Wednesday, November 17, 2010

ಅಪ್ಪ ಅಪ್ಪ ನನ್ನಪ್ಪ ಮುದ್ದು ಮಾಡುವ ನನ್ನಪ್ಪ ವಿದ್ಯೆಯ ಕಲಿಸುವ ನನ್ನಪ್ಪ ಬುದ್ದಿಯ ಹೇಳುವ ನನ್ನಪ್ಪ ಜೀವನ ಸ್ಫೂರ್ತಿ ನನ್ನಪ್ಪ ಭಾವ ಜೀವಿ ನನ್ನಪ್ಪ --ಸುಬ್ರಹ್ಮಣ್ಯ ...

Friday, November 12, 2010

ಪುಟ್ಟಿಯ ಮೊದಲ ಸ್ಟೇಜ್ ಶೋ !!

ಪುಟ್ಟಿಗೆ ಡ್ಯಾನ್ಸ್ ಬಹಳ ಇಷ್ಟ! ಯಾವ ಮಗುವಿಗೆ ಇಷ್ಟವಿಲ್ಲ ಅಲ್ವಾ :) ನಮ್ಮೂರಿನ ಭಾರತೀಯ ಅಸೋಸಿಯೇಷನ್ ಅವರ ವಾರ್ಷಿಕೋತ್ಸವ 'Glimpses of India' ಕಾರ್ಯಕ್ರಮದಲ್ಲಿ ಈ ಸರ್ತಿ ಪುಟ್ಟಿ ಮತ್ತವಳ ಸ್ನೇಹಿತರದ್ದೂ ಒಂದು ಡ್ಯಾನ್ಸ್ ಇತ್ತು. ಪ್ರಾಕ್ಟೀಸ್ ಮಾಡುವಾಗಲಿಂದನೂ ಬಹಳ ಉತ್ಸಾಹದಿಂದಲೇ ಅದರಲ್ಲಿ ಭಾಗವಹಿಸಿದಳು. ಇದು ಅವಳ ಮೊದಲ ’ಸ್ಟೇಜ್ ಶೋ’ !! ಹಿಂದಿ ಚಲನಚಿತ್ರ ’ಹೋಮ್ ಡೆಲಿವೆರಿ’ ಯಲ್ಲಿರುವ ’ಹ್ಯಾಪಿ ದಿವಾಲಿ’ ಅನ್ನೋ ಹಾಡಿಗೆ :) ದೀಪಾವಳಿ ಹಬ್ಬವೂ ಅದೇ ಸಮಯದಲ್ಲಿ ಬಂದಿದ್ದರಿಂದ ಇದು ಎಲ್ಲರಿಗೂ ಮೆಚ್ಚುಗೆ ಆಯಿತು.ವಿಡಿಯೋ ರೆಕಾರ್ಡ್ ಮಾಡಿ ಕೊಟ್ಟ ಶಿಶಿರ್ ಅಪ್ಪ ಮತ್ತು ಅರ್ಜುನ್ ಅಂಕಲ್ ಗೆ ತುಂಬಾ ತುಂಬಾ ಥ್ಯಾಂಕ್ಸ್...

Wednesday, November 10, 2010

ದೀಪಾವಳಿ ಪುಸ್ತಕ !!

ಇತ್ತೀಚೆಗೆ ನಾವು ಲೈಬ್ರರಿಗೆ ಹೋದಾಗಲೆಲ್ಲ ಪುಟ್ಟಿ ತನಗೆ ಬೇಕಾದ ಪುಸ್ತಕಗಳನ್ನು ಆರಿಸಿ ತರ್ತಾಳೆ. ನಾನು ಮೊದಲೇ ಲೈಬ್ರರಿಯ ವೆಬ್ಸೈಟಿನಲ್ಲಿ ಹುಡುಕಿ ಬೇಕಾದ ಪುಸ್ತಕವನ್ನು ಕಾದಿರಿಸಿಕೊಳ್ಳುವೆ.  ಪುಟ್ಟಿಗೆ ಅವರ ಸ್ಕೂಲಿನಲ್ಲಿ ವಾರಕ್ಕೊಂದು ’ಥೀಮ್’ ಇರುತ್ತೆ. ನಾನು ಅವಳಿಗೆ ಆ ಥೀಮಿನ ಅನುಗುಣವಾಗಿ ಪುಸ್ತಕಗಳನ್ನು ತರ್ತೀನಿ. ಮೊನ್ನೆ ಹ್ಯಾಲೋವೀನ್ ಟೈಮಿನಲ್ಲಿ ಓದಿದ್ದೆಲ್ಲಾ ಅದೇ ಪುಸ್ತಕಗಳೇ!ಸರಿ ದೀಪಾವಳಿ ಬಂತಲ್ಲ ಅದರ ಬಗ್ಗೆ ಪುಸ್ತಕಗಳೇನಾದ್ರು ಇದೆಯಾ...

