Wednesday, December 29, 2010

ಪುಟ್ಟಿಗೆ ಇವತ್ತಿಗೆ ಮೂರು ವರ್ಷ!!

ಸ ಮಯ ಎಷ್ಟು ಬೇಗ ಕಳೆದು ಹೋಗುತ್ತದಲ್ಲ? ಮೂರು ವರ್ಷ ನೋಡುತ್ತ ನೋಡುತ್ತ ಕಳೆದು ಹೋಗಿದೆ. ಪುಟ್ಟಿಗೆ ಇವತ್ತಿಗೆ ಮೂರು ವರ್ಷ!!! ನನ್ನನ್ನು ಬ್ಲಾಗ್ ಬರೆಯುವಂತೆ ಮಾಡಿ, ದಿನಕ್ಕೊಂದು ಹೊಸ ಆಟ ಕಲಿತು ಬ್ಲಾಗಿನಲ್ಲಿ ಬರೆಯಲು ಹೊಸ ವಿಚಾರ ಕೊಡುತ್ತಿರುವವಳು ಇವಳು.  ಅವಳೆಷ್ಟೇ ದೊಡ್ಡವಳಾದರೂ ಇಂದಿನ ಮುಗ್ಧತೆ ಹೀಗೆ ಇರಲಿ ಮತ್ತು ಸದಾ ಸಂತಸದಿ ಬಾಳಲಿ ಎಂಬುದೇ ಜನುಮದಿನದಂದು ನನ್ನ ಹಾರೈಕೆ. ಅಂದ ಹಾಗೆ, ‘ಪ್ರೇಮದ ಕಾಣಿಕೆ’ ಚಿತ್ರದಲ್ಲಿರುವ...

Wednesday, December 22, 2010

ಬ್ಯಾ ಬ್ಯಾ ಕುರಿ ಮರಿ..

ಇದು ಪುಟ್ಟಿ ಮಾಡಿರೋ ಕುರಿಮರಿ. ಇದನ್ನ ನೋಡ್ತಾ ಪುಟ್ಟಿ ’baa baa white sheep' ಅಂತ ಹಾಡನ್ನ ಮಾರ್ಪಡಿಸಿ ಹಾಡ್ತಾಳೆ!! ಈ ಆಂಗ್ಳ ಶಿಶುಗೀತೆಯ ಕನ್ನಡ ಅನುವಾದ ಹೀಗಿದೆ.. ಬ್ಯಾ ಬ್ಯಾ ಕುರಿ ಮರಿ ನಿನ್ ತವ ವುಲ್ ಐತ? ಇದೆ ಸಾರ್ ಇದೆ ಸಾರ್ ಮೂರ್ ಚೀಲದ್ ತುಂಬ ಒಂದ್ ನಮ್ ದಣಿಗೋಳ್ಗೆ ಒಂದ್ ಅವ್ರ್ ಎಂಡ್ರುಗೆ ಮತ್ತೊಂದ್ ಈ ರಸ್ತೆ ಮೂಲೇಲಿರೊ ಚಿಕ್ಕ್ ಮಗೀಗೆ -ಸುಚಿನ್ ಬಾ ಬಾರೋ ಕರಿ ಕುರಿ ಉಣ್ಣೆ ಇದೆಯಾ ಕುರಿ ಮರಿ ಇದೆ ಗುರು...

