Friday, July 24, 2009

ತಾತನ್ ಹೆಸ್ರು "ಮಾಮು"....

ಪುಟ್ಟಿ ಈಗ ಬಹಳಷ್ಟು ಹೊಸ ಹೊಸ ಮಾತುಗಳನ್ನ ಕಲ್ತಿದ್ದಾಳೆ. ಅಮ್ಮನ ಹೆಸ್ರು ಪೂಪ, ಅಪ್ಪನ ಹೆಸ್ರು "ಏಮಂತ್", ತಾತನ ಹೆಸ್ರು "ಮಾಮು"(ರಾಮು), ಅಜ್ಜಿತಾತ ಇರೋದು "ಇಂಡಾ"(ಇಂಡಿಯಾ) ಎಲ್ಲಾ ಹೇಳ್ತಾಳೆ. ಅಲ್ಲದೇ ವರ್ಲ್ಡ್ ಮ್ಯಾಪಿನಲ್ಲಿ ಇಂಡಿಯಾ, USA, ಆಸ್ಟ್ರೇಲಿಯಾ ಗುರುತಿಸ್ತಾಳೆ.



ಅವಳ ಬುಕ್ ನಲ್ಲಿರೋ ಬಹುತೇಕ ಎಲ್ಲಾ ಪ್ರಾಣಿಗಳನ್ನ ಗುರ್ತು ಹಿಡಿತಾಳೆ. ಅಲ್ಲದೇ ಅವನ್ನು ಅವರಪ್ಪನ ಸ್ಟ್ಯಾಂಪ್ಸ್ ನಲ್ಲಿ ಕೂಡ ಕಂಡುಹಿಡಿದು ತೋರಿಸ್ತಾಳೆ. ಆನಿ, ಆರ್ಚ್(horse), ಡಾಗಿ , ತೌ (cow), ಲಾಯ್(lion), ಫಿಶ್, ಶೀಪ್, ಚಿಚೆನ್ (chicken), ಬಾ (bird), ಬಟ್ (butterfly), ಮನ್ (monkey), ಡಕ್....

ಅವಳಿಗೆ ಬುಕ್ಸ್ ಅಂದ್ರೆ ತುಂಬಾ ಇಷ್ಟ. ಅವಳ ಇತರ ಎಲ್ಲಾ ಆಟದ ಸಾಮಾನುಗಳು ಈಗ ಮೂಲೆ ಸೇರಿವೆ. ಅವಳ ಬಳಿ ಇರೋ ಬುಕ್ಸ್ ಅಲ್ಲದೇ ಆಗಾಗ್ಗೆ ಲೈಬ್ರರಿಯಿಂದಲೂ ಬಹಳಷ್ಟು ಬುಕ್ಸ್ ತರ್ತೀನಿ ಪುಟ್ಟಿಗೆ. ಇಲ್ಲಿಯವರೆಗೆ ಅವಳು ಹೆಚ್ಚು ಇಷ್ಟಪಟ್ಟ ಬುಕ್ಸ್ ಇವು:
Moo, moo who are you? : a fold-out surprise book
Peek-a-baby [Board book]
Peek-a-boo! : a lift-the flap book
Baby loves peekaboo! : touch-and-feel and lift-the-flap
What does baby do? : a first lift-the-flap book [Board book]
Bob's busy saw [Board Book]
What does baby say? [Board book]
Baby animals [Board book]
My big animal book
Pooh's 123
Fruity Cutie Colors
Baby Bop's Counting Book
Barney's Color ಸರ್ಪ್ರೈಸ್

ಪ್ರತಿಯೊಂದು ಬುಕ್ಕನ್ನು ದಿನಕ್ಕೊಂದು ಐದಾರು ಸರ್ತಿ ತಿರುವು ಹಾಕುತ್ತಾ, ಅದರಲ್ಲಿರೋ ಪ್ರತಿಯೊಂದನ್ನು ಗುರುತಿಸಿ ಹೇಳೋದು ಅವಳಿಗೆ ಬಹಳ ಖುಶಿ. ಅವಳು ಹೀಗೆ ಹೇಳೋವಾಗ ಅಮ್ಮಗುಡ್ ಗರ್ಲ್ಹೇಳೋದು ಮರೆತ್ರೆ, ತನಗೆ ತಾನೆ "ದುದ್ದು, ಗುಗ್ಗು" ಹೇಳ್ಕೋತಾಳೆ :-) ಅವಳು ಹೀಗೆ ಬುಕ್ ಓದೊವಾಗ ನನ್ಗೆ ಅಥವಾ ಅವರಪ್ಪನಿಗೆ ಅದು, ಅದು ಅಂತ ಬೆರಳು ಮಾಡಿ ಕೇಳ್ತಾಳೆ. ಅದೇ ನಾವು ಕೇಳಿದ್ರೆ - ಸರಿ ಹೇಳಿ ನಂತರ ಏನೆ ಕೇಳಿದ್ರೂ "ಡಾಡಿಡುಡಾ, ಪಂಪಂ" ಅಂತೆಲ್ಲಾ ಏನೋ ಹೇಳ್ತಾಳೆ. ಅವಳಿಗೆ ಓದಲು ಬಿಡಬೇಕು, ನಾವು ಪ್ರಶ್ನೆ ಮಾಡಬಾರದು!!
ಅದೆ ನಾವು ಸರಿಯುತ್ತರ ಕೊಡದೇ "ಡಾಡಿಡುಡಾ, ಪಂಪಂ" ಅಂತೆಲ್ಲಾ ಅಂದ್ರೆ ಸಿಟ್ಟು ಮಾಡಿಕೊಂಡು "ಬಾಬಿ’(ಬ್ಯಾಡ್ ಬಾಯ್) ಅಂತಾಳೆ:(


