Thursday, December 29, 2011

ಪುಟ್ಟಿಗೆ ನಾಲ್ಕು ವರ್ಷ

ಪುಟ್ಟಿಗೆ ಇವತ್ತಿಗೆ ನಾಲ್ಕು ವರ್ಷ ಅಂದ್ರೆ ನಂಬೋಕೆ ಆಗ್ತಾಯಿಲ್ಲ! ಆಸ್ಪತ್ರೆಯಲ್ಲಿ ಇವಳು ಜನಿಸಿದ ತಕ್ಷ್ಣಣ ಡಾಕ್ಟರ್ "ಓಹ್! ಮುದ್ದಾದ ಮಗು" ಎಂದು ಉದ್ಗರಿಸಿದ್ದು ಈಗಷ್ಟೇ ಕೇಳಿದಂತೆ ಅನಿಸುತ್ತಿದೆ. ಈ ಪುಟ್ಟಿ ನನ್ನ ಮಡಿಲು ತುಂಬಿ ನಾಲ್ಕು ವರ್ಷಗಳಾಗಿವೆ.  ಅಂದಿನ ಮುದ್ದು ಮುಖದಲ್ಲೀಗ ತುಂಟತನ ತುಂಬಿದೆ:) ಅಪ್ಪ ಅಮ್ಮನ ಮುದ್ದಿನ ಪುಟ್ಟಿಗೆ ಹುಟ್ಟುಹಬ್ಬದ ಶುಭಾಶಯಗಳ...

Monday, November 14, 2011

ಮರಳಿ ಬ್ಲಾಗಿಗೆ ಹಾಜರ್ !

ಮೂರು ತಿಂಗಳ ಕಾಲ ಭಾರತದಲ್ಲಿದ್ದು ಈಗಷ್ಟೇ ಅಮೆರಿಕಾದ ನಮ್ಮ ಮನೆಗೆ ಬಂದಿರುವೆವು. ಅಲ್ಲಿನ ಕೆಲವು ಫೋಟೋಗಳು. ಗಣಪತಿ ಹಬ್ಬ.. ಅತ್ತೆ ಮಗಳು ಖುಷಿ ಜೊತೆ.. ತಾತನ ಸ್ಕೂಟರ್ ಸವಾರಿ ಅಂದ್ರೆ ಇಬ್ಬರಿಗೂ ಬಲು ಇಷ್ಟ  ಚಿಕ್ಕಪ್ಪನ ಮಗಳು 'ಸುಹಾನಿ' ಅಕ್ಕ ಅಂತ ಕರೆದರೆ ಹಿಗ್ಗಿ ಉಬ್ಬುತ್ತಿದ್ದ ಪುಟ್ಟಿ  ಎರಡೂ ಕೈಗಳಿಗೆ ಮೆಹಂದಿ ಹಾಕಿಸಿಕೊಂಡ ಪುಟ್ಟಿ  ಬೀದಿ ಬಸವಣ್ಣನ ಜೊತೆ ತಾನೂ ಒಳಗಾ ಊದುತ್ತಾ.. ಬೀದಿಯ ಹೊಸ ಸ್ನೇಹಿತರ ಜೊತೆ.. ಮನೆಗೆ...

Saturday, August 20, 2011

ತೂಗುವೆ ರಂಗನ ತೂಗುವೆ ಕೃಷ್ಣನ!!!

