Thursday, December 31, 2009

ಬರ್ತ್ ಡೇ ಪಾರ್ಟಿ ಫೋಟೋಸ್...

ಪುಟ್ಟಿದು ಈ ಸಾರ್ತಿ ಫಿಶ್ ಥೀಮ್ ಪಾರ್ಟಿ ಅಂತ ಅವಳ ಆಮಂತ್ರಣ ನೋಡಿದಾಗ್ಲೇ ನಿಮಗೆಲ್ಲಾ ಗೊತ್ತಾಗಿದೆ. ಫಿಶ್ ಅಂತ ತಕ್ಷಣ ಹೆಚ್ಚಾಗಿ ಎಲ್ಲೆಡೆ ’ಫೈಂಡಿಂಗ್ ನೀಮೋ’ ಚಲನಚಿತ್ರ ಆಧಾರಿತ ಪಾರ್ಟಿ ಸಾಮಾನುಗಳೇ ಸಿಗುತ್ತವೆ, ಆದ್ರೆ ನಂಗೆ ಬೇಕಿದ್ದು ಅದಲ್ಲ.. ಹಾಗಾಗಿ ಅಂತರ್ಜಾಲದಲ್ಲಿ ಬಹಳಷ್ಟು ಹುಡುಕಾಡಬೇಕಾಯ್ತು! ಫಿಶ್ ಬಲೂನ್ಸ್, ತಟ್ಟೆ, ಪಾರ್ಟಿ ಟೋಪಿ, ಟೇಬಲ್ ಕವರ್, ಸೆಂಟರ್ ಪೀಸ್, ಕ್ರೇಪ್ ರಿಬ್ಬನ್ ಎಲ್ಲವೂ ಸಿಕ್ಕ್ತು... The party Deco.... ಫಿಶ್ ಫೋಟೊ ಫ್ರೇಮಿನಲ್ಲಿ...

ಪುಟ್ಟಿ Thank you ಅಂತಾಳೆ :))

ತನ್ನ ಹುಟ್ಟುಹಬ್ಬದ ದಿನ ಫೋನ್ ಮಾಡಿ ವಿಶ್ ಮಾಡಿದ, ಬ್ಲಾಗಿನಲ್ಲಿ ಮತ್ತು ಈ ಮೇಲ್ ನಲ್ಲಿ ಹರಸಿದ, ಮನೆಗೆ ಬಂದು ಹಾರೈಸಿದ ಎಲ್ಲರಿಗೂ ತಾಂತು (ಥ್ಯಾಂಕ್ಸ್) ಹೀಗೆ ಹೇಳಿದ್ದಾಳೆ:)) This isn't just a Fish, as anyone can see. I made it with my hand, which is part of me. It comes with lots of love, especially to say, Thanks for joining me On my 2nd Birthday !! -Sahitya ಈ ತರಹ ತನ್ನ ಪುಟ್ಟ...

Tuesday, December 29, 2009

ಹ್ಯಾಪಿ ಬರ್ತ್ ಡೇ ಪುಟ್ಟಿ!!

ಇಷ್ಟು ಬೇಗ ಪುಟ್ಟಿಗೆ ಎರಡು ವರ್ಷ ಆಗಿಬಿಡ್ತಾ ಅಂತ ಅನ್ನಿಸ್ತಾಯಿದೆ. ಒಮ್ಮೆ ಹಿಂತಿರುಗಿ ನೋಡಿದರೆ ಈ ಕಾಲ ಸರಿಯಾದ ಗತಿಯಲ್ಲೇ ಸಾಗುತ್ತಿದ್ದರೂ ನನಗೇಕೋ ಅದು ಓಡುತ್ತಿದೆ ಅನಿಸುತ್ತೆ. ನಿನಗ್ಯಾಕೆ ಪುಟ್ಟಿ ದೊಡ್ದವಳಾಗೊಕೆ ಇಷ್ಟು ಅವಸರ, ಸ್ವಲ್ಪ ನಿಧಾನಿಸು ಅನ್ನೋಣ ಅನಿಸುತ್ತೆ. ಡಿಸಿಂಬರ್ ೨೦೦೭ರಿಂದ(ಅದಕ್ಕೂ ೯ ತಿಂಗಳ ಮುಂಚಿನಿಂದ) ಇಲ್ಲಿಯವರೆಗಿನ ನನ್ನ, ಪುಟ್ಟಿಯ ಒಡನಾಟ ನನ್ನಲ್ಲಿ ಪ್ರತಿದಿನ ಹೊಸ ಅಚ್ಚರಿ, ಉಲ್ಲಾಸಗಳನ್ನ ತುಂಬಿ, ನಾಳೆ ಬರಬಹುದಾದ ಹೊಸ ವಿಸ್ಮಯಗಳಿಗಾಗಿ...