Thursday, November 04, 2010

ದೀಪಾವಳಿಯ ಶುಭಾಶಯಗಳು!!

ದೀಪವಿರಲಿ ಮನದಲಿ,ಬೆಳಗಲಿ ಕನಸುಗಳಾಕರಗಿಸಲಿ ಕತ್ತಲೆಯಾ!  ನಿಮಗೆಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳ...

ಪೇಪರ್ ಲ್ಯಾಂಟರ್ನ್...

ದೀಪಾವಳಿಗೆ ಆಕಾಶಬುಟ್ಟಿ ಮಾಡಿ ಅದರೊಳಗೊಂದು ಸಣ್ಣ ದೀಪವನ್ನು ಹಚ್ಚಿ ಮನೆಯ ಮುಂದೆ ನೇತು ಹಾಕುವುದನ್ನು ಅಮ್ಮ ಹೇಳಿದ್ದನ್ನು ಕೇಳಿದ್ದೆ. ಬೆಂಗಳೂರಿನಲ್ಲಿ ಕೆಲವರು ಮನೆಯ ಮುಂದೆ ಹಾಕಿದ್ದ ಅಂಗಡಿಯಲ್ಲಿ ಸಿಗುವ ’ಬಟ್ಟೆಯ ಆಕಾಶಬುಟ್ಟಿ’ ಯನ್ನು ನೋಡೂ ಇದ್ದೆ. ಅದು ಮತ್ತೆ ಇನ್ನೂ ಕೆಲವು ದೀಪಾವಳಿಯ ಆಚರಣೆ  ನಶಿಸುತ್ತಿರುವ ಬಗ್ಗೆ ಒಂದು ಲೇಖನ ಇಲ್ಲಿ.ಮೊನ್ನೆ ನಡೆದ ’Asian festival' ನಲ್ಲಿ ಥೈಲಾಂಡಿನವರ ಬೂತಿನಲ್ಲಿ ಮಕ್ಕಳಿಗೆ ಮಾಡಿಸುತ್ತಿದ್ದ ಪೇಪರ್ ಲ್ಯಾಂಟರ್ನ್...

Wednesday, November 03, 2010

ಪೇಪರ್ ದೀಪಗಳ ಹಾರ...

ಪುಟ್ಟಿ ಪೈಂಟ್ ಮಾಡಿರೋ ಕೆಲವು ಹಾಳೆಗಳನ್ನು ಅರ್ಧ ಸರ್ಕಲ್ ಆಗಿ ಕತ್ತರಿಸಿದೆ. ಒಂದು ಹಾ;ಎ ಪೂರ್ತಿ ಹಳದಿ ಬಣ್ಣ ಪೈಂಟ್ ಮಾಡಿಸಿ, ಅದನ್ನು 'tear shape'ನಲ್ಲಿ ಕಟ್ ಮಾಡಿ, ಮದ್ಯ ಸ್ವಲ್ಪ ಕೆಂಪು ಹಾಕಿ ದೀಪಗಳನ್ನು ಮಾಡಿದೆವು. ಅವುಗಳನ್ನು ಹಬ್ಬದ ದಿನ ಡೈನಿಂಗ್ ಟೇಬಲ್ ನಲ್ಲಿ ಹೀಗೆ ಜೋಡಿಸಿಡುವ ಇರಾದೆ ನನಗಿತ್ತು. ಅಥವಾ ಬಾಗಿಲಿಗೆ ತೋರಣದ ತರಹ ಈ ದೀಪಗಳ ಹಾರ ಹಾಕಬಹುದಿತ್ತು! ಆದ್ರೆ, ಪುಟ್ಟಿಯ ಐಡಿಯಾ ಬೇರೆಯಗಿತ್ತು. ಮೊನ್ನೆ ಹ್ಯಾಲೋವೀನ್ ಗೆಂದು ಮಾಡಿದ್ದ...