ತೂಗುವೆ ರಂಗನ ತೂಗುವೆ ಕೃಷ್ಣನತೂಗಿ ಜೋ ಜೋ ಹಾಡುವೆಮೇಲುಕೋಟೆಯ ಸ್ವಾಮಿ ಚೆಲುವರಾಯನಬೇಲೂರ ಶ್ರೀಚೆನ್ನಕೇಶವನಉಡುಪಿಯಲಿ ವಾಸಿಸುವ ಶ್ರೀ ಕೃಷ್ಣನಶ್ರೀರಂಗಪಟ್ಟಣದಿ ಮಲಗಿದವನತೂಗುವೆ ರಂಗನ ತೂಗುವೆ ಕೃಷ್ಣನತೂಗಿ ಜೋ ಜೋ ಹಾಡುವೆಕಣ್ಣಲ್ಲಿ ಹುಣ್ಣಿಮೆ ತಂದವನನಗುವಲ್ಲೇ ಮಲ್ಲಿಗೆ ಚೆಲ್ಲುವನಾಚಲುವಲ್ಲೆ ತಾವರೆಯ ನಾಚಿಸುನವಈ ಮನೆಯ ಬೆಳಕಾಗಿ ಬಂದವನತೂಗುವೆ ರಂಗನ ತೂಗುವೆ ಕೃಷ್ಣನತೂಗಿ ಜೋ ಜೋ ಹಾಡುವೆಆಲದೆಲೆಯ ಮೇಲೆ ಮಲಗಿದವನಹತ್ತವತಾರದ ಪರಮಾಥ್ಮನಮತ್ತೆ ನಮಗಾಗಿಳೆಗೆ ಬಂದವನಜಗವನ್ನೆ ತೂಗುವ ಜಗದೀಶನತೂಗುವೆ ರಂಗನ ತೂಗುವೆ ಕೃಷ್ಣನತೂಗಿ ಜೋ ಜೋ ಹಾಡ...

Sunday, August 14, 2011

ಬೆಂಗಳೂರಿನಲ್ಲಿ ಪುಟ್ಟಿ !!!

ಪುಟ್ಟಿ ಮತ್ತು ನಾನು ಈಗ ನಮ್ಮೂರು ಬೆಂಗಳೂರಿನಲ್ಲಿ ಅಮ್ಮ ಅಪ್ಪ ನ ಜೊತೆಯಿದ್ದೀವಿ. ನಮ್ಮ  ವಿಮಾನ ಪ್ರಯಾಣ ಪುತ್ತಿಗೆ ಬಲು ಇಷ್ಟವಾಯ್ತು. ಸಹ ಪ್ರಯಾಣಿಕರ ಜೊತೆ ಹರಟುತ್ತಾ ಕಾಲ ಕಳೆದಳು ಪುಟ್ಟಿ.  ಇಲ್ಲಿಗೆ ಬಂದಾಗಿನಿಂದಲೂ ಮನೆಯ ಯಾವ ಕೆಲಸ ಇಲ್ಲದಿದ್ದರೂ ಕಂಪ್ಯೂಟರ್ ಮುಂದೆ ಕೂರಲು ಪುರುಸೊತ್ತೇ ಇಲ್ಲ. ಪುಟ್ಟಿಗಂತೂ ಬೀದಿ ತುಂಬಾ ಹೊಸ ಸ್ನೇಹಿತರು.  ಅವರ ಜೊತೆ ಆಟವಾಡುತ್ತಾ ಅವಳಿಗೆ ಮಜವಾಗಿದೆ.  ...

Tuesday, August 02, 2011

ಬ್ಲಾಗ್-ಗೆ ಬಿಡುವು !!

