Thursday, July 30, 2009

ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು!!

ನಾಳೆ ವರಮಹಾಲಕ್ಷ್ಮಿ ಹಬ್ಬ. ಎಂದಿನಂತೆ ಅಮ್ಮನ ಮನೆಯಲ್ಲಿದ್ದಾಗ ಹಬ್ಬಗಳ ನೆನಪಾಗುತ್ತಿದೆ. ಬೆಂಗಳೂರಿನಲ್ಲಿ ಹಬ್ಬಗಳು ಬಂದರೆ ಎಲ್ಲೆಲ್ಲಿದ ಸಂಭ್ರಮ. ಮಾರುಕಟ್ಟೆಯ ತುಂಬಾ ಹಬ್ಬಕ್ಕೆ ಬೇಕಾಗುವ ಹೂವು ಪತ್ರೆಗಳು, ಹಣ್ಣುಗಳು, ಮಾವಿನ ಸೊಪ್ಪು-ಬಾಳೆ ಕಂದು, ಅಲಂಕಾರಕ್ಕೆ ಬಣ್ಣಬಣ್ಣದ ಕಾಗದಗಳು. ಹಬ್ಬದ ವಾರವೆಲ್ಲ ರೇಡಿಯೋ/ದೂರದರ್ಶನ ಎಲ್ಲರೂ ಭಾಗ್ಯಾದ ಲಕ್ಷ್ಮಿ ಬಾರಮ್ಮ ಅಂತ ಕರೆಯುವವರೇ :))

ಹಬ್ಬದ ದಿನ ಮುಂಜಾನೆ ಚುಮುಚುಮು ಬೆಳಕಿರುವಾಗಲೇ ಎದ್ದು ಮನೆ ಮುಂದೆ ದೊಡ್ಡ ರಂಗೋಲಿ ಹಾಕಿ, ಬಣ್ಣ ತುಂಬೋದು. ಆಮೇಲೆ ಬಾಗಿಲಲ್ಲಿ ಸದಾಯಿರುವ ಪ್ಲಾಸ್ಟಿಕಿನ ಹಾರ ತೆಗೆದು ಮಾರ್ಕೆಟ್ಟಿಂದ ತಂದ ಮಾವಿನ ಎಲೆಯ ತೋರಣ, ಹೂವಿನ ಹಾರ ಹಾಕಿದ್ರೆ ಮನೆಗೆ ಹಬ್ಬದ ಕಳೆ ಬಂದಿರುತ್ತೆ. ಹಿಂದಿನ ದಿನವೇ ದೇವಿಯನ್ನು ಕೂರಿಸಲು ಮನೆಯಲ್ಲಿರುವ ಟೇಬಲ್, ಸ್ಟೂಲ್ ಗಳಲ್ಲಾ ಸ್ಟೆಪ್ ಗಳಾಗಿ ಮಾರ್ಪಟ್ಟಾಗಿರುತ್ತಿದ್ದವು. ಸ್ನಾನ ಮುಗಿಸಿ ಅಮ್ಮ ಅಡಿಗೆ ಕೆಲಸ ಮಾಡುತ್ತಾ ನಮಗೆ ಹೇಳಿದಂತೆ ನಾವು ಪೂಜೆಗೆ ರೆಡಿ ಮಾಡೋದು. ನನಗೇ ನೆಟ್ಟಗೆ ಸೀರೆ ಉಡಲು ಬರದಿದ್ದರೂ ಹಬ್ಬಕ್ಕೆಂದು ಅಮ್ಮ ತಗೊಂಡ ಹೊಸ ಸೀರೆಯನ್ನು ಕಳಶಕ್ಕೆ ಉಡಿಸಿ, ಲಾಕರ್ ನಲ್ಲಿದ್ದ ಒಡವೆಗಳನ್ನೆಲ್ಲ ತಂದು ಕಲಶದ ಮೇಲೆ ಕುಳಿತಿರುವ ಲಕ್ಷ್ಮಿಯನ್ನ ಅಲಂಕರಿಸೋದು. ಸೀರಿಯಲ್‌ ಸೆಟ್‌ ಬೆಳಕು ಒಡವೆಗಳಿಗೆ ಇನ್ನೂ ಹೊಳಪು ತರಿಸ್ತಾಯಿತ್ತು. ಅಮ್ಮನ ಮನೆಯಲ್ಲಿ ಹಬ್ಬ 2005