Sunday, December 27, 2009

ನನ್ನ ಎರಡನೇ ಹುಟ್ಟು ಹಬ್ಬಕ್ಕೆ ಬನ್ನಿ ಅಂತಾಳೆ

ಪುಟ್ಟಿ ತನ್ನ ಎರಡನೆ ಹುಟ್ಟುಹಬ್ಬಕ್ಕೆ ಸ್ನೇಹಿತರನ್ನ ಆಹ್ವಾನಿಸಿದ್ದು ಹೀಗೆ.. ತನ್ನೆಲ್ಲಾ ಬ್ಲಾಗ್ ಸ್ನೇಹಿತರಿಗೂ, ಹಿರಿಯರಿಗೂ, ಹಿತೈಷಿಗಳಿಗೂ ಬನ್ನಿ ಅಂತ ಹೇಳ್ತಾಳೆ... ಮರಿಬೇಡಿ, ಬರ್ತೀರಾ ಅಲ್ವ...

Thursday, December 24, 2009

ಕ್ರಿಸ್ ಮಸ್ ಪಾರ್ಟಿ !!!

ಎಲ್ಲರಂತೆ ನಮ್ಮ್ ಮನೆಯಲ್ಲೂ ಕ್ರಿಸ್ ಮಸ್ ಮರವನಿಟ್ಟು ಹಬ್ಬ ಆಚರಿಸಬೇಕು ಅಂತ ಆಸೆ ಇದ್ದ್ರೂ ನನ್ನ ಸೋಮಾರಿತನದಿಂದ ಅದನಿನ್ನೂ ಶುರು ಮಾಡಿಲ್ಲ. ಕಳೆದ ವರ್ಷ ಅಪ್ಪನ ಸ್ಟಾಂಪ್ ಕ್ಲಬಿನಲ್ಲಿ ನಡೆದ ಕ್ರಿಸ್ ಮಸ್ ಪಾರ್ಟಿಯಲ್ಲಿ ಪುಟ್ಟಿ ಓಡಾಡಿದ್ದು ಹೀಗೆ... ಈ ವರ್ಷ ಮಾಲ್ ನಲ್ಲಿ ನಿಲ್ಲಿಸಿದ್ದ ಕ್ರಿಸ್ ಮಸ್ ಮರದೆದುರು...

Sunday, December 13, 2009

ಚಟ್ನಿ ಮಾಡೋದು ಹೀಗೆ

ಪುಟ್ಟಿ ಈಗ ಎಲ್ಲ ಕೆಲಸ ಮಾಡಬೇಕು ಅನ್ನೋ ಆಸೆ. ಅಡುಗೆ ಮಾದಲು ಹೋದ್ರೆ ತರಕಾರಿ ಹೆಚ್ತೀನಿ ಅಂತಾಳೆ. ಚಪಾತಿ ಹಿಟ್ಟನ್ನ ಉಂಡೆ ಮಾಡಿ ತಾನೂ ಲಟ್ಟಿಸಿ ಬೇಯಿಸಲು ಬರ್ತಾಳೆ. ನಾನು ಸ್ಟವ್ ಮುಂದೆ ಕೆಲಸ ಮಾಡೊವಾಗ ಅವಳಿಗೂ ಒಂದು ಪಾತ್ರೆ ಕೊಟ್ಟು ಅದಕ್ಕೆ ಈರುಳ್ಳಿ ಎಣಿಸಿ ತುಂಬು ಅಂತ ಹೇಳಿ ಕೆಳಗೆ ಕೂರಿಸ್ತೀನಿ. ತನಗೂ ಕೆಲ್ಸ ಇದೆ ಅಂತ ಖುಶಿಯಾಗಿ ಅವಳು ಕೆಲ್ಸ ಮಾಡೋಷ್ಟರಲ್ಲಿ ನನ್ನ ಅಡುಗೆ ಮುಗಿಯಬೇಕು:) ಕೆಲವೊಮ್ಮೆ ಈ ಟ್ರಿಕ್ ನೆಡೆಯೊಲ್ಲ. ಅವಳೂ ಕೌಂಟರ್ ಮೇಲೆ ಕುಳಿತು ಅಮ್ಮ ಮಾಡೊದನ್ನ ನೋಡಬೇಕು ಅಂತಾಳೆ. ಹಾಗೆ ನೋಡಿ ಕಲಿತಿರುವುದರ ಪ್ರಭಾವಯಿದು... ...