ಇವತ್ತು ನಾನು ಮತ್ತು ಪುಟ್ಟಿ ಬಹಳ ಉತ್ಸುಕರಾಗಿ ಭಾರತಕ್ಕೆ ಹೊರಟಿದ್ದೇವೆ. ಪುಟ್ಟಿಯ ಅಪ್ಪ ಅಕ್ಟೋಬರ್ ನಲ್ಲಿ ಬರುವರು. ಎರಡು ಸ್ತಾಪ್ ಗಳು ಸೇರಿ, ೨೬ ಘಂಟೆಗಳ ವಿಮಾನ ಅದೂ ತಂಟೆಮಾಡುವ ಪುಟ್ಟಿ ಜೊತೆ ಅನ್ನೋ ವಿಷಯ ಸ್ವಲ್ಪ ಶ್ರಮದಾಯಕವೇ ಆದ್ರೂ ಮರಳಿ ಮನೆಗೆ ಹೋಗುವ ಖುಶಿ ಅದನ್ನು ಮರಎಮಾಡಿದೆ!! ೨ ವರ್ಷಗಳ ನಂತರ ಒರ್ರಿಗೆ ಹೋಗ್ತಾಯಿದ್ದು, ಈ ಸರ್ತಿ ೩ ತಿಂಗಳು ಅಲ್ಲಿ ಇರುವ ಇರಾದೆ ಇದೆ. Llanelli, UK ನಲ್ಲಿರುವ ನನ್ನ ಅಣ್ಣನ ಕುಟುಂಬ ಮತ್ತು Melbourne, Australia ದಲ್ಲಿರುವ ತಮ್ಮ ಕೂಡ ಬರುವುದು ನಮ್ಮ ಉತ್ಸಾಹವನ್ನು ಇನ್ನೂ ಹೆಚ್ಚು ಮಾಡಿದೆ. ಅಲ್ಲದೆ ಶ್ರಾವಣ ಮಾಸಕ್ಕೆ ಸರಿಯಾಗಿ ಅಲ್ಲಿ ಹೋಗುತ್ತಿರುವುದರಿಂದ ಈ ಸರ್ತಿ ಎಲ್ಲಾ ಹಬ್ಬಗಳೂ ಮನೆಯಲ್ಲಿ ಅಮ್ಮ-ಅಪ್ಪ-ಅಣ್ಣ-ತಮ್ಮ...

Friday, July 29, 2011

ಕೈ-ಗುರುತಿನ ಭಾರತ ಬಾವುಟ!!

ಕೈಗಳಿಗೆ ಬಣ್ಣ ಹಚ್ಚಿಕೊಂಡು ಮಾಡಿದ ನಮ್ಮ ಭಾರತದ ಬಾವುಟ ಇದು. ಇದನ್ನ ಮಾಡಿದ್ದು ಹೇಗೆ ಹೆಚ್ಚಿನ ಫೋಟೋಗಳ ಜೊತೆ ವಿವರಗಳು ಇಲ್ಲಿ .   ...

Monday, July 25, 2011

ಭಾರತದ ಸ್ವಾತಂತ್ರ್ಯೋತ್ಸವ - ಮಕ್ಕಳ ಚಟುವಟಿಕೆಗಳು !

ಭಾರತದ ಸ್ವಾತಂತ್ರ್ಯೋತ್ಸವದ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಲು ಹಲವು ಚಟುವಟಿಕೆಗಳನ್ನು ಮಾಡಿಸಬಹುದು. ಅಂತರ್ಜಾಲದಲ್ಲಿ ನನಗೆ ಸಿಕ್ಕ ಕೆಲವು ಚಟುವಟಿಕೆಗಳಿವು: ತ್ರಿವರ್ಣ   ಬಾವುಟಗಳ ಕುರಿತು ಕಲಿಯುತ್ತಿರುವ ಪರಿ Little Food Junction ನಲ್ಲಿ ಸ್ಮಿತಾ ಅವರು ಮಾಡಿದ ತ್ರಿವರ್ಣ ಊಟ!! Creative Ideasನ ಪೂಜಾ ಅವರ ಬ್ಲಾಗಿನಲ್ಲಿ ೨೫ಕ್ಕೂ ಹೆಚ್ಚಿನ ತ್ರಿವರ್ಣ ಖಾದ್ಯಗಳು ಉಂಟು! ಹಾಗೇನೆ ಮಹಾನಂದಿ...

Saturday, July 16, 2011

ಗಾಳಿಪಟ!!!

ಅಣ್ಣನು ಮಾಡಿದ ಗಾಳಿಪಟಬಣ್ಣದ ಹಾಳೆಯ ಗಾಳಿಪಟನೀಲಿಯ ಬಾನಲಿ ತೇಲುವ ಸುಂದರಬಾಲಂಗೊಸಿಯ ನನ್ನ ಪಟಬಿದಿರಿನ ಕಡ್ಡಿಯ ಗಾಳಿಪಟಬೆದರದ ಬೆಚ್ಚದ ಗಾಳಿಪಟದಾರವ ಜಗ್ಗಿದೂರದ ನಗಿಸುವ ನನ್ನ...