ನಮ್ಮ್ ಪುಟ್ಟಿಗೆ ಟಿವಿ ಅಂದ್ರೆ ಅಷ್ಟಕ್ಕೆ ಅಷ್ಟೆ. ಆದ್ರೆ ಕನ್ನಡ ಅಥವಾ ಇಂಗ್ಲೀಶ್ ರೈಮ್ಸ್ ಹಾಕಿದ್ರೆ ನೋಡ್ತಾಳೆ ಅದೂ ಎಲ್ಲಾ ಹಾಡಿಗೂ ತನ್ನದೇ ಶೈಲಿಯಲ್ಲಿ ಆಕ್ಶನ್ ಮಾಡುತ್ತಾ! ಅದ್ ಬಿಟ್ಟ್ರೆ ಅನಿಮಲ್ ಪ್ಲಾನೆಟ್ ಅದ್ರಲ್ಲೂ ಆನೆ, ಪ್ರಾಣಿಗಳಿರೋ "ರಾಮಲಕ್ಷ್ಮಣ", "ಹಾಥಿ ಮೆರೆ ಸಾಥಿ" ಚಿತ್ರಗಳನ್ನ ಸ್ವಲ್ಪ ನೋಡ್ತಾಳೆ.
ರೈಮ್ಸ್ ಅವ್ಳಿಗೆ ಈಗ ನಾವು ಕಾರಿನಲ್ಲಿ ಹೋಗೋವಾಗ ಕೂಡ ಅಮ್ಮ ಹಾಡಿ ಹೇಳ್ಬೇಕು. ತನಗೆ ಯಾವ ರೈಮ್ ಬೇಕು ಅನ್ನೋದನ್ನ ಮಾತಿನಲ್ಲಿ ಅಥವಾ ಆಕ್ಷನ್ ಮಾಡಿ ತೋರಿಸ್ತಾಳೆ. ಇದ್ರಲ್ಲಿ ಅವ್ಳಿಗೆ "ಆನೆ ಬಂತು ಆನೆ", "ಅವಳ ಹೆಸ್ರು ಪದ್ದು", "ಘಂಟೆಯ ನೆಂಟನೆ", "ಚಂದಮಾಮ ಓಡಿ ಬಾ", "Baa baa black sheep", "Hickory Dickory dock", "Row row row your boat", "Twinkle Twinkle little star", "Humpty Dumpty sat on a wall", "Two little dicky birds sat on a wall" ಇವು ತುಂಬಾ ಇಷ್ಟ.

ಅಮ್ಮನಿಗೆ ಅಡಿಗೆ ಮನೆಯಲ್ಲಿ ಸಹಾಯ ಮಾಡೋದು ಅಂದ್ರೆ ಎಲ್ಲೆಲ್ಲಿದ ಖುಶಿ!! ಈರುಳ್ಳಿ ಸಿಪ್ಪೆ ಬಿಡಿಸೋದೇನು, ತಪಾತಿ(ಚಪಾತಿ) ಹಿಟ್ಟನ್ನ ನಾದೋದು, ಲಟ್ಟಿಸೊದು... ಮನೆಯಲ್ಲಿ ಸಣ್ಣದೊಂದು ಪೇಪರ್ ಚೂರು, ಕಸ ಬಿದ್ದಿದ್ರೂ "ಟಾಆ"(ಟ್ರಾಶ್/ಕಸ) ಅಂತ ಕಸದಬುಟ್ಟಿಗೆ ಹಾಕೋದು!! ಹೀಗೆ ದಿನವಿಡೀ ಏನೋ ಮಾಡುತ್ತಾ ಅಮ್ಮನಿಗೆ ಕೆಲ್ಸ ಕೊಡ್ತಾಳೆ:)



4 comments:

makkalu todalu maataduvudannu keluvudee ondu sogasu...:):)

abba Roopa, putti eshtella maatu kaltidaaLe. noDi, keLi tumba khushi ayitu :)

Post a Comment