Monday, December 07, 2009

ಡಿಸ್ನಿ ಡೌನ್ ಟೌನಿನಲ್ಲಿ...

ಸ್ಟ್ಯಾಂಪ್ ಎಕ್ಸಿಬಿಷನಿಗೆ ಅಂತ ಆರ್ಲ್ಯಾಂಡೋಗೆ ಹೋಗಿದ್ದ ಪುಟ್ಟಿ ಹಾಗೆ ಅಲ್ಲಿ ಡಿಸ್ನಿವರ್ಲ್ಡಿಗೂ ಹೋಗೋ ಪ್ಲಾನಿತ್ತು, ಆದ್ರೆ ಮಳೆರಾಯನ ಕೃಪೆಯಿಂದಾಗಿ ಎಲ್ಲೂ ಹೋಗ್ಲಿಲ್ಲ. ’ರೈನ್ ರೈನ್ ಗೋ ಅವೇ’ ಅಂತ ಅಮ್ಮನ ಜೊತೆಗೂಡಿ ಎಷ್ಟು ಸರಿ ಹಾಡಿದ್ರು ಪ್ರಯೊಜನವಾಗ್ಲಿಲ್ಲ. ಬರೀ ಡೌನ್ ಟೌನ್ ಮಾತ್ರ ನೋಡಿ ಬಂದದ್ದಾಯ್ತು. ಯಾವುದೇ ಕಾರ್ಟೂನ್ ಕ್ಯಾರೆಕ್ಟರ್ ಗಳ ಪರಿಚಯವಿಲ್ಲದ್ದರಿಂದ ಎಲ್ಲ ಅವಳಿಗೆ ಹೊಸತಾಗಿತ್ತು:) ಪ್ರಿನ್ಸೆಸ್ಸ್ ಹೀಗೆ ನಿಂತಿರೋದು...ಅಕ್ಕ ಯಶೀತಾ...

Sunday, December 06, 2009

ಸ್ಟಾಂಪ್ ಎಕ್ಸಿಬಿಷನ್ !!

ಮನೆಯಲ್ಲಿ ಅಪ್ಪನ ಹತ್ರ ಎಷ್ಟೆಲ್ಲಾ ಸ್ಟಾಂಪ್ಸ್ ಇದ್ರೂ, ಅಪ್ಪ ಅವಳಿಗೆ ಮುಟ್ಟೋಕೆ(ಆಟವಾಡೋಕೆ) ಕೊಡೋದು ಕೆಲವೇ ಕೆಲವು ಮಾತ್ರ. ಅದನ್ನ ಕೂಡ ಅಪ್ಪನ ಹಾಗೆ ಕೈಗೆ ಗ್ಲವ್ಸ್ ಹಾಕಿಸಿಕೊಂಡು ಮುಟ್ಟುತ್ತಾಳೆ. ಅದರಲ್ಲಿರುವ ಪ್ರಾಣಿ, ಪಕ್ಷಿಗಳ ಚಿತ್ರನೋಡಿ ಖುಶಿ ಪಡ್ತಾಳೆ. ಸರಿ ಮೊನ್ನೆ ಆರ್ಲ್ಯಾಂಡೋ ದಲ್ಲಿ ನಡೆದ Florex 2009 ಅನ್ನೋ ಸ್ಟ್ಯಾಂಪ್ ಎಕ್ಸಿಬಿಷನ್ ನೋಡಲು ಪುಟ್ಟಿ ಅಪ್ಪಅಮ್ಮನ ಜೊತೆ ಹೋಗಿದ್ಲು. ಅಲ್ಲಿದ್ದ ಸಾವಿರಾರು ಸ್ಟ್ಯಾಂಪ್ಸ್ ನೋಡಿ ಅಪ್ಪನಿಗೆ ಎಷ್ಟು...