Sunday, December 19, 2010

ಅಮ್ಮ ಮುದ್ದು ಅಮ್ಮ

ಅಮ್ಮ ಮುದ್ದು ಅಮ್ಮ ಅಮ್ಮ ಮುದ್ದು ಅಮ್ಮ ಎಂತ ಸಿಹಿ ನಿನ್ನ ಮುತ್ತು ಅಮ್ಮ ನನ್ನ ಜೊತೆ ಆಡು ಬಾರೆ ಅಮ್ಮ ಪಾಪ ಮುದ್ದು ಪಾಪ ಪಾಪ ಮುದ್ದು ಪಾಪ ದಂತದ ಗೊಂಬೆ ನೀನು ಪಾಪ ದೈವ ತಂದ ಕೊಡುಗೆ ನೀನು ಪಾಪ ಅಮ್ಮ ಎತ್ತಿಕೋ ಒಮ್ಮೆ ಅಪ್ಪಿಕೋ ಅಮ್ಮ ಎತ್ತಿಕೋ ಒಮ್ಮೆ ಅಪ್ಪಿಕೋ ತೂಗಿಸು ತೂಗಿ ನಲಿಯಿಸು ನಗುವಲಿ ಮೈಮನ ಮರೆಯಿಸು ನಿನ್ನ ಪ್ರೀತಿ ಅಲೆಯಲಿ ಎನ್ನ ತೇಲಿಸು ಹೊತ್ತವಳಲ್ಲ ಹೆತ್ತವಳಲ್ಲ ತಾಯಿತನವ ನಾ ಕಂಡವಳಲ್ಲ ಬಂದೇ ನೀನು ಬಂದೆ ತಾಯಿಯ ... ತಂದೆ ಬಾಳಲಿಂದು ಬೆಳಕು ಚೆಲ್ಲಿ ನಿಂದೆ ಪಾಪ ಮುದ್ದು ಪಾಪ ಪಾಪ ಮುದ್ದು ಪಾಪ ದಂತದ ಗೊಂಬೆ ನೀನು ಪಾಪ ದೈವ ತಂದ ಕೊಡುಗೆ ನೀನು ಪಾಪ ತಬ್ಬಲಿ ಅಲ್ಲ ನಾ ತಾಯಿಯಾ ಪಡೆದೆ ನಾ ತಬ್ಬಲಿ ಅಲ್ಲ ನಾ ತಾಯಿಯಾ ಪಡೆದೆ ನಾ ಮರೆಯೆನಾ...

Tuesday, December 14, 2010

ಮುದ್ದೆ ಮಾಡೋದು ಹೀಗೆ ...

ನನಗೆ ಮುದ್ದೆ ಮಾಡೋಕೆ ಬರೋಲ್ಲ. ಅದು ಅಷ್ಟಾಗಿ ಇಷ್ಟನೂ ಇಲ್ಲ. ರಾಗಿ ರೊಟ್ಟಿ ಇಷ್ಟ ಅದನ್ನ ತಪ್ಪದೇ ವಾರಕ್ಕೆ ಒಂದೆರೆಡು ಸರ್ತಿ ಮಾಡ್ತೀನಿ. ಪುಟ್ಟಿಗೂ ಬಲು ಇಷ್ಟ. ಪುಟ್ಟಿ ಅಜ್ಜ್ಜಿಇಲ್ಲಿ ಇದ್ದಾಗ ಅವರು ಆಗಾಗ್ಗೆ ಮುದ್ದೆ ಮಾಡುತ್ತಿದ್ದರು. ಆಗೆಲ್ಲಾ ಪುಟ್ಟಿ ಅವರ ಪಕ್ಕದಲ್ಲೇ ಕುಳಿತಿದ್ದು, ಅವರು ಮುದ್ದೆ ತಿರುವುದನ್ನೇ ನೋಡುತ್ತಾ ಕೊನೆಯಲ್ಲಿ ತಾನೂ ಒಂದೆರೆಡು ತುತ್ತು ಬಿಸಿ ಬಿಸಿ ಮುದ್ದೆ ತುಪ್ಪದಲ್ಲಿ ಹಾಕಿ ಗುಳುಮ್ ಮಾಡುತ್ತಿದ್ದಳು.  ಈಗ ಮುದ್ದೆ ಮಾಡುವ ಕೋಲಿಗೆ ಕೆಲಸವಿಲ್ಲ. ಆಗಾಗ್ಗೆ ಕಣ್ಣಿಗೆ ಕಾಣಿಸಿದಾಗ ಅದನ್ನ ಹಿಡಿದು ಪುಟ್ಟಿ ಮುದ್ದೆ ಮಾಡೋದು ಹೀಗೆ...  ...

Thursday, December 09, 2010

ಪುಟ್ಟ ಪುಟ್ಟ ಕಣ್ಣುಗಳನುಬೊಚ್ಚು ಬಾಯಿಯನ್ನು ಬಿಟ್ಟುಬೆರಳ ಚೀಪಿ ಮನವ ತಣಿಸುವವನು ಯಾರು?ಚುಳ್ ಎಂದು ಉಚ್ಚೆ ಹುಯ್ದುಹಾಸಿಗೆಯನು ಒದ್ದೆ ಮಾಡಿಆ ಇ ಊ ಎಂದರಚುವನಿವನು ಯಾರು?ಉರುಟು ಮುಖವ ದೊಡ್ಡ ಕಿವಿಯಉದ್ದುದ್ದದ ಬೆರಳ ಹೊಂದಿದಟ್ಟ ಕೂದಲುಗಳನು ಹೊಂದಿದವನು ಯಾರು?ಇರಲಿ ನೀ ಚಿರಾಯುವಾಗುನೆಮ್ಮದಿ ಆನಂದ ಹೊಂದಿನಿನಗೆ ಇರಲಿ ಲಕ್ಷ್ಮಿ ದಯೆಯುಈಶಪುತ್ರನೇ ಗಿರೀಶಪುತ್ರನೇ!ಮಂಜುಪುತ್ರನೇ!ಸಾಫ಼್ಟ್ ವೇರ್ ಅಪ್ಪ ತಾನುಅಮ್ಮನೊ ತಾ ವೈದ್ಯೆಯಾಗಿಪಡೆದನೀನು ಧನ್ಯನೇ ಅನಾಮಧೇಯನೇ!(ಕೌಶಿಕ ಮರಾಠೆ ಯನಾಮಕರಣದದಿನಕ್ಕೆರಚಿಸಿದ ಕಂದ ಪದ್ಯ.)ಪೋಸ್ಟ್ ಮಾಡಿದವರು mukundachiplunkarhttp://chipmukunda.blogspot.com/2010/10/blog-post_04.h...

