Wednesday, September 01, 2010

ಪುಟ್ಟಿ ಶಾಲೆಗೆ ಹೊರಟಳು





ಪುಟ್ಟಿಯ ಅಜ್ಜಿ ತಾತ ವಾಪಸ್ ಇಂಡಿಯಾಕ್ಕೆ ಹೋದಮೇಲೆ, ಮತ್ತೆ ಪುಟ್ಟಿಯ ಜೊತೆ ಆಟವಾಡುವವರು ಕಮ್ಮಿಯಾದ್ರು. ವಾರಾಂತ್ಯದಲ್ಲಿ ನಡೆಯುವ ಪಾರ್ಟಿಗಳಲ್ಲಿ ೨-೩ ಘಂಟೆಗಳ ಕಾಲ ಬೇರೆ ಮಕ್ಕಳೊಡನೆ ಬೆರೆಯುವುದು ಅಷ್ಟೆ!
ಹಾಗಾಗಿ ಪುಟ್ಟಿಯನ್ನ ’Preschool'ಗೆ (ಅಂದ್ರೆ ನಮ್ಮಲ್ಲಿ ನರ್ಸರಿ ಅಂತಾರಲ್ಲ ಹಾಗೆ) ಸೇರಿಸಿದ್ವಿ. ಅಲ್ಲಿ ABCD ಇಲ್ಲ...ಬರಿ ವ್ಯಕ್ತಿತ್ವ ವಿಕಸನ, ಮಕ್ಕಳನ್ನ ಅವರ ಅಭಿರುಚಿಗೆ ಅನುಗುಣವಾಗಿ ಬೆಳೆಸುತ್ತಾರೆ. ಹೊರೆಯಲ್ಲದ ಶಾಲೆ (ನಮ್ಮ ಜೇಬಿಗೆ ಹೊರೆಯೇ.. ವಾರಕ್ಕೆ ಎರಡು ಅರ್ಧ ದಿನಗಳು ಪುಟ್ಟಿ ಹೋಗೋದು ಅದಕ್ಕೆ ತಿಂಗಳ ಫೀ $240) ಮಕ್ಕಳು ಆಡಿದ್ದೇ ಆಟ,ಕಲಿತಿದ್ದೇ ಪಾಟ.
ಮೊದಲು ಒಂದೆರೆಡು ಕಡೆ ಹೋಗಿ ನೋಡಿಕೊಂಡು ಬಂದೆವು, ಆಗ ಪುಟ್ಟಿನೂ ಜೊತೆಗಿದ್ದಳು. ಅಲ್ಲಿ ಮಕ್ಕಳನ್ನ ನೋಡಿ ಅಲ್ಲಿಂದ ಬರಲು ಸುತಾರಮ್ ಇಷ್ಟವಿಲ್ಲ ಅವಳಿಗೆ. ಪ್ರತಿ ಸರ್ತಿಯೂ ಅಳುತ್ತಲೇ ಮನೆಗೆ ಬಂದಿದ್ದಳು. ಸರಿ, ಅಂತೂ ಅವಳು ಶಾಲೆಗೆ ಹೋಗೋ ದಿನ ಬಂದೇ ಬಿಡ್ತು. ಅವಳೋ ಭಾರಿ ಸಂಭ್ರಮದಿಂದ ರೆಡಿಯಾಗಿ ಹೊರಟಳು. ಅಲ್ಲಿ ಕೂಡ ಕೊಂಚವೂ ಬೆಸರಿಸದೆ "ಬಾಯ್ ಅಮ್ಮ, ಬಾಯ್ ಅಪ್ಪ" ಅಂತ ಇಬ್ಬರಿಗೂ ಟಾಟಾ ಮಾಡಿದಳು. ಮೊದಲ ಬಾರಿ ಸತತ ನಾಲ್ಕು ಘ೦ಟೆ ಪುಟ್ಟಿಯನ್ನು ಬಿಟ್ಟಿರುತ್ತಿದ್ದೇನಲ್ಲಾ ಎನ್ನುವ ತಳಮಳ. ಇಂಗ್ಳೀಷ್ ಬರದ ನನ್ನ ಪುಟ್ಟಿ ಅಲ್ಲಿ ಕಷ್ಟ ಪಡಬಹುದು ಎಂದೆಣಿಸಿದ್ದೆ. ಶಾಲೆಯ ಹೆಡ್ ಮಿಸ್ ಈ ವಯಸ್ಸಿನ ಮಕ್ಕಳ ಜೊತೆ ಮಾತಾಡಲು ’ಆಟ’ದ ಭಾಷೆ ಸಾಕು ನಾಮ್ಗೆ ಚಿಂತಿಸ ಬೇಡಿ ಅಂತ ಧೈರ್ಯ ಕೊಟ್ಟರು, ಆದ್ರೂ ಯಾಕೋ ಸಮಾಧಾನವಿರಲಿಲ್ಲ. ಅವಳ ಕ್ಲಾಸ್ ಟೀಚರಿಗೆ(ಐದು ಮಕ್ಕಳಿಗೆ ಒಬಾಕೆ ಟೀಚರ್) ಇವಳು pee, water, food...ಇವುಗಳಿಗೆ ಹೇಳೋ ಪದಗಳನ್ನು ಬರೆದು ಕೊಟ್ಟು ಬಂದೆ.