Saturday, July 09, 2011

ಕಿ ಕಿ ಕಿ ಕಿ ಎನ್ನುತ ಹಾಡೋಣ..

"ಪುಟಾಣಿ ಏಜೆಂಟ್ ೧ ೨ ೩"  ಚಲನಚಿತ್ರದ ಈ ಹಾಡು ಪುಟ್ಟಿಗೆ ಬಲು ಇಷ್ಟ. ಬಹುತೇಕ ಪೂರ್ತಿ ಹಾಡು ಅವಳಿಗೆ ಕಂಠಪಾಠವೂ ಆಗಿದೆ. ಈ ಹಾಡನ್ನು ಆಗಾಗ್ಗೆ ಕೇಳಿ ಸಿಡಿ ಹಾಕಿಸಿಕೊಂಡು ನೋಡುತ್ತಾಳೆ. ಈ ಚಿತ್ರ ಟಿವಿಯಲ್ಲಿ ಬರುತ್ತಿರುವಾಗ ಅವಳು ನಮ್ಮ ಕ್ಯಾಮೆರಾದಲ್ಲಿ ತೆಗೆದಿರುವ ಕೆಲವು ಚಿತ್ರಗಳಿವು: ಸಹ್ಯಾದ್ರಿ ಸಾಲಿನಲಿ ಮಲೆನಾಡ ಕಾಡಿನಲಿ ಬೆಳೆದಿತ್ತು ಭಾರಿ ಆಲದಮರವು ಮೊರದಿತ್ತು ನೂರಾರು ಹಕ್ಕಿಗಳ ಸ್ವರವು ಕಿ ಕಿ ಕಿ ಕಿ ಎನ್ನುತ ಹಾಡೋಣತೂಗಿ ಸಾಗಿ ಎಲ್ಲರು ಹಾರೋಣಸಿಹಿಯಾದ...

Saturday, June 11, 2011

ಜಾರಬಂಡಿ ಆಟ !!

ಜಾರ ಬಂಡಿ ಆಟಜಾರಿ ಬೀಳೊ ಆಟಜಾರಿ ಬಿದ್ದ ರಾಮಣ್ಣಹಲ್ಲು ಮುರಿದು ಚೂರಾಗಿಕಣ್ಣಲ್ ಬಂತು ನೀರುಆಡುತ್ತಿದ್ದ ಮಕ್ಕಳುಅವನ ನಗಿಸಿ ನಕ್ಕರುಹ್ಹ ಹ್ಹ ಹ್ಹ ...<p><p><br> </p></p&...

Saturday, June 04, 2011

ಮಳೆ ಮಳೆ ಮಲ್ಲಪ್ಪ !!

ಮಳೆ ಮಳೆ ಮಲ್ಲಪ್ಪಕೈಯ ಚಾಚೋ ಕರಿಯಪ್ಪಮಳೆ ಮಳೆ ಮಲ್ಲಪ್ಪಕೈಯ ಚಾಚೋ ಕರಿಯಪ್ಪತಿರುಗೊ ತಿರುಗೊ ತಿಮ್ಮಪ್ಪತಿರುಗಲಾರೆ ಉಸ್ಸಪ್ಪ !!ಮಳೆ ಬಂತು ಮಳೆಕೊಡೆ ಹಿಡಿದು ನಡೆಮಣ್ಣಿನಲ್ಲಿ ಜಾರಿ ಬಿದ್ದು ಬಟ್ಟೆ ಎಲ್ಲಾ ಕೊಳೆಬಿಸಿಲು ಬಂತು ಬಿಸಿಲು ಕೋಟು ಟೋಪಿ ತೆಗೆ ಬಾವಿಯಿಂದ ನೀರು ಸೇದಿ ಸೋಪು ಹಾಕಿ ಒಗೆ...

Sunday, May 22, 2011

ತೋಟಕೆ ಹೋಗೊ ತಿಮ್ಮ..

ತೋಟಕೆ ಹೋಗೊ ತಿಮ್ಮತೋಳ ಬಂದೀತಮ್ಮಹಸು ಮೇಯ್ಸೋ ತಿಮ್ಮಹಸು ಹಾದೀತಮ್ಮಒಲೆ ಉರಿಸೊ ತಿಮ್ಮಉರಿ ಸುಟ್ಟೀತಮ್ಮಪಾಠ ಬರೆಯೋ ತಿಮ್ಮಬಳಪ ಇಲ್ಲ ಅಮ್ಮಹೂವು ಬಿಡಿಸೊ ತಿಮ್ಮಹಾವು ಕಚ್ಚೀತಮ್ಮಕಾವಲಿ ತಾರೋ ತಿಮ್ಮಕಾಲು ನೋವು ಅಮ್ಮನೀರು ಸೇದೊ ತಿಮ್ಮಕೈ ನೋವು ಅಮ್ಮಊಟಕೆ ಬಾರೋ ತಿಮ್ಮಓಡಿ ಬಂದೆ ಅ...

Saturday, May 21, 2011

ಹಂಪ್ಟಿ ಡಂಪ್ಟಿ ಕನ್ನಡದಲ್ಲಿ

ಇಂಗ್ಲಿಷ್ ಶಿಶು ಗೀತೆಗಳನ್ನ ಕನ್ನಡಕ್ಕೆ ಅನುವಾದ ಮಾಡಿರುವುದನ್ನು ಹಿಂದೊಮ್ಮೆ ಇಲ್ಲಿ ಬರೆದಿದ್ದೆ.  ಮಕ್ಕಳಿಗೆ ಕಲಿಸಲು ಕನ್ನಡದಲ್ಲೇ ಬೇಕಾದಷ್ಟು ಚೆಂದದ ಶಿಶುಗೀತೆಗಳಿವೆ. ಅವುಗಳ ಜೊತೆಗೆ ಈ ಕನ್ನಡೀಕರಿಸಿದ ಆಂಗ್ಳ ಪದ್ಯಗಳನ್ನೂ ಮಕ್ಕಳಿಗೆ ಪರಿಚಯ ಮಾಡಿಕೊಡಬಹುದು. Humpty Dumpty sat on a wall Humpty Dumpty had a great fall All the king's horses and all the king's men Couldn't put Humpty Dumpty together again ಈ ಹಾಡನ್ನ ನಿಶುಮನೆಯಲ್ಲಿ ಅವರಮ್ಮ ಚಿತ್ರಗಳ ಜೊತೆಗೆ ಬರ್ದಿದ್ದು ಹೀಗೆ.... ಅಲ್ಲಿ ಪುಟ್ಟ ನಿಶು ಈ ಹಾಡನ್ನ ಮುದ್ದಾಗಿ ಹಾಡಿರೋ ವಿಡಿಯೋ ಕೂಡ ಇದೆ ನೋಡಿ ಖುಶಿ ಪಡಿ!! ಮೊಟ್ಟೆರಾಯ ಕೂತ್ಕೊಂಡಿದ್ದ ಮೋಟು ಗೋಡೆ ಮೇಲೆ ಬಿದ್ದೇ...

