಟ್ಟಿ ನಂಗೆ ಅರ್ಥ ಆಗ್ಲಿಲ್ಲಾ ಅಂದೆ. ಅದಕ್ಕವಳು ತನ್ನ ಬಲಗೈ ಮಣಿಗಂಟನ್ನ ತೋರ್ಸಿ ಇಲ್ಲಿ ಉಫ್ ಮಾಡು ಅಂದ್ಲು. ನಾನು " ಪುಟ್ಟಿ ಇದು ’wrist'...