Friday, September 17, 2010

ಕೈ-ಕಾಲು ಪೈಂಟ್



ಇವತ್ತು ಏನ್ ಪೈಂಟ್ ಮಾಡೋಣ ಪುಟ್ಟಿ? ಅಂತ ಕೇಳಿದ್ರೆ "ಕೈ ಮಾಡೋಣ ಅಮ್ಮ" ಅಂದ್ಲು. ಹಾಗಂದ್ರೇನು ಅಂತ ಗೊತ್ತಾಗದೆ ಅದು ಹೆಂಗೆ ಮಾಡೋದು ಅಂದೆ? "ಅಕ್ಕ ಕೈ ಮಾಡಿ ಸ್ಪೈಡರ್ ಮಾಡ್ತಾರಲ್ಲ ಹಾಗೆ" ಅಂದ್ಲು ಅವಳು ನೋಡುವ ಬಾರ್ನಿ ಕಾರ್ಟೂನ್ ನೆನದು. ಆಗ ಅರ್ಥವಾಯ್ತು ಅವಳು ಹೇಳಿದ್ದು ಕೈ ಟ್ರೇಸ್ ಮಾಡೋಣ ಅಂತ. ಸರಿ, ಅವಳ ಎರಡೂ ಕೈಗಳನ್ನ ಪೇಪರ್ ಮೇಲಿಟ್ಟು ಸುತ್ತ ಪೆನಿನಲ್ಲಿ ಬರೆದೆ, ಪೆನ್ ಕೈಗೆ ತಾಗಿದಾಗಲೆಲ್ಲ ಕಚಗುಳಿ ಕೊಟ್ಟಂತಾಗಿ ನಗುತ್ತಿದ್ದಳು. ಬಳೆಗಳನ್ನೂ ಮಾಡುವಂತೆ ಹೇಳಿದ್ಲು, ಬರೆದೆ.
ಮುಂದೇನು? ಅಂತ ಯೋಚಿಸ್ತಾಯಿದ್ರೆ ಪುಟ್ಟಿ “ಅಮ್ಮ ನೇಲ್ಸ್ ಬರ್ದಿಲ್ಲ ನೀನು ಹ್ಹಹ್ಹ ಅಮ್ಮ ಮರ್ತೋಯ್ತು ಹ್ಹಹ್ಹ” ಅಂತ ನಗುತ್ತ ನೆನಪಿಸಿದ್ಲು. ಸರಿ, ಉಗುರು ಬರೆದಿದ್ದು ಆಯ್ತು, ಅದಕ್ಕೆ ಬಣ್ಣ ಹಾಕೋಣವಾ ಅಂದೆ, ಹೂಂ ಆಂಟಿ ಹಾಕ್ತಾರೆ ಹಂಗೆ ಮಾಡೋಣ ಅಂದ್ಲು. ಎಲ್ಲಿ ಯಾವ ಆಂಟಿ ಕೈ ನೋಡಿದ್ಲೋ ಗೊತ್ತಿಲ್ಲ. ಅಂತು ನೋಡಿದ್ದೆಲ್ಲಾ ಆ ಪುಟ್ಟ ತಲೆಯಲ್ಲಿ ನೆನಪಿರುತ್ತೆ ಅಂತ ತಿಳೀತು.

ಆಮೇಲೆ ಕಾಲು ಮಾಡೋಣ ಅಂತ ಅದನ್ನೂ ಮಾಡಿಸಿಕೊಂಡಳು. ಅದಕ್ಕೆ ಉಗುರುಬಣ್ಣ ಹಾಕಿ ಮೆಹಂದಿಯನ್ನೂ ಹಾಕಿದ್ವಿ (ಯಾವಾಗಲೋ ಸೇವ್ ಮಾಡಿಟ್ಟುಕೊಂಡಿದ್ದ ಕೆಲವು ಮೆಹಂದಿ ಡಿಸೈನ್ ಗಳನ್ನ ಮೊನ್ನೆ ಪುಟ್ಟಿಗೆ ತೋರಿಸಿದ್ದೆ, ಅದರ ಪರಿಣಾಮವಿರ ಬಹುದು).




ಅದೇ ಮೆಹಂದಿ ಡಿಸೈನ್ ಕೈಗೂ ಮಾಡೋಣ ಅಂತ ಮತ್ತೊಮ್ಮೆ ಮಾಡಿದ್ವಿ.


ನನ್ನ ಕೈ ಕಾಲುಗಳನ್ನ ಪುಟ್ಟಿ ಟ್ರೇಸ್ ಮಾಡಿದ್ದು ಹೀಗೆ.


2 comments:

Post a Comment