ಮೊದಲ ದಿನ ಆ ನಾಲ್ಕು ಘಂಟೆಗಳು ಕಳೆಯುವುದು ನಂಗೆ ಬಹಳ ಕಷ್ಟವಾಯ್ತು. ಸರಿ, ಘಂಟೆ ಒಂದಾಗುತ್ತಲೇ ಶಾಲೆಗೆ ಹೋದ್ರೆ ಪುಟ್ಟಿ ಎಲ್ಲರೊಡನೆ ಖುಶಿಯಾಗಿ ಆಟವಾಡುತ್ತಿದ್ದಳು. ಮನೆಗೆ ಹೋಗೋಣ ಬಾರೆ ಪುಟ್ಟಿ ಅಂದ್ರೆ ಜೋರಾಗಿ ಅಳೋಕೆ ಶುರು ಮಾಡಿದ್ಲು, ಅವಳ ಮಿಕ್ಕ ಫ್ರೆಂಡ್ಸ್ ಅಲ್ಲಿ ಫುಲ್ಲ್ ಡೇ ಇದ್ದರಲ್ಲ ಅದಕ್ಕೆ .. ಜೊತೆಗೆ ಮುಂಚಿನ ಹಾಗೆ ಸ್ಕೂಲ್ ನೋಡಲು ಹೋದ ಹಾಗೆನೇ ಇವತ್ತು ಅಂದುಕೊಂಡಲೋ ಏನೊ ಅಳುತ್ತಲೇ ಬಂದ್ಲು!!
ಶಾಲೆ ಈಗ ನಮ್ಮ ದಿನನಿತ್ಯದ ಜೀವನವಾಗಿದೆ, ಬೆಳಗ್ಗೆ ಸ್ಕೂಲಿದೆ ಅಂದ್ರೆ ಸಾಕು ಯಾವುದೇ ಗಲಾಟೆಯಿಲ್ಲದೆ ರೆಡಿಯಾಗುತ್ತಾಳೆ. ಮದ್ಯಾಹ್ನ ವಾಪಸ್ ಕರೆತರ್ರ್ಲಲು ಹೋದಾಗ ತಾನು ಮತ್ತೆ ಶಾಲೆಗೆ ಬರುತ್ತೇನೆ ಅನ್ನುವ ನಂಬಿಕೆ ಬಂದಿದೆ ಹಾಗಾಗಿ ನಗುತ್ತಲೇ ಮನೆಗೆ ಬರುತ್ತಾಳೆ:) ಶಾಲೆಯಲ್ಲಿ ಊಟ ಒಂದು ಬಿಟ್ಟು ಇನ್ನೇಲ್ಲಾ ಚೆನ್ನಾಗಿಯೇ ಮಾಡುತ್ತಾಳೆ

5 comments:

woww aagle school shuru naa? Wishing putti all the very best!!

Roopa,
Nice to know about Putti's school:-)
Liked ur sentence "ಮಕ್ಕಳು ಆಡಿದ್ದೇ ಆಟ,ಕಲಿತಿದ್ದೇ ಪಾಟ"..It applies to my DD who is first grader!!

Vanitha,
Schools here follow that play based learning until highscool i guess:)

Sitaram : All the best putti - Enjoy School

Post a Comment