Thursday, November 04, 2010

ಪೇಪರ್ ಲ್ಯಾಂಟರ್ನ್...

ದೀಪಾವಳಿಗೆ ಆಕಾಶಬುಟ್ಟಿ ಮಾಡಿ ಅದರೊಳಗೊಂದು ಸಣ್ಣ ದೀಪವನ್ನು ಹಚ್ಚಿ ಮನೆಯ ಮುಂದೆ ನೇತು ಹಾಕುವುದನ್ನು ಅಮ್ಮ ಹೇಳಿದ್ದನ್ನು ಕೇಳಿದ್ದೆ. ಬೆಂಗಳೂರಿನಲ್ಲಿ ಕೆಲವರು ಮನೆಯ ಮುಂದೆ ಹಾಕಿದ್ದ ಅಂಗಡಿಯಲ್ಲಿ ಸಿಗುವ ’ಬಟ್ಟೆಯ ಆಕಾಶಬುಟ್ಟಿ’ ಯನ್ನು ನೋಡೂ ಇದ್ದೆ. ಅದು ಮತ್ತೆ ಇನ್ನೂ ಕೆಲವು ದೀಪಾವಳಿಯ ಆಚರಣೆ  ನಶಿಸುತ್ತಿರುವ ಬಗ್ಗೆ ಒಂದು ಲೇಖನ ಇಲ್ಲಿ.
ಮೊನ್ನೆ ನಡೆದ ’Asian festival' ನಲ್ಲಿ ಥೈಲಾಂಡಿನವರ ಬೂತಿನಲ್ಲಿ ಮಕ್ಕಳಿಗೆ ಮಾಡಿಸುತ್ತಿದ್ದ ಪೇಪರ್ ಲ್ಯಾಂಟರ್ನ್ ಪುಟ್ಟಿ ಕೂಡ ಮಾಡಿದ್ದಳು. ಅದು ಮಾಡಲು ಬಲು ಸುಲಭ.


ಸರಿ, ನಾವೂ ಕೂಡ ನಮ್ಮ ಹಬ್ಬಕ್ಕೆ ಮಾಡೋಣ ಅಂತ ಶುರು ಮಾಡಿದೆವು. ಮೊದಲು ಮಾಡಿದ್ದು ಸರಿಯಾಗಲಿಲ್ಲ. ತಪ್ಪಾಗಿ ಕಟ್ ಮಾಡಿದೆವು. ಆದ್ರೆ ಅದನ್ನು ಅಂಟಿಸಿದಾಗ, ಅದು ಹೀಗಾಯ್ತು!

ನಂತರ ಕೆಲವನ್ನು ಮಾಡಿಯೇ ಬಿಟ್ಟೆವು...

ಕೆಲವನ್ನು ಪೈಂಟ್ ಮಾಡಿದಳು, ಕೆಲವರಲ್ಲಿ ಮಾರ್ಕರ್/ ಕ್ರಯಾನ್ಸ್ ನಿಂದ ಸಿಂಗರಿಸಿದ್ದಳು. . ಕತ್ತರಿಸುವಾಗ ಪುಟ್ಟಿಗೆ ಸಹಾಯವಾಗಲೆಂದು ಹಾಳೆ ಹಿಡಿದೆ. ಕೆಲವೊಂದು ಸ್ವಲ್ಪ ಹೆಚ್ಚಾಗಿ ಕಟ್ ಕೂಡ ಆಯ್ತು:) ಯಾವುದೂ ಪರ್ಫೆಕ್ಟ್ ಆಗಿಲ್ಲ, ಪರ್ವಾಗಿಲ್ಲ:)  ಇವುಗಳು ಈಗ ಅಡುಗೆ ಮನೆಯ ಬಾಗಿಲಲ್ಲಿವೆ!

ನೀವೂ ಕೂಡ ಮಾಡಬೇಕೆ? ಹಾಗಾದ್ರೆ ನೋಡಿ ವಿಡಿಯೋ ಇಲ್ಲಿದೆ. ಒಳಗಿನ ಪೇಪರ್ ಟ್ಯೂಬ್ ಇಲ್ಲದೆಯೂ ಮಾಡಬಹುದು.

3 comments:

Lanterns ellaa chennagide! Mistake maadi hosa design create maadidra, nice!

wow
ಪುಟ್ಟಿ ಯಿಂದ ಆಕಾಶಬುಟ್ಟಿ!!!
My younger daughter Niharika got small clay lamps of different pattern and coloured them and took it to Kidwai memorial hospital (childrens cancer ward) They were lovely but i forgot to take a photo.
thanks dear. will go through putti's world in my leisure, with my girls besides me
:-)
ಎಮ್ ಎಸ್

ಮಾಲತಿ ಅವರೆ,
ಬ್ಲಾಗಿಗೆ ಬೇಟಿ ಕೊಟ್ಟು ಪ್ರತಿಕ್ರಿಯಿಸಿದಕ್ಕೆ ವಂದನೆಗಳು!! ಮುಖ ಪುಸ್ತಕದಲ್ಲಿ ನಿಮ್ಮ ಮಗಳ ಕೆಲವು ಪೈಂಟಿಂಗ್ಸ್ ಫೋಟೋ ನೋಡಿದೆ, ಬಹಳ ಚೆನ್ನಾಗಿವೆ:)
ಆಗಾಗ್ಗೆ ಬರ್ತಾಯಿರಿ!

Post a Comment