ನಂತರ ಎಲ್ಲರೂ ಸೇರಿ ಗಣಪತಿ ಶಾಸ್ತ್ರಿಗಳು ಕ್ಯಾಸೆಟ್ಟಿನಲ್ಲಿ ಹೇಳಿಕೊಟ್ಟಂತೆ ಪೂಜೆ ಮಾಡೋದು. ನಾನು ಟೇಪ್‌ ರೆಕಾರ್ಡರ್‌ ಪಕ್ಕದಲ್ಲೇ ಕೂತಿರಬೇಕು. ನೈವೇದ್ಯ, ಮಂಗಳಾರತಿ ಮುಂತಾದವುಗಳಿಗೆ ಅಣಿ ಮಾಡಿಕೊಳ್ಳುವ ಸಮಯದಲ್ಲಿ ಕ್ಯಾಸೆಟ್ಟನ್ನು ಬಂದ್‌ ಮಾಡುವುದು. ಸಿದ್ಧವಾದ ನಂತರ ಮತ್ತೆ ಹಚ್ಚುವುದು ನನ್ನ ಕೆಲಸ. ಗಣಪತಿ ಶಾಸ್ತ್ರಿಗಳು ಬರದಿದ್ದರೂ ಅವರ ಮಂತ್ರ ಮನೆ ತುಂಬುತಿತ್ತು.

ಪೂಜೆಯಾದ ನಂತರ ಊಟ ..ಆಹಾ ಒಬ್ಬಟ್ಟು, ಪಾಯಸ, ಕೋಸಂಬರಿ, ಪಲ್ಯಗಳು ಮಾರ್ಕೆಟ್ಟಿಂದ ತಂದ ಬಾಳೆ ಎಲೆ ತುಂಬಾ ಬಡಿಸಿಕೊಂಡು ಎಲ್ಲರೂ ಒಟ್ಟು ಕೂತು ಊಟ ಮಾಡುವುದು.ಅಮ್ಮನ ಮನೆಯಲ್ಲಿ ಹಬ್ಬ 2007

ಸಂಜೆ ಅರಿಶಿನ ಕುಂಕುಮ ತಗೋಳೋಕೆ ಮುತೈದೆಯರೆಲ್ಲಾ ಮನೆಗೆ ಬರೋದು. ಅವರ ಮನೆಗಳಿಗೆ ನಾವು ಹೋಗೋದು, ಇದು ರಾತ್ರಿಯವರೆಗೆ ನಡೆಯುತ್ತಿತ್ತು. ರಾತ್ರಿ ಮತ್ತೊಮ್ಮೆ ದೇವಿಗೆ ಪೂಜೆ ಮಾಡಿ, ಕಲಶ ಕದಲಿಸಿದ ಮೇಲೆ ಊಟ, ನಿದ್ದೆ. ಮಾರನೆಯ ದಿನ ಕ್ಲೀನಿಂಗ್ ಕೆಲಸ!!

ಈಗ ಇಲ್ಲಿ ವಿವಿಧ ಭಾರತಿ / ದೂರದರ್ಶನ ಇಲ್ಲದಿದ್ದರೇನಂತೆ ನಮ್ಮನೆ ಕಂಪ್ಯೂಟರಿಲ್ಲೇ ಕಮಲದಾ ಮೊಗದೋಳೆ, ಕಮಲದಾ ಕಣ್ಣೋಳೆ ಕಮಲವಾ ಕೈಯಲ್ಲಿ ಹಿಡಿದೋಳೆ, ಮಹಾಲಕ್ಷ್ಮಿ ಮನೆಗೆ ಬಾರಮ್ಮ ಕೇಳುತ್ತಾ, ಅದೇ ಗಣಪತಿ ಶಾಸ್ತ್ರಿಗಳಿಂದ ವ್ರತವಿಧಾನವನ್ನು ಕನ್ನಡ ಆಡಿಯೋದಲ್ಲಿ ಕೇಳಿಸಿಕೊಂಡು ಪೂಜೆ ಮಾಡ್ತೀವಿ. ಆಫ್ರಿಕಾ, ಆಸ್ಟ್ರೇಲಿಯಾ ಇತರೆ ದೇಶಗಳನ್ನು ಹೋಲುವ ಆಕಾರದ ಒಬ್ಬಟ್ಟು ಮಾಡಿಕೊಂಡು, ಇಲ್ಲಿ ಸಿಗುವ ತರಕಾರಿಯ ಪಲ್ಯ ತಯಾರಿಸಿ ಪಿಂಗಾಣಿ ತಟ್ಟೆಯಲ್ಲಿ ಗೆಳೆಯರೊಡನೆ ಸೇರಿ ಊಟ ಮಾಡಿ ಹಬ್ಬ ಮಾಡ್ತೀವಿ.ನಮ್ಮನೆ ಹಬ್ಬ 2008

