Friday, July 10, 2009

ಮಗು - ನಗು



ಮಗು - ನಗು

*********

ಮಗುವೆ ನೀನು ನಗುತಲಿರಲು

ಗೆಜ್ಜೆ ಘಲಿರು ಉಲಿಯುತಿರಲು

ಗಿಲಕಿ ಗಿಲಿರು ಗೀತವಿರಲು

ಬದುಕು ಬೆಳಕು ಬೆಳದಿಂಗಳು.

ಕಣ್ಣಿನಂದ ನೋಟ ಹೊಳಪು

ಕೆನ್ನೆ ನೋಡಿ ಎಷ್ಟು ನುಣುಪು!

ಕಾಲು ಬಡಿವ ಆಟ ಹುರುಪು

ಮುಗ್ಧ ಮನವು ಹಾಲು ಬಿಳುಪು.

ಅಂಬೆಗಾಲ ನಂದಲಾಲ

ಬೆಣ್ಣೆ ಮೆದ್ದ ತುಂಟಬಾಲ

ಕಣ್ಣಲೇಕೆ ನೀರ ಜಾಲ?

ಕೊಡಲೊಲ್ಲಳೆ ತಾಯಿ ಹಾಲ?

ಬೆಣ್ಣೆಗೆನ್ನೆ ಹಾಲುಗಲ್ಲ

ಜೇನುಹೊಳೆಯು ತುಟಿಯಲೆಲ್ಲ

ಎಂಥ ಸೊಗಸು ಕಾಣಿರೆಲ್ಲ

ಸುಳ್ಳು ಸುಳ್ಳೇ ಅಳುವ ಮಳ್ಳ.

ಬೊಚ್ಚುನಗು ಬಾಯಿತುಂಬ

ಹಚ್ಚಿದಂತೆ ದೀಪಸ್ತಂಭ.

ಚುಕ್ಕಿ ಚೆಲ್ಲಿ ಬಾನತುಂಬ

ಚಂದ್ರಮ ನಿನ್ನ ಪ್ರತಿಬಿಂಬ.

ಪೂರ್ಣಿಮ

3 comments:

ಅಕ್ಕಾ...
ಮಕ್ಕಳ ಜೊತೆ ಮಗುವಾಗಿಬಿಡೋ, ಮಕ್ಕಳಂದ್ರೆ ತುಂಬಾ ಇಷ್ಟಪಡೋ ನನಗೆ ನಿಮ್ಮ ಬ್ಲಾಗ್ ನನಗೆ ತುಂಬಾ ಖುಷಿಕೊಡುತ್ತಿದೆ. ಥ್ಯಾಂಕ್ಯೂ ಅಕ್ಕಾ. ಬರ್ತಾ ಇರ್ತೀನಿ. ಒಂದಷ್ಟು ಖುಷಿ ಖುಷಿ ಕ್ಷಣಗಳನ್ನು ಅಪ್ಪಿಕೊಂಡು ನನ್ನದೆಯ ಗೂಡಿಗೆ ತಕೊಂಡು ಹೋಗಕ್ಕೆ.
-ಧರಿತ್ರಿ

ಧರಿತ್ರಿ,
ಖಂಡಿತಾ ಆಗಾಗ್ಗೆ ಬಂದು ಪುಟ್ಟಿಯೊಂದಿಗೆ virtual ಆಟವಾಡಿ:)

ಅಗ್ನಿಹೋತ್ರಿ ಆವ್ರೆ,
ಥ್ಯಾಂಕ್ಸ್ !!

Post a Comment