
ಈ ಚಿತ್ರ ಬಿಡಿಸಿ ಬಣ್ಣ ತುಂಬಿದ್ದು ಎಂಟು ವರುಷದ ಪುಟ್ಟ ಬಾಲಕ ಸಮರ್ಥ್ ಮುತ್ಯಾಲ. ಕರುನಾಡಿನಿಂದ ದೂರ ಬಹುದೂರ ಅಮೇರಿಕಾದಲ್ಲಿ ಬೆಳೆಯುತ್ತಿರುವ ಈ ಬಾಲಕ, ತನ್ನ ಅಮ್ಮನ ಸಹಾಯದಿಂದ ಇದನ್ನು ಬರೆದಿರುವನು. ಹೊರದೇಶದಲ್ಲಿ ಬೆಳೆಯುತ್ತಿರುವ ಮಕ್ಕಳು ತಮ್ಮ (ತಮ್ಮ ತಂದೆ ತಾಯಿಯರ) ನಾಡು ನುಡಿ ಬಗ್ಗೆ ಆಸಕ್ತಿಯಿಂದ ಕಲಿತು, ಒಲವು ಬೆಳೆಸಿಕೊಳ್ಳುತ್ತಿರುವುದನ್ನು ನೋಡಿ ಬಹಳ ಖುಷಿ ಆಗುತ್ತದೆ. ಇಂತಹ ಮಕ್ಕಳನ್ನು ಉತ್ತೇಜಿಸುತ್ತಿರುವ ಅವರ ತಂದೆ...