Wednesday, November 17, 2010

ಅಪ್ಪ ಅಪ್ಪ ನನ್ನಪ್ಪ ಮುದ್ದು ಮಾಡುವ ನನ್ನಪ್ಪ ವಿದ್ಯೆಯ ಕಲಿಸುವ ನನ್ನಪ್ಪ ಬುದ್ದಿಯ ಹೇಳುವ ನನ್ನಪ್ಪ ಜೀವನ ಸ್ಫೂರ್ತಿ ನನ್ನಪ್ಪ ಭಾವ ಜೀವಿ ನನ್ನಪ್ಪ --ಸುಬ್ರಹ್ಮಣ್ಯ ...

Friday, November 12, 2010

ಪುಟ್ಟಿಯ ಮೊದಲ ಸ್ಟೇಜ್ ಶೋ !!

ಪುಟ್ಟಿಗೆ ಡ್ಯಾನ್ಸ್ ಬಹಳ ಇಷ್ಟ! ಯಾವ ಮಗುವಿಗೆ ಇಷ್ಟವಿಲ್ಲ ಅಲ್ವಾ :) ನಮ್ಮೂರಿನ ಭಾರತೀಯ ಅಸೋಸಿಯೇಷನ್ ಅವರ ವಾರ್ಷಿಕೋತ್ಸವ 'Glimpses of India' ಕಾರ್ಯಕ್ರಮದಲ್ಲಿ ಈ ಸರ್ತಿ ಪುಟ್ಟಿ ಮತ್ತವಳ ಸ್ನೇಹಿತರದ್ದೂ ಒಂದು ಡ್ಯಾನ್ಸ್ ಇತ್ತು. ಪ್ರಾಕ್ಟೀಸ್ ಮಾಡುವಾಗಲಿಂದನೂ ಬಹಳ ಉತ್ಸಾಹದಿಂದಲೇ ಅದರಲ್ಲಿ ಭಾಗವಹಿಸಿದಳು. ಇದು ಅವಳ ಮೊದಲ ’ಸ್ಟೇಜ್ ಶೋ’ !! ಹಿಂದಿ ಚಲನಚಿತ್ರ ’ಹೋಮ್ ಡೆಲಿವೆರಿ’ ಯಲ್ಲಿರುವ ’ಹ್ಯಾಪಿ ದಿವಾಲಿ’ ಅನ್ನೋ ಹಾಡಿಗೆ :) ದೀಪಾವಳಿ ಹಬ್ಬವೂ ಅದೇ ಸಮಯದಲ್ಲಿ ಬಂದಿದ್ದರಿಂದ ಇದು ಎಲ್ಲರಿಗೂ ಮೆಚ್ಚುಗೆ ಆಯಿತು.ವಿಡಿಯೋ ರೆಕಾರ್ಡ್ ಮಾಡಿ ಕೊಟ್ಟ ಶಿಶಿರ್ ಅಪ್ಪ ಮತ್ತು ಅರ್ಜುನ್ ಅಂಕಲ್ ಗೆ ತುಂಬಾ ತುಂಬಾ ಥ್ಯಾಂಕ್ಸ್...

Wednesday, November 10, 2010

ದೀಪಾವಳಿ ಪುಸ್ತಕ !!