ನನ್ನ ಬ್ಲಾಗ್ ಓದುವ ಗೆಳೆಯರೆಲ್ಲರಿಗೆ ಮತ್ತು ಅವರ ಮನೆಯವರಿಗೆ ಹಾಗು ನೆಂಟರಿಷ್ಟರಿಗೆ ವರಮಹಾಲಕ್ಷ್ಮಿ ವ್ರತದ ಶುಭಾಶಯಗಳು. ಆ ದೇವಿಯು ಎಲ್ಲರ ಸಂಕಷ್ಟಗಳನ್ನು ದೂರಮಾಡಿ, ಬಾಳಿನಲ್ಲಿ ಸುಖ ಶಾಂತಿ ಶಾಶ್ವತವಾಗಿ ನೆಲೆಸುವಂತೆ ಮಾಡಿ, ಸಮೃದ್ಧಿಯನ್ನು ದಯಪಾಲಿಸಲಿ!!!

23 comments:

ರೂಪಶ್ರಿ,,
ಅಲ್ಲೆಲ್ಲೋ ಇದ್ದರು,,, ನಮ್ಮ ಹಬ್ಬ, ನಮ್ಮ ಅಚಾರ,,,, ಬಿಡುವುದಿಲ್ಲ ಅಲ್ವ.....ವರಮಹಾಲಕ್ಷ್ಮಿ ಹಬ್ಬದ ಸೋಬಗನ್ನ ಚೆನ್ನಾಗಿ ವರ್ನಿಸಿದ್ದಿರ.....
ಧನ್ಯವಾದಗಳು.....ನಿಮಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು

ರೂಪ,

ನಿಮಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.

ಮತ್ತೆ ನೀವು ಬರೆದ ಲೇಖನ ಓದಿದೆ. ಎಲ್ಲಾ ಥೇಟ್ ನಮ್ಮ ಮನೆ ತರಾನೆ. ಮೊದಲು ನಮ್ಮ ತಾಯಿ ಮಾಡುತ್ತಿದ್ದರು. ಅದೇ ರೀತಿ ಈಗ ನನ್ನ ಮಾಡುತ್ತಿದ್ದಾಳೆ.

ಇವತ್ತು ನನ್ನಾಕೆಯ ಒತ್ತಾಯದ ಮೇರೆಗೆ ಕೆ.ಆರ್.ಮಾರುಕಟ್ಟೆಗೆ ಹೋದೆವು. ಮೊದಲು ನಾನು ಚಿಕ್ಕವನಿದ್ದಾಗ ಅಮ್ಮನ ಜೊತೆ ಹೋಗುತ್ತಿದೆ. ಇವರೆಲ್ಲಾ ಏಕೆ ಈಗೆ ಗಡಿಬಿಡಿಯಿಂದ ಇದೊಂದೆ ಜಾಗದಲ್ಲಿ ಇಕ್ಕಟ್ಟಿನಲ್ಲಿ ಹೀಗೆ ಓಡಾಡುತ್ತಾರೆ ಅಂತ ಅನ್ನಿಸುತ್ತಿತ್ತು. ಈಗ ನನ್ನ ಶ್ರೀಮತಿಯ ಜೊತೆ ಹೋದರೂ ಅಲ್ಲಿನ ಜನರು ಅದ್ಯಾಕೆ ಇಷ್ಟೊಂದು ಗಡಿಬಿಡಿಯಿಂದ ಇರುತ್ತಾರೆ ಅನ್ನಿಸಿತು. ಆದೃಷ್ಟಕ್ಕೆ ಕ್ಯಾಮೆರಾ ತೆಗೆದುಕೊಂಡು ಹೋಗಿದ್ದರಿಂದ ಸ್ವಲ್ಪ ಹೊತ್ತಿಗೆ ಅವಳಿಂದ ತಪ್ಪಿಸಿಕೊಂಡು ಫೋಟೋ ತೆಗೆಯಲು ಹೋದೆ. ಮಾರುಕಟ್ಟೆ ಅನೇಕ ಚಿತ್ರಗಳು ನನ್ನ ಸೆರೆಯಾದವು. ಮನೆಗೆ ಬರುವ ಹೊತ್ತಿಗೆ ಇಬ್ಬರು ಸುಸ್ತು. ನಾಳೆ ನನ್ನ ಅಮ್ಮ ಮತ್ತು ಅವಳು ಇಬ್ಬರು ಹಬ್ಬಕ್ಕೆ ಎಲ್ಲಾ ರೆಡಿಮಾಡಿದ ಮೇಲೆ ನಾನು ಖುಷಿಯಿಂದ ನೋಡಿ ಸಂಬ್ರಮಿಸುವುದಷ್ಟೆ ನನ್ನ ಕೆಲಸ.