Saturday, November 21, 2009

ಸೇರಾ ಬರ್ತ್ ಡೇ ಪಾರ್ಟಿ !!

ಪುಟ್ಟಿಯ ನೆಚ್ಚಿನ ಫ್ರೆಂಡ್ಸ್ ಗಳಲ್ಲಿ ಅನಿಸಾ- ಸೇರಾ ಅಕ್ಕಂದಿರು ಮೊದಲಿಗರು. ಪುಟ್ಟಿ ಹುಟ್ಟಿದಾಗ ಆಸ್ಪತ್ರೆಯಲ್ಲಿ ಮೊದಲು ಭೇಟಿ ಮಾಡಿದ್ದು ಇವರನ್ನೇ. ಇವತ್ತು ಸೇರಾಳ ಹುಟ್ಟಿದಹಬ್ಬ, ಸ್ಕೇಟ್ ವರ್ಲ್ಡ್ ನಲ್ಲಿ ಹುಟ್ಟಿದಹಬ್ಬ ಆಚರಿಸಿಕೊಂಡ ಅಕ್ಕನಿಗೆ ಶುಭ ಹಾರೈಸುತ್ತಾ ಅವಳೊಂದಿಗೆ ಕಳೆದ ಕೆಲವು ಮಧುರ ಕ್ಷಣಗಳ ಮೆಲಕು... ನಾಲ್ಕು ತಿಂಗಳ ಪುಟ್ಟಿ ಜೊತೆ ಅಕ್ಕ ಅನೀಸಾ- ತಂಗಿ ಸೇರಾ:) ಕಳೆದ ವರ್ಷ ಹ್ಯಾಲೋವೀನ್ ದಿನದಂದು! ಇವತ್ತು ಬರ್ತ್ ಡೇ ಪಾರ್ಟಿಯಲ್ಲಿ... ನಾನೂ...

Tuesday, October 20, 2009

ಬೆಳಕನು ಚೆಲ್ಲಿ ಬಂದೇ ಬಂತು ದೀಪಾವಳಿ..

ಎರಡು ದಿನ ಅಪ್ಪನಿಗೆ ರಜೆಯಿದ್ದರಿಂದ ಪುಟ್ಟಿ ಈ ವರ್ಷ ದೀಪಾವಳಿಯನ್ನ ತುಂಬಾನೇ ಖುಶಿಯಾಗಿ ಆಚರಿಸಿದ್ಲು. ಅಮ್ಮಬಣ್ಣ ಬಣ್ಣದ ದೀಪಗಳನ್ನ ಮಾಡೊವಾಗ ಜೊತೆಯಲ್ಲಿ ಕುಳಿತು ತಾನೂ ’ತಪಾಚಿ(ಚಪಾತಿ)’ ’ಬಾಲ್’ ಇತ್ಯಾದಿ ಮಾಡುತ್ತಾ, ಮಾಡಿದ ಮಣ್ಣಿನುಂಡೆಯನ್ನ ಬಾಯಿಗೆ ಹಾಕಲು ಹೋಗಿ ಅಮ್ಮನಿಂದ ಬೈಯಿಸಿಕೊಂಡಿದ್ದು ಎಲ್ಲಾ ಆಯ್ತು.ಹಬ್ಬದ ದಿನ ದೀಪಗಳನ್ನ ಹಚ್ಚಿದ್ದು ಹೀಗೆ..ಸುರು ಸುರು ಸುರ್ ಸುರ್ಬತ್ತಿ ಹಚ್ಚಿದ್ದು ಹೀಗೆ !ಕಳೆದ ವರ್ಷದ ಹಬ್ಬದ ಫೋಟೋ... ...

Thursday, October 15, 2009

ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು!

ಮನೆ ಮನವ ಬೆಳಗಲು ಮತ್ತೆ ಬಂದಿದೆ ದೀಪಾವಳಿ. ಅಜ್ಞಾನದ ಅಂಧಕಾರ ಅಳಿಸಿ, ಅರಿವನು ಅರಳಿಸುವ ಹಣತೆಗಳು ಎಲ್ಲೆಲ್ಲೂ ಬೆಳಗಲಿ:)ವಾರಾಂತ್ಯದಲ್ಲಿ ಬಂದಿರುವುದರಿಂದ ಗೆಳೆಯರ ಜೊತೆಗೂಡಿ ಹಬ್ಬ ಆಚರಿಸಬಹುದು. ಕಳೆದ ವರ್ಷ ನನ್ನ ಕೆಲವು ಸ್ನೇಹಿತೆಯರು ಮಾಡಿದ್ದ ಬಣ್ಣಬಣ್ಣದ ದೀಪಗಳ ಫೋಟೋ ಮತ್ತೆ ಕೆಲವು ದೀಪಾವಳಿ ಹಾಡುಗಳನ್ನು ಇಲ್ಲಿ ಹಂಚಿಕೊಂಡಿದ್ದೆ. ಈ ವರ್ಷ ನಾನೂ ಕೂಡ ಮಕ್ಕಳಾಟದ ಮಣ್ಣಿನಿಂದ(Play Dough) ಕೆಲವು ದೀಪಗಳನ್ನು ಮಾಡಿರುವೆ ನೋಡಿ!ಹಾಗೆಯೆ, ನಿಂತು ಹೋಗಿರುವ...

Wednesday, October 14, 2009

ಮಣಿ ಮಣಿ ಮಣಿ ಮಣಿ ಮಣಿಗೊಂದು ದಾರ

ಮಣಿ ಮಣಿ ಮಣಿ ಮಣಿ ಮಣಿಗೊಂದು ದಾರದಾರದ ಜೊತೆ ಮಣಿ ಸೇರಿ ಚೆಂದದೊಂದು ಹಾರತಾನಿ ತಂದಾನ ತಂದನ ತಂದಾನ ತಂದನ ತಂದಾನ ನ... ಒಂದು ಒಗಟಿನಂತೆ, ಸವಾಲ್-ಜವಾಬ್ ಎಂಬಂತಿರುವ "ಜನುಮದ ಜೋಡಿ" ಚಿತ್ರದ ಈ ಹಾಡು ನನಗಿಷ್ಟ:)ಇಲ್ಲಿ ಈಗ ನಿಧಾನಕ್ಕೆ ಛಳಿ ಶುರುವಾಗ್ತಾಯಿದೆ. ಇನ್ನ್ಮೇಲೆ ಪುಟ್ಟಿನ ಹೊರಗೆ ಕರ್ಕೊಂಡು ಹೋಗೋದು ಕಷ್ಟ. ಮನೆಯಲ್ಲೇ ಹೊಸ ಹೊಸ ಆಟ ಆಡಿಸ್ಬೇಕು. ಜೊತೆಗೆ ಅವಳ ಕೈ ಬೆರೆಳುಗಳಿಗೆ ಒಳ್ಳೆ ಎಕ್ಸರ್ಸೈಸ್ ಕೂಡ ಆಗಬೇಕು ಅಂತ ಮೊನ್ನೆ ಅವಳಿಗೆ ಒಂದು ಶೂ ಲೇಸ್ ಕೊಟ್ಟು,...

Monday, October 05, 2009

ಪುಟ್ಟಿಯ ಅಕ್ಷರಾಭ್ಯಾಸ !!

ಪುಟ್ಟಿಗೆ ಅಕ್ಷರಾಭ್ಯಾಸ ಮಾಡಿಸಲು ಅಟ್ಲಾಂಟ ದೇವಸ್ಥಾನಕ್ಕೆ ಹೋಗೋಣ ಅಂತ ಎಲ್ಲಾ ಸಿದ್ದತೆ ಮಾಡಿಕೊಂಡಿದ್ವಿ. ಆದ್ರೆ ಅದೇ ಸಮಯಕ್ಕೆ ಮೂರೂ ಜನ ಫ್ಲೂ ಬಂದು ಮಲಗಿ, ಎದ್ದಿದ್ದರಿಂದ ವಿಜಯದಶಮಿಯ ದಿನ ಸಿಂಪಲ್ಲಾಗಿ ಮನೆಯಲ್ಲೇ ಸರಸ್ವತಿಯ ಪೂಜೆ ಮಾಡಿ ಅವಳ ಕೈಯಲ್ಲಿ ಅಕ್ಕಿಯ ಮೇಲೆ "ಓಂ" ಬರೆಸಿದ್ರು ಹೇಮಂತ್:) v\:* {behavior:url(#default#VML);} o\:* {behavior:url(#default#VML);} w\:* {behavior:url(#default#VML);} .shape {behavior:url(#default#VML);}...

Tuesday, September 29, 2009

ಕಂದ ಕಣ್ಮಣಿಯೆ ಜೋ ಜೋ...

ಚಿತ್ರ: ಬಾಲ ನಾಗಮ್ಮ (1966)ರಚನೆ: ಚಿ.ಉದಯಶಂಕರ್ಸಂಗೀತ: ಎಸ್.ರಾಜೇಶ್ವರ ರಾವ್ಗಾಯಕಿ : ಎಲ್.ಆರ್.ಈಶ್ವರಿ ಕಂದ ಕಣ್ಮಣಿಯೆ ಅಮ್ಮನ ಅರಗಿಣಿಯೆ ಓ ರಾಜ.....ಹೂವಿನ ಹಾಸಿಗೆಯ ಹಾಸುವೆನು ತೂಗುವೆನುಜೋ ಜೋ ಹಾಡುವೆನುಕಂದ ಕಣ್ಮಣಿಯೆ ಅಮ್ಮನ ಅರಗಿಣಿಯೆ ಓ ರಾಜ.....ಮೋಡದ ತೆರೆಯಿಂದ ಚಂದಿರ ಕೈಚಾಚಿನಿನ್ನನು ಕರೆಯುತಿಹ ನಗುತ ವಿನೋದದಿಮೋಡದ ತೆರೆಯಿಂದ ಚಂದಿರ ಕೈಚಾಚಿನಿನ್ನನು ಕರೆಯುತಿಹ ನಗುತ ವಿನೋದದಿಕೊಡುವ ತಾರೆಗಳ ಆಡಲಿಕ್ಕೆ ಎನುತಿರುವಕಂದ ಕಣ್ಮಣಿಯೆ ಅಮ್ಮನ ಅರಗಿಣಿಯೆ ಓ ರಾಜ......ಅಮ್ಮನ ಪೂಜೆಗಳ ಪುಣ್ಯದ ರೂಪ ನೀಅಮ್ಮನ ಸಂಕಟವ ಹರಿಸಲು ಬಂದಿರುವಅಮ್ಮನು ಪೂಜೆಗಳ ಪುಣ್ಯದ ರೂಪ ನೀಅಮ್ಮನ ಸಂಕಟವ ಹರಿಸಲು ಬಂದಿರುವಮಗುವೆ ಶಂಕರನು ನಿನ್ನನು ತಾ ಪಾಲಿಸಲಿಕಂದ ಕಣ್ಮಣಿಯೆ ಅಮ್ಮನ ಅರಗಿಣಿಯೆ...

Friday, September 11, 2009

ಅವ್ವ ಅಪ್ಪ ಯಾರು ಗೊತ್ತಾ ನಿಮ್ಗೆ?

ಮೊನ್ನೆ ಪುಟ್ಟಿ ಅವರಜ್ಜಿ ಜೊತೆ ಮಾತಾಡುತ್ತಿದ್ಲು. ನಾನು ಒಂದ್ ನಿಮ್ಷ ಒಳಗೆ ಹೋಗಿ ಬಂದೆ ಅಷ್ಟ್ರಲ್ಲಿ ಅಮ್ಮ ಇದೇನೆ ರೂಪ, ಪುಟ್ಟಿ ’ಅವ್ವ ಅಪ್ಪ’ ಅಂತ ಹೇಳ್ತಿದ್ದಾಳೆ ಆಗಿನಿಂದ ಅಂದ್ರು. ನನಗೂ ಆಶ್ಚರ್ಯವೆನಿಸಿ ಪುಟ್ಟಿಗೆ ಏನಮ್ಮ ಅದು ಅಂದೆ. ಅದಕ್ಕವಳು ತನ್ನ ಕೈಗಳನ್ನ ಟ್ವಿಂಕ್ಲಿಂಗ್ ಮಾಡುತ್ತಾ ’ಅವ್ವ ಅಪ್ಪ’ ಅಂದ್ಲು. ಅವಳು ೨-೩ ಸರ್ತಿ ತೋರ್ಸಿದಮೇಲೆ ಗೊತ್ತಾಯ್ತು ಅವಳು ’ಟ್ವಿಂಕಲ್ ಟ್ವಿಂಕಲ್ ಲಿಟ್ಟಲ್ ಸ್ಟಾರ್’ ರೈಮಿನ ’ಹೌ ಐ ವಂಡರ್’(ಅವ್ವ).. ಅಪ್ ಅಬೋವ್(ಅಪ್ಪ)...