ಇತ್ತೀಚೆಗೆ ನಾವು ಲೈಬ್ರರಿಗೆ ಹೋದಾಗಲೆಲ್ಲ ಪುಟ್ಟಿ ತನಗೆ ಬೇಕಾದ ಪುಸ್ತಕಗಳನ್ನು ಆರಿಸಿ ತರ್ತಾಳೆ. ನಾನು ಮೊದಲೇ ಲೈಬ್ರರಿಯ ವೆಬ್ಸೈಟಿನಲ್ಲಿ ಹುಡುಕಿ ಬೇಕಾದ ಪುಸ್ತಕವನ್ನು ಕಾದಿರಿಸಿಕೊಳ್ಳುವೆ.  ಪುಟ್ಟಿಗೆ ಅವರ ಸ್ಕೂಲಿನಲ್ಲಿ ವಾರಕ್ಕೊಂದು ’ಥೀಮ್’ ಇರುತ್ತೆ. ನಾನು ಅವಳಿಗೆ ಆ ಥೀಮಿನ ಅನುಗುಣವಾಗಿ ಪುಸ್ತಕಗಳನ್ನು ತರ್ತೀನಿ. ಮೊನ್ನೆ ಹ್ಯಾಲೋವೀನ್ ಟೈಮಿನಲ್ಲಿ ಓದಿದ್ದೆಲ್ಲಾ ಅದೇ ಪುಸ್ತಕಗಳೇ!ಸರಿ ದೀಪಾವಳಿ ಬಂತಲ್ಲ ಅದರ ಬಗ್ಗೆ ಪುಸ್ತಕಗಳೇನಾದ್ರು ಇದೆಯಾ...

Thursday, November 04, 2010

ದೀಪಾವಳಿಯ ಶುಭಾಶಯಗಳು!!

ದೀಪವಿರಲಿ ಮನದಲಿ,ಬೆಳಗಲಿ ಕನಸುಗಳಾಕರಗಿಸಲಿ ಕತ್ತಲೆಯಾ!  ನಿಮಗೆಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳ...

ಪೇಪರ್ ಲ್ಯಾಂಟರ್ನ್...

ದೀಪಾವಳಿಗೆ ಆಕಾಶಬುಟ್ಟಿ ಮಾಡಿ ಅದರೊಳಗೊಂದು ಸಣ್ಣ ದೀಪವನ್ನು ಹಚ್ಚಿ ಮನೆಯ ಮುಂದೆ ನೇತು ಹಾಕುವುದನ್ನು ಅಮ್ಮ ಹೇಳಿದ್ದನ್ನು ಕೇಳಿದ್ದೆ. ಬೆಂಗಳೂರಿನಲ್ಲಿ ಕೆಲವರು ಮನೆಯ ಮುಂದೆ ಹಾಕಿದ್ದ ಅಂಗಡಿಯಲ್ಲಿ ಸಿಗುವ ’ಬಟ್ಟೆಯ ಆಕಾಶಬುಟ್ಟಿ’ ಯನ್ನು ನೋಡೂ ಇದ್ದೆ. ಅದು ಮತ್ತೆ ಇನ್ನೂ ಕೆಲವು ದೀಪಾವಳಿಯ ಆಚರಣೆ  ನಶಿಸುತ್ತಿರುವ ಬಗ್ಗೆ ಒಂದು ಲೇಖನ ಇಲ್ಲಿ.ಮೊನ್ನೆ ನಡೆದ ’Asian festival' ನಲ್ಲಿ ಥೈಲಾಂಡಿನವರ ಬೂತಿನಲ್ಲಿ ಮಕ್ಕಳಿಗೆ ಮಾಡಿಸುತ್ತಿದ್ದ ಪೇಪರ್ ಲ್ಯಾಂಟರ್ನ್...

Wednesday, November 03, 2010

ಪೇಪರ್ ದೀಪಗಳ ಹಾರ...

ಪುಟ್ಟಿ ಪೈಂಟ್ ಮಾಡಿರೋ ಕೆಲವು ಹಾಳೆಗಳನ್ನು ಅರ್ಧ ಸರ್ಕಲ್ ಆಗಿ ಕತ್ತರಿಸಿದೆ. ಒಂದು ಹಾ;ಎ ಪೂರ್ತಿ ಹಳದಿ ಬಣ್ಣ ಪೈಂಟ್ ಮಾಡಿಸಿ, ಅದನ್ನು 'tear shape'ನಲ್ಲಿ ಕಟ್ ಮಾಡಿ, ಮದ್ಯ ಸ್ವಲ್ಪ ಕೆಂಪು ಹಾಕಿ ದೀಪಗಳನ್ನು ಮಾಡಿದೆವು. ಅವುಗಳನ್ನು ಹಬ್ಬದ ದಿನ ಡೈನಿಂಗ್ ಟೇಬಲ್ ನಲ್ಲಿ ಹೀಗೆ ಜೋಡಿಸಿಡುವ ಇರಾದೆ ನನಗಿತ್ತು. ಅಥವಾ ಬಾಗಿಲಿಗೆ ತೋರಣದ ತರಹ ಈ ದೀಪಗಳ ಹಾರ ಹಾಕಬಹುದಿತ್ತು! ಆದ್ರೆ, ಪುಟ್ಟಿಯ ಐಡಿಯಾ ಬೇರೆಯಗಿತ್ತು. ಮೊನ್ನೆ ಹ್ಯಾಲೋವೀನ್ ಗೆಂದು ಮಾಡಿದ್ದ...