ಉಳಿದದನ್ನು ನಾಳೆ ಎಲ್ಲಾ ಆದಮೇಲೆ ಹೇಳುತ್ತೇನೆ.

ಭಾಗ್ಯದ ಲಕ್ಷ್ಮಿ ಬಾರಮ್ಮ ನಮ್ಮಮ್ಮ ನೀ
ಸವ್-ಭಾಗ್ಯದ (ನೂರು-ಭಾಗ್ಯದ) ಲಕ್ಷ್ಮಿ ಬಾರಮ್ಮ
ರೂಪಾश्री ಒಳ್ಳೆಯ ಸಾಂದರ್ಭಿಕ ಪೋಸ್ಟ್.. ಚನ್ನಾಗಿ ವಿವರಣೆ ಮತ್ತು ಚಿತ್ರಣ ನೀಡಿದ್ದೀರ..
ನಿಮ್ಮಲ್ಲಿಗೂ ಸವ್-ಭಾಗ್ಯದ ಲಕ್ಷ್ಮಿ ಬರಲಿ..ಸವ್-ಭಾಗ್ಯ ತರಲಿ...

ರೂಪಾश्री ಒಳ್ಳೆಯ ಸಾಂದರ್ಭಿಕ ಪೋಸ್ಟ್.. ಚನ್ನಾಗಿ ವಿವರಣೆ ಮತ್ತು ಚಿತ್ರಣ ನೀಡಿದ್ದೀರ..
ನಿಮ್ಮಲ್ಲಿಗೂ ಸವ್-ಭಾಗ್ಯದ ಲಕ್ಷ್ಮಿ ಬರಲಿ..ಸವ್-ಭಾಗ್ಯ ತರಲಿ...
ನಿಮ್ಮ ಹಿಂದಿನ ಪೋಸ್ಟ್ ನಲ್ಲಿನ ನನ್ನ ಪ್ರತಿಕ್ರಿಯೆಗೆ shape ಕವನವನ್ನು ಪ್ರಯತ್ನಿಸುವಂತೆ ನನಗೆ ಬರೆದಿದ್ದೀರಿ..ನಿಮ್ಮ ಆಹ್ವಾನಕ್ಕೆ ತಲೆಬಾಗಿ ನನ್ನ ಭಾವಮಂಥನ ಬ್ಲಾಗ್ ನಲ್ಲಿ ಹಾಕಿದ್ದೇನೆ ನೋಡಿ ನನಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

This was a nice post Roops, made me nostalgic too. Took me a while to read though, kannada odhodhralli sakath slow naanu hehe!:P

Nimagoo Varamahalakshmiya hardhika shubhashayagalu :)

ರೂಪಾಶ್ರೀಯವರೆ...

ಚಂದದ ಫೋಟೊಗಳ ಸಂಗಡ..
ಸುಂದರ ಲೇಖನ...

ನಿಮಗೂ...
ಸರ್ವರಿಗೂ ...
ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು...

