Wednesday, July 08, 2009

ಅಮ್ಮ, ನಾನು ಪಿಶ್!!!


ಈಗ ನಮ್ಮೂರಲ್ಲಿ ಬೇಸಿಗೆ ತುಂಬಾ ಜೋರಾಗಿದೆ. ದಿನ ಸೂರ್ಯ ಮುಳುಗೋದು ರಾತ್ರಿ ಒಂಬತ್ತಕ್ಕೆ. ದಿನವಿಡೀ ಸುಡು ಸುಡು ಅಂತಾಯಿರುತ್ತೆ, ಹೊರಗೆ ಹೋಕೆ ಆಗೊಲ್ಲ. ಪೂಲ್ ನಲ್ಲಿ ಆಟ ಮಿಸ್ಸ್ ಹಾಗಾಗಿ ಪುಟ್ಟಿಗೆ ಸ್ವಲ್ಪ ಬೋರ್. ಅದಕ್ಕೆ ದಿನಾ ಅವಳನ್ನ ಮನೇಲಿ ’ಸ್ನಾನ ತೊಟ್ಟಿ/ ಟಬ್’ ನಲ್ಲಿ ಸ್ವಲ್ಪ ಹೊತ್ತು ಆಟವಾಡಲು ಬಿಡೋದು!
ಇವತ್ತು ಹಾಗೆ ಆಡುತ್ತಿದ್ದವಳು "ಅಮ್ಮ, ಪಿಶ್" ಅಂದ್ಲು. ನಾನು "ಎಲ್ಲಿ ಪುಟ್ಟಿ?" ಅಂದೆ. ಅದಕ್ಕವಳು "ಗೀಡು ಗೀಡು (ಅಂದ್ರೆ ನೀರು)" ಅಂತದ್ಲು. ನೀರು ಸರಿ, ಫಿಶ್ ಎಲ್ಲಮ್ಮ ಅಂದಿದಕ್ಕೆ "ನಾನು" ಅನ್ನೋದೇ !!!
ಮೊನ್ನೆ ಅವಳ ಬುಕ್ ನಲ್ಲಿರೋ ಫಿಶ್ ತೊರಿಸುತ್ತಾ ಅದು ನೀರಲ್ಲಿ ಇರುತ್ತೆ ಇತ್ಯಾದಿ ಎಲ್ಲಾ ಹೇಳಿದ್ದೆ. ಈಗ ನೀರಿನಲ್ಲಿರೋ ತಾನೂ ಕೂಡ ಫಿಶ್ ಅನ್ನೋದು ಅವಳ ಅನಿಸಿಕೆ.

3 comments:

ಸೂಪರ್ ಪುಟ್ಟಿ ಫಿಶ್.........ಸಕತ್ ಆಗಿ ಇದೆ.......ಪುಟ್ಟ ಟಬ್ ಫಿಶ್ .....

ಬ್ಲಾಗಿನ ಹೊಸ ಡ್ರೆಸ್ ಕೂಡ ಚೆನ್ನಾಗಿ ಇದೆ...... ಹೀಗೆ ಮುಂದುವರಿಯಲಿ......
Wish you all the best

ನಿಜವಾಗಿ ಖುಷಿ ಪಟ್ಟೆ. ಹಾಗೇ ನಿಮ್ಮ ಶ್ರಮ ತಾಳ್ಮೆಗೆ ಹ್ಯಾಟ್ಸಾಫ್!!!!!!!

ಗುರು ಮತ್ತು ಸತ್ಯ ಸರ್,
ನಿಮ್ಮ ಹಾರೈಕೆಗಳಿಗೆ ವಂದನೆಗಳು! ನಿಮ್ಮ ಪ್ರೋತ್ಸಾಹ ಪುಟ್ಟಿಗೆ ಹೀಗೆ ಇರಲಿ.

ಪುಟ್ಟಿ ಹೇಳಿದ್ದು:
"ಥಾಂತೂ ಆಂಕೀಈ(uncle)" :)

Post a Comment