Saturday, September 05, 2009

ಹಾವು ಅಂದ್ರೆ ನಮ್ಮ್ ಪುಟ್ಟಿಗೆ ದಿಗಿಲೇ ಇಲ್ವೇನೆ !!

ಪುಟ್ಟಿಗೆ ಹಾವು ಅಂದ್ರೆ ಸಾಕು ತನ್ನ ಕೈಯನ್ನ ಹಾವಿನ ಹೆಡೆಯಂತೆ ಬಾಗಿಸಿ "ಹಿಸ್ಸ್ ಹಿಸ್ಸ್" ಅಂತ ಸದ್ದು ಮಾಡುತ್ತಾ ತನ್ನನ್ನ ತಾನೆ ಕಚ್ಚಿಸಿಕೊಳ್ತಾಳೆ!! ಜೂನ್ ನಲ್ಲಿ ಜ್ಯಾಕ್ಸನ್ ವಿಲ್ಲ್ ಎಂಬ ಊರಿನ ಪ್ರಾಣಿ ಸಂಗ್ರಹಾಲಯದಲ್ಲಿ ನೋಡಿದ ಹೆಬ್ಬಾವಿದು. Normal 0 false false false MicrosoftInternetExplorer4 /* Style Definitions */ table.MsoNormalTable {mso-style-name:"Table...

Thursday, September 03, 2009

ಜೂ.. ಜೂ ...ಆಗಟ್

ಪುಟ್ಟಿಗೆ ಏನೇ ಹೊಸ ವಿಚಾರ ತೋರ್ಸಿದ್ರೂ / ಹೇಳಿಕೊಟ್ಟರೂ ಬಲು ಬೇಗ ಕಲಿತಾಳೆ. ಮಕ್ಕಳೇ ಹಾಗೆ ಅಲ್ವಾ, ಸ್ಪಂಜಿನಂತೆ ಎಲ್ಲವನ್ನೂ ತಮ್ಮೊಳಗೆ ಹೀರಿಕೊಳ್ತಾರೆ:-)ಈಗ ಬೆಳಗ್ಗಿನ ನಿದ್ದೆಯನ್ನು ಬಿಟ್ಟು ಕೇವಲ ಮದ್ಯಾಹ್ನ ಮಾತ್ರ ೧ ಘಂಟೆ ಮಲಗೋ ಪುಟ್ಟಿಯನ್ನ ಇಡೀ ದಿನ ಬಿಜಿಯಾಗಿ ಬೋರ್ ಆಗದಂತೆ ನೋಡಿಕೊಳ್ಳೊದು ನನ್ನ ಕೆಲ್ಸ! ರೈಮ್ಸ್, ಪ್ರಾಣಿಗಳ ವಿಡಿಯೋ ಹೊರತಾಗಿ ಟಿವಿಯಂತೂ ನೋಡೊದೇ ಇಲ್ಲ. ಸರಿ, ಉಳಿದಂತೆ ಅದೂ ಇದೂ ಹೇಳ್ಕೊಡ್ತಾಯಿರ್ತೀನಿ. ಪುಟ್ಟಿಗೆ ಒಮ್ಮೆ ಹೇಳ್ಕೊಟ್ಟ್ರೆ ಮತ್ತೆ ಮತ್ತೆ ಅದನ್ನೇ ಕೇಳ್ತಾಳೆ. ಅವಳು ಈಗ ದಿನಗಳ, ಮಾಸಗಳ ಮತ್ತು ಗ್ರಹಗಳ ಇಂಗ್ಲಿಷ್ ಹೆಸ್ರು ಹೇಳ್ತಾಳೆ. ಅಲ್ಲದೇ ಒಂದರಿಂದ ಹತ್ತರವರೆಗೆ ಅಂಕಿ, ಹಲವು ರೈಮ್ಸ್/ ಹಾಡು ಎಲ್ಲಾ ಗೊತ್ತು ಪುಟ್ಟಿಗೆ. ಇನ್ನು ಬರಿಯೋ...