ಮೇಡಂ, ಹಬ್ಬದ ನೆನಪುಗಳನ್ನು ಮಾಡಿಕೊಂಡಿದ್ದೀರಿ. ದೂರದೂರಿನಲ್ಲಿ ಇವೆಲ್ಲ ನೆನಪುಗಳು ಮತ್ತಷ್ಟು ಪುಳಕಗೊಳಿಸುತ್ತವೆ. ಅದರ ಸಂತಸವನ್ನು, ನಲಿವನ್ನು ಸವಿವರವಾಗಿ, ಸರಳವಾಗಿ ತಿಳಿಸಿದ್ದೀರಿ.

ನಿಮಗೂ ಮತ್ತು ನಿಮ್ಮ ಕುಟುಂಬ ಸದಸ್ಯರೆಲ್ಲರಿಗೂ ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು.

ಶುಭ ಹಾರೈಕೆಗಳೊಂದಿಗೆ,

ಚಂದ್ರಶೇಖರ ಬಿ.ಎಚ್.

Roopashree..Chennaagi habbada vivarane kottiddeera..Mysorige hogi banda haage aythu..nimagu kooda varamahaalaxmi habbada shubhashayagalu..

Roopa
Nimagu Vramahalaksmi habbada shubhashayagalu. nimma maneyalli habba chennagi aayitu anta aashisutteeni :) ee varshada photovannoo hanchikoLLi.

ಗುರು ಅವರೆ,
ಎಲ್ಲಿದ್ದರೇನಂತೆ ನಮ್ಮತನ ಬಿಡಬಾರದಲ್ವಾ? ಶುಭಾಶಯಗಳಿಗೆ ವಂದನೆಗಳು!

ಶಿವು,
ಮಾರ್ಕೆಟ್ಟಿಗೆ ಹೋಗೋ ಕೆಲಸ ಮಾತ್ರ ನನ್ನಿಂದಾಗದು. ಹಬ್ಬವಿಲ್ಲದೆ ಬಿಡುವಿನ ದಿನದಲ್ಲಿ ಒಂದೆರೆಡು ಬಾರಿ ಅಪ್ಪನ ಜೊತೆಗೆ ಹೋಗಿರುವೆ, ಅದೇ ನಾನ್ಗೆ ಸುಸ್ತು ಮಾಡಿಸಿಬಿಟ್ಟಿದೆ!!
ಅಂತೂ ಸದ್ಯದಲ್ಲೇ ನಮಗೆ ಮಾರುಕಟ್ಟೆಯ ದರ್ಶನವಾಗಲಿದೆ ಅಂತ ಆಯ್ತು:)
ನಿಮ್ಮ ಮನೆಯಲ್ಲಿ ಹಬ್ಬ ಹೇಗಾಯ್ತು?

ಆಜಾದ್ ಅವರೆ,
ನಿಮ್ಮ ಹಾರೈಕೆಗಳಿಗೆ ಸವ್ ವಂದನೆಗಳು!! ಓಹ್, ಆಗ್ಲೇ ಒಂದು ಶೇಪ್ಡ್ ಕವನ ರೆಡಿ ಮಾಡಿಬಿಟ್ಟ್ರಾ? ನಿಮ್ಮ ಭಾವ-ಮಂಥನಕ್ಕೆ ಖಂಡಿತಾ ಬಂದು ನಿಮ್ಮ ಪ್ರಯತ್ನವನ್ನು ನೋಡಿ ಪ್ರತಿಕ್ರಿಯಿಸುವೆ:)

Thanks nams for having read my blog thou its in kannada :))
nindu habba hEgaaytu?

ವಂದನೆಗಳು ಪ್ರಕಾಶ್ ಆವ್ರೆ!

ಚಂದ್ರಶೇಖರ್ ಅವರೆ,
ನಿಮ್ಮ ಮಾತು ನಿಜ, ದೂರದೂರಿನಲ್ಲಿ ಇಂಥಾ ಬಹಳಷ್ಟು ನೆನಪುಗಳು ನಿತ್ಯ ಸಂಗಾತಿ ಆಗಿದೆ!!
ನಾವೂ ಮೂರೂ ಜನ ಮಕ್ಕಳು ಒಂದೊಂದು ದೇಶದಲ್ಲಿದ್ದೀವಿ ಆದ್ದರಿಂದ ಈಗ ಅಮ್ಮನ ಮನೆಯಲ್ಲಿ ಹಬ್ಬ ಬಹಳ ಸಿಂಪಲ್ ಆಗಿದೆ.. ಮುಂದೊಮ್ಮೆ ಮತ್ತೆ ಎಲ್ಲರೂ ಕೂಡಿ ಹಬ್ಬ ಮಾಡೋ ಹೊಸ ಆಸೆ ಹೊಮ್ಮಿದೆ!