Thursday, May 12, 2011

ಕುಂಟೆ ಬಿಲ್ಲೆ

ಶಾಲೆಯಿಂದ ಬಂದ್ಮೇಲೆ ಆಡ್ತಾಯಿದ್ದ ಕುಂಟೆ ಬಿಲ್ಲೆ ಆಟ ನೆನಪಿದ್ಯಾ? ಚಪಟ್ಟೆಯಾದ ಕಲ್ಲನ್ನು "ಬಚ್ಚ"ಅಂತ ಇದ್ದದ್ದು.....ಕಡ್ಡಿ ಹಿಡಿದು ಮಣ್ಣಿನ ನೆಲದ ಮೇಲೆ  ಗೆರೆಗಳ ಬರೆಯೋದು.. ರೋಡಿಗೆ ಟಾರ್(ಡಾಂಬಾರು) ಹಾಕಿದ ಮೇಲೆ ಸೀಮೆಸುಣ್ಣ ಅಥವಾ ಇಟ್ಟಿಗೆ ಚೂರಿನಿಂದ ಬರೀತಾ ಇದ್ವಿ.. ಆಮೇಲೆ ”ಬಚ್ಚ’ಗೆ ಮುತ್ತು ಕೊಟ್ಟು, ದೇವರನ್ನು ನೆನದು ಬಚ್ಚ ಗೆರೆಗೆ ತಾಕದಿರಲಿ ಅಂತ ಅವನ ಬೇಡಿ ಕೊಂಡು ಎಸೆದು. ಪಾದ ಗೆರೆಗೆ ತಾಕದಂತೆ ಎಚ್ಚರ ವಹಿಸಿ ಎಲ್ಲಾ ಮನೆಗಳಿಗೆ ಕುಂಟುತ್ತ...

Sunday, May 01, 2011

ಮಲ್ನಾಡಿನ್ ಮೂಲೆನಾಗೆ..

ಚಿತ್ರ: ಸುವರ್ಣ ಸೇತುವೆ (1983) ಸಾಹಿತ್ಯ: ಗೀತಪ್ರಿಯ ಸಂಗೀತ: ವಿಜಯ ಭಾಸ್ಕರ್ ಗಾಯನ: ವಾಣಿ ಜಯರಾಂ ತಂದಾನಿ ತಂದ ನಾನ ತನ ನನನಾ ಮಲ್ನಾಡಿನ ಮೂಲೆನಾಗೆ ಇತ್ತೊಂದು ಸೋಮನ ಹಳ್ಳಿ ಆ ಹಳ್ಳಿಲೆಲ್ಲ ಜನರು ಲೋಕನೆ ಗೊತ್ತಿಲ್ದೋರು ಅದರೊಳಗೆ ಮುದುಕಿ ಒಬ್ಬಳು ದೌಲಿಂದ್ಲೆ ಮೆರಿತಿದ್ಲು ಅವಳಂತು ಬೋ ಘಾಟಿ ಜಂಬಗಾತಿ ಆ ಮುದುಕಿ ಜಂಬದ ಕೋಳಿ ಸಾಕಿರಲು ಆ ಕೋಳಿ ಕೊಕ್ಕೋ ಅಂತ ಕೂಗಿರಲು ಅದ್ರಿಂದ್ಲೇ ಉರಿಯೋ ಸೂರ್ಯ ಮೂಡ್ತೈತೆಂದು ತನ್ನಿಂದ್ಲೇ ಲೋಕ ಬೆಳಕು ಕಾಣ್ತೈತೆಂದು ತಾನಿಲ್ದೇ ಲೋಕವೇ ಇಲ್ಲ ತನ್ನ ಬಿಟ್ಟರೆ ಬದುಕೆ ಇಲ್ಲ ಅಂದ್ಕೊಂಡೆ ಕೊಬ್ಬಿಂದ ಸೊಕ್ಕಿದ್ದಳು ತಂದಾನಿ ತಂದ ನಾನ ತನ ನನನಾ ಊರ್ನೋರ್ಗೆ ತನ್ನ ದರ್ಪ ತೋರಿಸ್ಬೇಕೆಂದು ಕಂಕ್ಳಾಗೆ ತನ್ನ ಕೋಳಿ ಬಚ್ಚಿಟ್ಕೊಂಡು ಕತ್ಲಾಗೆ...

Monday, April 18, 2011

ಶ್ರೀ ಮಹಾತ್ಮ ಗಾಂಧಿ !

ಬಲಗೈಯಲ್ಲಿ ಗೀತೆ ಎಡಗೈಯಲ್ಲಿ ರಾಠೆ ಹಿಡಿದವರ್ಯಾರು ಗೊತ್ತೆ ಅವರೆ ನಮ್ಮ ಗಾಂಧಿ ಶ್ರೀ ಮಹಾತ್ಮ ಗಾಂಧಿ ಮಕ್ಕಳಿಗೆಲ್ಲಾ ತಾತ ವಿಶ್ವಕ್ಕೆಲ್ಲ ಧಾತ ಅಂತಹವರ್ಯಾರು ಗೊತ್ತೆ ಅವರೆ ನಮ್ಮ ಗಾಂಧಿ ಶ್ರೀ ಮಹಾತ್ಮ ಗಾಂಧಿ ಕೈಯಲ್ಲೊಂದು ಕೋಲು ಅವರಿಗಿಲ್ಲಾ ಸೋಲು ಅಂತಹವರ್ಯಾರು ಗೊತ್ತೆ ಅವರೆ ನಮ್ಮ ಗಾಂಧಿ ಶ್ರೀ ಮಹಾತ್ಮ ಗಾಂಧಿ ಇನ್ನೊಂದು ವಿಡಿಯೋ ಇಲ್ಲ...

Sunday, April 10, 2011

ಬೇಟೆಗಾರ !!

ಬೇಟೆಗಾರ ಬಂದ ಬಿಲ್ಲು ಬಾಣ ತಂದ ಕಾಡು ಹಂದಿ ಕೊಂದ ಬೆಂದ ಹಂದಿ ತಿಂದ ಹೊಟ್ಟೆ ನೋವು ಅಂದ ಮರದ ಕೆಳಗೆ ಬಿದ್ದ ಹುಲಿರಾಯ ಬಂದ ಹೊಟ್ಟೆ ತುಂಬ  ತಿಂದ ಹುಲಿರಾಯ ಬಂದ ಹೊಟ್ಟೆ ತುಂಬ ತಿಂದ ...

Thursday, April 07, 2011

ದಿನಚರಿ

ದಿನಚರಿ ದಿನವು ಬೇಗ ಏಳಬೇಕು ಎದ್ದು ಹಲ್ಲನುಜ್ಜಬೇಕು ಉಜ್ಜಿ ಮುಖವ ತೊಳೆಯಬೇಕು ದಿನವು ಸ್ನಾನ ಮಾಡ ಬೇಕು ದೇವರಿಗೆ ನಮಸ್ಕರಿಸಿ ತಿಂಡಿಯನ್ನು ತಿನ್ನಬೇಕು ಗುರುವಿಗೆ ನಮಸ್ಕರಿಸಿ ಶಾಲೆಯಲ್ಲಿ ಕಲಿಯಬೇಕ...

Wednesday, April 06, 2011

ವಸಂತ ಬಂದ!!

ವಸಂತ ಬಂದ ಋತುಗಳ ರಾಜ ತಾ ಬಂದಚಿಗುರನು ತಂದ ಹೆಣ್ಗಳ ಕುಣಿಸುತ ನಿಂದಚಳಿಯನು ಕೊಂದ ಹಕ್ಕಿಗಳುಲಿಯಗಳೇ ಚಂದಕೊವೂ ಜಗ್ ಜಗ್ ಪುವ್ವೀ ಟೂವಿ ಟ್ಟವೂ ! ಕುರಿ ನೆಗೆದಾಟ ಕುರುಬರ ಕೊಳಲಿನೂದಾಟಇನಿಯರ ಬೇಟ ಬನದಲಿ ಬೆಳದಿಂಗಳೂಟಹೊಸ ಹೊಸ ನೋಟ , ಹಕ್ಕಿಗೆ ನಲಿವಿನ ಪಾಠಕೊವೂ ಜಗ್ ಜಗ್ ಪುವ್ವೀ ಟೂವಿ ಟ್ಟವೂ ! ಮಾವಿನ ಸೊಂಪು ಮಲ್ಲಿಗೆ ಬಯಲೆಲ್ಲ ಕಂಪುಗಾಳಿಯ ತಂಪು ಜನಗಳ ಜಾತ್ರೆಯ ಗುಂಪುಕಿವಿಗಳಿಗಿಂಪು ಹಕ್ಕಿಗಳುಲುಹಿನ ಪೆಂಪುಕೊವೂ ಜಗ್ ಜಗ್ ಪುವ್ವೀ ಟೂವಿ ಟ್ಟವೂ ! ಬಂದ ವಸಂತ...