Monday, August 31, 2009

ಓಡಿ ಬಾ ಓಡೋಡಿ ಬಾ - ಚಕ್ರತೀರ್ಥ

ಈ ಇಬ್ಬರು ಬಾಲನಟರು ಯಾರು ಗೊತ್ತಾ?ಚಕ್ರತೀರ್ಥ (1967) - ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಟಿ.ಜಿ.ಲಿಂಗಪ್ಪ ಗಾಯನ: ಬಿ.ಕೆ.ಸುಮಿತ್ರ ಮತ್ತು ಬೆಂಗಳೂರು ಲತಾ. ಝೂಟ್.......ಹಾಹಾಹಾಹಹ ಹಾಹಾ...ಲಲಲಲಲಲಾಲಾ ಓಡಿ ಬಾ ಓಡೋಡಿ ಬಾ ಚಿನ್ನ ನನ್ನ ಬೆನ್ನ ಹಿಂದೆ ಓಡಿ ಬಾಓಡುವೇ ನಾ ಓಡುವೇ ಜಿಂಕೆ ಹಾಗೆ ಓಡೀ ನಿನ್ನಾ ಕೂಡುವೇಓಡಿ ಬಾ..ಝೂಟ್... ಮಣ್ಣಿನಿಂದ ಕಪ್ಪೆಗೂಡು ಕಟ್ಟಬಲ್ಲೆಯಾಅಲ್ಲಿ ನೀನು ಕಪ್ಪೆಯೊಂದ ಸಾಕಬಲ್ಲೆಯಾಕಣ್ಣು ಮುಚ್ಚಿ ನನ್ನಾ ಹಿಡಿಯಬಲ್ಲೆಯಾನಾ ಹಾರೆದಂತೆ ದೂರ ನೀನು ಹಾರಬಲ್ಲೆಯಾ...ಝೂಟ್... ನನ್ನಾ ರೀತಿ ರೆಂಬೆ ಹತ್ತಿ ನೀನು ನೋಡುವಾನನ್ನಾ ಸಾಟಿ ಕುಂಟೊಬಿಲ್ಲೇ ಆಡು ನೋಡುವಾಸುತ್ತಿ ಸುತ್ತಿ ಲಾಗಾ ಹಾಕು ಅಮ್ಮಯ್ಯಾಈ ಕೋತಿಯಾಟ ದೊಂಬರಾಟ ಬೇಡ ದಮ್ಮಯ್ಯಾ...ಝೂಟ್......

Sunday, August 30, 2009

ಗಣಪನ ಹಬ್ಬ!!!

ನಾವು ಗಣೇಶ ಹಬ್ಬಕೆಂದು ಮಣ್ಣಿನ ವಿಗ್ರಹ ಮಾಡುವಾಗ ಪುಟ್ಟಿ ತಾನೂ ಜೊತೆಯಲ್ಲಿ ಕುಳಿತು ಮಣ್ಣಿನಲ್ಲಿ ’ತಪಾತಿ(ಚಪಾತಿ)’ ಇತ್ಯಾದಿಗಳನ್ನು ಮಾಡಿದ್ಲು. ಕೊನೆಗೆ ಅಮ್ಮ ಮಾಡಿದ ವಿಗ್ರಹ ನೋಡಿ ಮೊದಲು ’ಆನಿ ಆನಿ’ ಅಂದಳಾದರೂ ನಂತರ "ಓಂ" ಅಂತ ಕೈ ಮುಗಿದಳು, ಸದ್ಯ ಅದು ಅವಳ ಕಣ್ಣಿಗೂ ಗಣಪನಂತೆ ಕಾಣಿಸಿತಲ್ಲ ಅಂದುಕೊಂಡ್ವಿ! ನಾವು ಇದಕ್ಕೆ ಮೊದಲು ಮಾಡಿದ ವಿಗ್ರಹಗಳ ಫೋಟೋ ಇಲ್ಲಿವೆ.ಹಬ್ಬದ ದಿನವಂತೂ ದಿನವಿಡೀ ಸಂಭ್ರಮದಿಂದ ಓಡಾಡುತ್ತಿದ್ದು, ಮದ್ಯಾಹ್ನ ನಿದ್ದೆಯನ್ನೂ ಸರಿಯಾಗಿ...