Vidya,
khaMDitaa phOTOs haMchikoLLuve:) neevoo kaLuhisi..

ರೂಪಶ್ರಿ,

ನಾವು ಮನೆ ಬದಲಿಸಿ ಐದು ತಿಂಗಳಷ್ಟೇ ಆಗಿದ್ದರಿಂದ ನಮಗೆ ಅಲ್ಲಿನ ವಾತಾವರಣ ಹೊಸದು. ನಮ್ಮ ಮನೆಯಲ್ಲಿ ಹಬ್ಬದ ಸಂಭ್ರಮ ಜೋರಾಗಿಯೇ ಇತ್ತು. ನಮ್ಮ ಇಡೀ ಬಿಲ್ಡಿಂಗಿನಲ್ಲಿ[ಒಟ್ಟು ಹದಿಮೂರು ಮನೆಗಳು]ಎಲ್ಲರ ಮನೆಯಲ್ಲೂ ಸಂಬ್ರಮವೋ ಸಂಭ್ರಮ. ಹೆಂಗಸರೆಲ್ಲಾ ಸಡಗರದಿಂದ ಎಲ್ಲರ ಮನೆಗೂ ಓಡಾಡುತ್ತಿದ್ದರು. ಅಲ್ಲಿ ನನಗೇನು ಕೆಲಸ ಸುಮ್ಮನೆ ಕಂಪ್ಯೂಟರ್ ಕುಟ್ಟುತ್ತಿದ್ದೆ. ಮುಂಜಾನೆ ಮೂರುಗಂಟೆಗೆ ಎದ್ದು ಎಲ್ಲಾ ಸಿದ್ದತೆ ಮಾಡಿಕೊಂಡು ಹಬ್ಬ್ಗಆಚರಿಸಿ ಎಲ್ಲರ ಮನೆಯನ್ನು ಸುತ್ತುಹಾಕಿ ರಾತ್ರಿ ಮಲಗುವ ಹೊತ್ತಿಗೆ ೧೧ಗಂಟೆ. ಆದ್ರೂ ಈ ಹೆಂಗಳೆಯರಿಗೆ ಸುಸ್ತೇ ಆಗಿರಲಿಲ್ಲ ಅದೇನು ಗುಟ್ಟೋ ನನಗೆ ಗೊತ್ತಾಗಲಿಲ್ಲ. ನನಗೆ ಅವರ ಓಡಾಟವನ್ನು ನೋಡಿಯೇ ಸುಸ್ತಾಗಿತ್ತು.

ಹಬ್ಬ ಮುಗಿದು ಈಗ ಮತ್ತೆ ಎಂದಿನಂತೆ ನಿತ್ಯವಾತವರಣಕ್ಕೆ ನಮ್ಮ ಓಣಿಯ ಮಹನೀಯರೆಲ್ಲಾ ಬಂದಿದ್ದರೂ, ಈ ಮಹಿಳೆಯರು ಮಾತ್ರ[ನನ್ನಾಕೆಯು ಸೇರಿದಂತೆ]ಇನ್ನೂ ಹಬ್ಬದ ಗುಂಗಿನಿಂದ ಹೊರಬಂದಿಲ್ಲ.

ಶಿವು,
ಹೊಸ ಮನೆಯಲ್ಲಿ ಹೊಸ ಹೊಸ ಸ್ನೇಹಿತರೊಡನೆ ಹಬ್ಬ ಜೋರಾಗಿಯೇ ಮಾಡಿದ್ದೀರ! ಹಬ್ಬದ ತಿಂಡಿಗಳು ಮುಗಿದರೂ ಹಬ್ಬದ ಗುಂಗು ಮುಗಿಯೊಲ್ಲ, ಇದು ಶ್ರಾವಣ ಸಾರ್:)
"ಅಲ್ಲಿ ನನಗೇನು ಕೆಲಸ ಸುಮ್ಮನೆ ಕಂಪ್ಯೂಟರ್ ಕುಟ್ಟುತ್ತಿದ್ದೆ"... ಅರ್ರೆ ಅದೇನು ಹೀಗೆ ಮಾಡಿದ್ರೆ ರುಚಿರುಚಿ ಹಬ್ಬದ ತಿಂಡಿ ತಿನ್ನುತ್ತಾ ಹೊಟ್ಟೆ ತುಂಬಿಸಿಕೊಳ್ಳೊದು, ಹಾಗೆ ಸಿಂಗಾರ ಮಾಡಿಕೊಂಡು ಓಡಾಡುವ ಲಲನೆಯರ ನೋಡುತ್ತಾ ಕಣ್ಣ್ ತುಂಬಿಸಿಕೊಳ್ಳೊದು ನಿಮ್ಮ ಕೆಲಸ ಅಲ್ವೇನ್ರಿ ;)

ತಡವಾಗಿಯಾದರೂ ಹಬ್ಬದ ಶುಭಾಶಯಗಳು , ಸುಂದರವಾಗಿ ವರ್ನಿಸಿದ್ದಿರ

ರೂಪಾ ಮೇಡಮ್,

ನೀವೇಳಿದಂತೆ ನಾನು ಮಾಡಲಾರೆ. ನಮ್ಮ ಓಣಿಯ ಅಕ್ಕತಂಗಿಯರೆಲ್ಲಾ ಹಬ್ಬದ ದಿನಕ್ಕಿಂತ ಉಳಿದ ದಿನಗಳಲ್ಲೇ ಸಹಜವಾಗಿ ಸುಂದರವಾಗಿರುತ್ತಾರೆ ಚೆನ್ನಾಗಿ ಮಾತಾಡಿಸುತ್ತಾರೆ. ಮತ್ತೆ ಇನ್ನುಳಿದ Lkg ಯಿಂದ 2nd p.u.c ಓದುತ್ತಿರುವ ಹೆಣ್ಣು ಗಂಡು ಮಕ್ಕಳೆಲ್ಲಾ ರಾಜಕುಮಾರ,ಕುಮಾರಿಯರಂತೆ ಮೆರಿತಿದ್ರು. ನಾನು ಅವರನ್ನೆಲ್ಲಾ ಚೆನ್ನಾಗಿ ಹೊಗಳಿ,ರೇಗಿಸಿ, ಮರಹತ್ತಿಸಿ, ಸಕ್ಕತ್ ಮಜ ತೆಗೆದುಕೊಂಡಿದ್ದೆ....ಒಟ್ಟಾರೆ ಈ ಬಾರಿ ವರಮಹಾಲಕ್ಷ್ಮಿ ಹಬ್ಬ ಬಲು ಸೊಗಸೆನಿಸಿತ್ತು...

ಡಾ. ಗುರುಮೂರ್ತಿ ಅವರೆ,
ನಿಮ್ಮ ಶುಭಾಶಯಗಳಿಗೆ ವಂದನೆಗಳು!

ಶಿವು,
ನೀವೇ ಹೇಳಿದಂತೆ ನೈಜವಾಗಿಯೇ ಸುಂದರವಾಗಿರುವ ಅಕ್ಕಪಕ್ಕದ ಮನೆ ಹೆಂಗಸ್ರು(ಅಕ್ಕ-ತಂಗಿಯರು), ಪುಟ್ಟ/ದೊಡ್ಡ ರಾಜಕುಮಾರಿಯರು ಹಬ್ಬದ ದಿನ ಸಡಗರದಿಂದ ಓಡಾಡುವುದನ್ನು ನೋಡುತ್ತಾ ಕಣ್ಣ್ ತುಂಬಿಸಿಕೊಂಡು ಆನಂದಿಸುವು ಅಂತ ಹೇಳಿದ್ದೆ. ನಾನ್ ಹೇಳಿದ ಮಾತು ನಿಮಗೆ ಸರಿಯೆನಿಸದಿದ್ದ್ರೆ ಕ್ಷಮಿಸಿ.
ಅಂತು ಹಬ್ಬ ಸೊಗಸಾಗಿತ್ತಲ್ಲ ಸಾಕು ಬಿಡಿ:)

Post a Comment