Monday, April 04, 2011

ಯುಗಾದಿ ಹಬ್ಬ!

ಈ ವರ್ಷ ಹಬ್ಬಕ್ಕೆ ನಮ್ಮ ಮನೆಯ ಬಾಗಿಲುಗಳಿಗೆ ಮಾವಿನ ಬದಲು ಮಾಗ್ನೋಲಿಯಾ ಎಲೆಗಳ ತೋರಣ.  ಯುಗಾದಿ ಹಬ್ಬಕ್ಕೆಂದು ಸ್ನೇಹಿತರೊಬ್ಬರು ತಮ್ಮ ಊರಿನಿಂದ ಬೇವಿನ ಎಲೆಗಳನ್ನು ಪೋಸ್ಟ್ ನಲ್ಲಿ ನಮಗಾಗಿ ಕಳುಹಿಸುತ್ತಿದ್ದರು. ಆದ್ರೆ ಈ ಸರ್ತಿ ಅದೂ ಇಲ್ಲವಾಯ್ತು, ಅವರ ಮನೆಯ ಹತ್ತಿರ ಮರವನ್ನು ಕಡಿದು ಹಾಕಿದರಂತೆ:( ಸರಿ, ಬೇವಿನ ಬದಲಿಗೆ ಹಾಗಲಕಾಯಿ ತುರಿಯನ್ನು ಬೆಲ್ಲದ ಜೊತೆ ಬೆರೆಸಿ "ಶತಾಯುರ್ ವಜ್ರ ದೇಹಾಯ, ಸರ್ವ ಸಂಪತ್ಕರಾಯಚ, ಸರ್ವಾರಿಷ್ಟ ವಿನಾಶಾಯ,...

Thursday, March 31, 2011

ನಾವೆಲ್ಲ ಹಕ್ಕಿಗಳು...

ಚಿಕ್ಕಂದಿನಲ್ಲಿ ನಾವು ಹಾಡುತ್ತಿದ್ದ ಪಕ್ಷಿಗಳ ಪರಿಚಯ ಮಾಡಿಸುವ ಈ ಪದ್ಯ ನೆನಪು ಮಾಡಿಕೊಳ್ಳಲು ಬಹಳ ದಿನಗಳಿಂದ ಪ್ರಯತ್ನಿಸುತ್ತಿದ್ದೆ. ಅಂತೂ ಇಂತೂ ಗೆಳಯರ ಸಹಾಯದಿಂದ ಇದು ಪೂರ್ತಿ ನೆನಪಾಯ್ತು. ನಾವೆಲ್ಲ ಹಕ್ಕಿಗಳು ರೆಕ್ಕೆ ಬಡಿದು ಹಾರುವೆವು ಸಂತಸವ ಬೀರುವೆವು ನಾನು ಗುಬ್ಬಚ್ಚಿ ಬಹಳ ಚಿಕ್ಕದು ನನ್ನಂತ ಚಿಕ್ಕದು ಬೇರೆಲ್ಲೂ ಸಿಗದು //ನಾವೆಲ್ಲ// ನಾನು ಗಿಡುಗ ಬಹಳ ದೊಡ್ಡದು ನನ್ನಂತ ದೊಡ್ಡದು ಬೇರೆಲ್ಲೂ ಸಿಗದು//ನಾವೆಲ್ಲ// ನಾನು...