Tuesday, July 21, 2009

ಮನೆ ಮನೆ ಮುದ್ದು ಮನೆ



ಮನೆ ಮನೆ ಮುದ್ದು ಮನೆ

ಮನೆ ಮನೆ ನನ್ನ ಮನೆ

ತಾಯಿ ಮುತ್ತು ಕೊಟ್ಟ ಮನೆ

ತಂದೆ ಪೆಟ್ಟು ಕೊಟ್ಟ ಮನೆ

ಮನೆಗೆ ಬಂದ ನೆಂಟರೆಲ್ಲ ಕೂಗಿ ಕರೆದು ಕೊಬರಿ ಬೆಲ್ಲಗಳನು ಕೊಟ್ಟು

ಸವಿಯ ಸೊಲ್ಲ ನಾದುತಿದ್ದ ನಮ್ಮ ಮನೆ




ಮನೆ ಮನೆ ಮುದ್ದು ಮನೆ




ನಾನು ನುಡಿಯ ಕಲಿತ ಮನೆ

ನಾನು ನಡಿಗೆ ಅರಿತ ಮನೆ

ಹಕ್ಕಿ ಬಳಗ ಸುತ್ತ ಕೂಡಿ

ಬಯ್ಳು ಬೆಳಗು ಹಾಡಿ ಹಾಡಿ

ಮಲೆಯನಾದ ಸದ್ದು ಮಾಡಿ ನಲಿಸುತಿದ್ದ ನಮ್ಮ ಮನೆ




ಮನೆ ಮನೆ ಮುದ್ದು ಮನೆ




ಮೊದಲ ಮಿಂಚು ಹೊಳೆದ ಮನೆ

ಮೊದಲ ಗುಡುಗು ಕೇಳ್ದ ಮನೆ

ಮೊದಲ ಮಳೆಯು ಕರೆದು ಕರೆದು

ಹೆಂಚ ಮೇಲೆ ಸದ್ದು ಹರಿದು ಮಾದಿಯಿಂದ ನೀರ ಸೂರಿದು ಬೆರಗ ನಿತ್ತ ನಮ್ಮ ಮನೆ




ಮನೆ ಮನೆ ಮುದ್ದು ಮನೆ




ಹೆತ್ತ ತಾಯಿ ಸತ್ತ ಮನೆ

ಮತ್ತೆ ತಂದೆ ಹೋದ ಮನೆ

ಗಿರಿಜನರಲಿ ಬಿಟ್ಟ ಮನೆ ಕಿಟ್ಟಿ ಬೆಂದು ಸಂದ ಮನೆ

ಬಾಲ್ಯ ಬಾಡಿ ಬಿದ್ದ ಮನೆ ಆದರೆನಗೆ ... ನನ್ನ ಮನೆ



ಮನೆ ಮನೆ ಮುದ್ದು ಮನೆ



ಕಬ್ಬಗಳನು ಕಂಡ ಮನೆ

ಹಬ್ಬ ದೂಟ ಉಂಡ ಮನೆ

ಅಜ್ಜಿ ಅಜ್ಜರೆಲ್ಲರಿದ್ದು ಗೆಳತಿ ಗೆಳೆಯರೆಲ್ಲರಿದ್ದು

ಬಾಳಿ ಬದುಕಿ ನರಳಿ ಬಿದ್ದು ಮಾಯವಾದ ನಮ್ಮ ಮನೆ



ಮನೆ ಮನೆ ಮುದ್ದು ಮನೆ



ತಾಯಿ ಮಿನ್ದ ಕೆರೆಯ ಮನೆ

ಬಟ್ಟೆ ಹೊಗೆದ ತೊರೆಯ ಮನೆ

ತಾಯಿ ಅಡಿಯ ದೂಳಿಯಿಂದ ತಂದೆ ಯುತ್ತ ಮಣ್ಣಿನಿಂದ

ಗಿರಿಜೆ ಬಿದ್ದ ಮಟ್ಟಿಯಿಂದ ಮಂಗಳದ ನಮ್ಮ ಮನೆ



ಮನೆ ಮನೆ ಮುದ್ದು ಮನೆ



ನಾನು ಬದುಕೊಳುಳಿವ ಮನೆ

ನಾನು ಬಾಳಿ ಅಳಿವ ಮನೆ

ನನ್ನದಲ್ಲ ಇಳಿಯೊಳಿನ್ದು ಹೆಮ್ಮೆಯಿಂದ ನನ್ನದೆಂದು

ಬೆಂದು ಬಳಲಿದಾಗ ಬಂದು ನೀರು ಕುಡಿವ ನನ್ನ ಮನೆ



ಮನೆ ಮನೆ ಮುದ್ದು ಮನೆ



--ಕುವೆಂಪು





7 comments:

ಕುವೆಂಪು ಅವರ ಈ ಕವಿತೆಯನ್ನು ನಿಮ್ಮ ೀ ಬ್ಲಾಗಿನಲ್ಲಿ ಮತ್ತೊಮ್ಮೆ ಓದಲು ಖುಷಿಯಾಯಿತು. ಈ ಹಾಡು ನನ್ನ ಮಗಳಿಗೆ ತುಂಬಾ ಇಷ್ಟ. ನನ್ನ ಮೊಬೈಲಿನಲ್ಲಿ ಅದನ್ನು ಆಗಾಗ ಕೇಳುತ್ತಿರುತ್ತೇವೆ.

ಸತ್ಯ ಸರ್,
ನಿಮ್ಮ ಮಗಳಿಗೂ ಈ ಹಾಡು ಇಷ್ಟ ಅಂತ ತಿಳಿದು ಖುಶಿ ಆಯ್ತು:) ನಾವೂ ಆಗಾಗ್ಗೆ ಇದನ್ನು ಕೇಳುತ್ತಿರುತ್ತೇವೆ

Blog chennagide .. ella Kannada dalli nodi bahalha santosha aaythu :)

Swati avare,
Blog iShTa paTTidakke thanks:) nimma blog gaLannu nODide, very well designed blogs, templates tumba ishta aaytu.. posts odi comment maaduve..

Wow..olleya padya kuvempuravarinda..namige thilisiddake thumbna thanks..

ಕುವೆ೦ಪುರವರ ಮಕ್ಕಳ ಸಾಹಿತ್ಯದ ಬಗ್ಗೆ ನಾನು ನೋಡಿರಲಿಲ್ಲ. ಅವರ ಈ ಪದ್ಯ ಪರಿಚಯ ಮಾಡಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ಪುಟ್ಟೀ ಪ್ರಪ೦ಚ ಅದ್ಭುತ ಲೋಕ. ಪ್ರತಿಸರ್ತಿ ಪುಟ್ಟೀಯ ಮುದ್ದಾದ ಹೊಸ ಫೋಟೋದೊ೦ದಿಗೆ ಅವಳ ಹೊಸ ಅವತಾರದೊ೦ದಿಗೆ ಹಬ್ಬಹರಿದಿನಗಳ ಪರಿಚಯ ಹಾಗೂ ಕಸ್ತೂರಿ ಕನ್ನಡ ತೋಟದ ಒ೦ದು ಮುದ್ದಾದ ಪದ್ಯ ಹೂ ಸಮರ್ಪಿಸಿ ಓದುಗರಿಗೆ ರಸದೌತಣ ಬಡಿಸುತ್ತಿರುವಿರಿ. ತಮ್ಮ ಪ್ರಯತ್ನಕ್ಕೆ ಧನ್ಯವಾದಗಳು.

Post a Comment