Monday, October 25, 2010

ಮಲ್ಟಿ ಕಲ್ಚರ್ ಡೇ!!

ಪುಟ್ಟಿ ಶಾಲೆಯಲ್ಲಿ ನಿನ್ನೆ ಭಾನುವಾರ ’ಮಲ್ಟಿ ಕಲ್ಚರ್ ಡೇ’ ಆಚರಿಸಿದರು. ಎಲ್ಲರೂ ಅವರವರ ದೇಶದ ಉಡುಗೆ ತೊಟ್ಟು ಹೋಗಬೇಕಿತ್ತು. ಪುಟ್ಟಿ ಎಂದಿನಂತೆ ಉತ್ಸಾಹದಿಂದ ಸಿಂಗರಿಸಿಕೊಂಡು ಹೊರಟಳು. ಅಲ್ಲಿ ಎಲ್ಲಾ ಮಕ್ಕಳಿಂದ ಒಂದು ಸಣ್ಣ ಕಾರ್ಯಕ್ರಮವೂ ಇತ್ತು. ಅದರ ವಿಡಿಯೋ ತುಣುಕು.....ನಮ್ಮ ತ್ರಿರಂಗ..ನೆಚ್ಚಿನ ಐರೀನ್ ಜೊತೆಯಲ್ಲಿ...ಇದಾದ ನಂತರ ಎಲ್ಲರ ಜೊತೆಗೂಡಿ ಊಟ ಮಾಡುವ ಕಾರ್ಯಕ್ರಮ. ಎಲ್ಲರೂ ಅವರವರ ದೇಶದ ಒಂದು ಅಡಿಗೆಯನ್ನು ತಂದಿದ್ದರು. ಇದೊಂದು ತರಹ ವಿಶೇಷ...

Thursday, October 14, 2010

ಸಂಪಿಗೆ ಮರದ ಹಸಿರೆಲೆ ನಡುವೆ ..

ಚಲನಚಿತ್ರ: ಉಪಾಸನೆ (1974)ಸಾಹಿತ್ಯ : ಆರ್.ಎನ್. ಜಯಗೋಪಾಲ್ಸಂಗೀತ : ವಿಜಯಭಾಸ್ಕರ್ಗಾಯನ : ಬಿ.ಕೆ. ಸುಮಿತ್ರಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತುಚಿಕ್ಕವ್ವ....ಚಿಕ್ಕವ್ವ.....ಎನ್ನುತ ತನ್ನಾ ಗೆಳೆಯರ ಕರೆದಿತ್ತುಅದ ಕೇಳಿ ನಾ ಮೈ ಮರೆತೆ ಸ್ವರವೊಂದು ಆಗಲೆ ಕಲಿತೆಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆದೂರದ ಗುಡಿಯಲಿ ಪೂಜೆಯ ವೇಳೆಗೆ ಘಂಟೆಯು ಮೊಳಗಿತ್ತುಟಣ್ ಡಣ್ ಟಣ್ ಡಣ್......ಎನ್ನುತ ಸೇವೆಗೆ ಎಲ್ಲರ ಕರೆದಿತ್ತುಅದಕೇಳಿ ನಾ ಮೈಮರೆತೆ ಸ್ವರವೊಂದು ಆಗಲೆ ಕಲಿತೆಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆಹರಿಯುವ ನದಿಯಾ ನೋಡುತ ನಿಂತೆ ಅಲೆಗಳು ಕುಣಿದಿತ್ತುಕಲ ಕಲ ಕಲ ಕಲ......ಮಂಜುಳ ನಾದವು ಕಿವಿಗಳ ತುಂಬಿತ್ತುಅದಕೇಳಿ ನಾ ಮೈ ಮರೆತೆ ಸ್ವರವೊಂದು...

Wednesday, October 13, 2010

ಕನ್ನಡ ಕಲಿ ಕಂದ...

ಕನ್ನಡವಿಲ್ಲದ ಈ ಹೊರದೇಶದಲ್ಲಿ ಪುಟ್ಟಿಗೆ ಕನ್ನಡ ಕಲಿಸುವುದು ಒಂದು ಸಾಹಸವೇ ