Thursday, September 02, 2010

ಪುಟ್ಟಿ ಆರ್ಟ್ ಗೋಡೆ ಮೇಲೆ

ಇತ್ತೀಚೆಗೆ ನಾನು ನೋಡಿದ ಹಲವಾರು kids art ಬ್ಲಾಗ್ ಗಳಲ್ಲಿ "ದ ಆರ್ಟ್ ಫುಲ್ ಪೇರಂಟ್" ಬಹಳ ಇಷ್ಟವಾಯ್ತು. ಅವರು ತಮ್ಮ ಮಗಳ ಬಹುತೇಕ ಎಲ್ಲಾ ಪೇಂಟಿಂಗ್ಸ್ ಗಳನ್ನು ಉಳಿಸಿಕೊಂಡಿದ್ದಾರೆ. ಅಲ್ಲದೆ ಕೆಲವನ್ನು ಫ್ರೇಮ್ ಕೂಡ ಮಾಡಿರಿವುದನ್ನು ಕಂಡು ಆಶ್ಚರ್ಯ ಸಂತಸ ಎರಡೂ ಆಯ್ತು. ಫ್ರೇಮ್ ಹಾಕಿಸಿದ ಪೇಂಟ್ಸ್ ಯಾವುದೋ ಫೇಮ್ಸ್ ಕಲೆಗಾರನ ಮಾಡ್ರನ್ ಆರ್ಟ್ ನಂತಿತ್ತು!!
ಪುಟ್ಟಿ ಮಾಡಿದ ಪೈಂಟಿಂಗ್ಸ್ ನಲ್ಲಿ ಚೆಂದ (ನನ್ನ ಕಣ್ಣಿಗೆ ಚೆಂದ) ಅನಿಸಿದ ಕೆಲವನ್ನು ಮಾತ್ರ ಎತ್ತಿಟ್ಟು ಮಿಕ್ಕ ಹಲವಾರನ್ನು ಬಿಸಾಡಿದ್ದೇನೆ, ಬೇಸರವಾಯ್ತು. Atleast ಅವುಗಳ ಫೋಟೋನಾದ್ರು ಕ್ಲಿಕ್ಕಿಸಿಟ್ಟುಕೊಳ್ಳಬಾರದಿತ್ತೇ ಅನಿಸಿತು. ಜೊತೆಗೆ ಅವುಗಳನ್ನು ಮನೆಯ ಫ್ರಿಡ್ಜ್ ಗೆ ನೇತು ಹಾಕೋದು ಬಿಟ್ಟು ಹೆಚ್ಚೇನೂ ಮಾಡಿಲ್ಲಾ :(
ಜೇನ್ ಅವರೇ ತಮ್ಮ ಬ್ಲಾಗಿನಲ್ಲಿ ಮಕ್ಕಳ ಆರ್ಟ್ ಅನ್ನು ಚೆಂದವಾಗಿ ಪ್ರದರ್ಶಿಸುವ ಹಲವಾರು ರೀತಿಗಳನ್ನು ತೋರಿಸಿದ್ದರು. ಅಲ್ಲದೆ ನಾನು ಅಂತರ್ಜಾಲದಲ್ಲಿ ಹುಡುಕಿದಾಗ ಇನ್ನೂ ಹಲವಾರು ಉಪಾಯಗಳು ಹೊಳೆದವು. ಆದ್ರೆ ಬಾಡಿಗೆಯ ಆಪಾರ್ಟ್-ಮೆಂಟಿನಲ್ಲಿ ಮೊಳೆ ಹೊಡೆಯೋದು ಹೇಮಂತ್ ಗೆ ಇಷ್ಟವಿಲ್ಲ, ಆದ್ರೂ ಅವಳ ರೂಮಿನ ಒಂದು ಗೊಡೆಯನ್ನು ಅವಳ ಪೈಂಟಿಂಗ್ಸ್ ಗಾಗಿ ಮೀಸಲಿಡಲು ನಿರ್ಧರಿಸಿದೆ. ಮಕ್ಕಳ ಕಲೆಯನ್ನು ಪ್ರದ್ರಶಿಸುವುದರಿಂದ ಅವರಲ್ಲಿ ಆತ್ಮವಿಶ್ವಾಸ ಹೆಚ್ಚುವುದು.
ಸರಿ, ಮೊದಲಿಗೆ ಪೈಂಟ್ಸ್ sheet protectorsನಲ್ಲಿ ಹಾಕಿ ಗೋಡೆಗೆ ಟೇಪ್ ಮಾಡಿದೆ...
ಪುಟ್ಟಿಗೆ ಬಹಳ ಖುಶಿ ಆಯಿತಾದ್ರೂ, ನಂಗೆ ಅದು ಅಷ್ಟು ಚೆಂದ ಕಾಣಿಸಲಿಲ್ಲ. ಸರಿ, ಒಂದು ಅಗಲವಾದ ಬಟ್ಟೆಗೆ ಹಲವು sheet protectorಗಳನ್ನು ಹೊಲೆದು ಅದನ್ನು ಗೋಡೆಗೆ ಪಿನ್ ಮಾಡಿದೆ. 
ಇದಕ್ಕೊಂದು ಚೆಂದದ ಬಾರ್ಡರ್(ಪುಟ್ಟಿಯ ಆಯ್ಕೆಯ) ತಂದು ಅಂಟಿಸಿದೆವು. 

ಆಮೇಲೆ ಅದಕ್ಕೊಂದು ಬೋರ್ಡ್ ಹಾಕಬೇಕೆನಿಸಿತು. ಸರಿ, ಮನೆಯಲ್ಲಿದ್ದ ಖಾಲಿ cerealsನ ಡಬ್ಬಕ್ಕೆ ಪುಟ್ಟಿಗೆ ಪೈಂಟ್ ಮಾಡಲು ಹೇಳಿದೆ (ಗೆರೆಗಳನ್ನು ಬರೆಯಲು ಹೇಳಿದೆ). 

ನಂತರ ಅದನ್ನು ಬೇಕಾದ ಅಳೆತೆಗೆ ಕತ್ತರಿಸಿದೆ. ಬಿಳಿಯ ಹಾಳೆಯ ಮೇಲೆ "Putti's Art"ಯಲ್ಲಿನ ಒಂದೊಂದೇ ಅಕ್ಷರಗಳನ್ನು ಪುಟ್ಟಿಗೆ ಬರೆಯಲು ಹೇಳಿ ಅದನ್ನು ನಾನು ನಂತರ ಸ್ವಲ್ಪ ಗ್ಯಾಪ್ ಬಿಟ್ಟು ಕತ್ತರಿಸಿ(ಬಿಳಿ ಹಾಳೆ ಕಾಣುವಂತೆ ಕತ್ತರಿಸಿ) ಬಣ್ಣದ ಬೋರ್ಡಿಗೆ ಅಂತಿಸಿದೆವು:)


ಪುಟ್ಟಿ, ಈಗ ಮನೆಗೆ ಬಂದವರನೆಲ್ಲಾ ತನ್ನ ರೂಮಿಗೆ ಕರೆದು ಇದನ್ನು ತೋರಿಸಿ ತಾನೇ ಮಾಡಿದ್ದು ಅಂತ ಹೇಳಿ ಕೊಳ್ತಾಳೆ. ಇನ್ನ್ಮೇಲೆ ತಿಂಗಳಿಗೊಮ್ಮೆ ಇದರಲ್ಲಿನ ಪೈಂಟ್ಸ್ ಗಳನ್ನ ಬದಲಾಯಿಸುತ್ತೇವೆ!

2 comments:

sooper putti!! ninn paintings gella ond gallery sikkide:))
Very nice board too..

Thanks rashmi! Though late have dane something to put up her paintings:)

Post a Comment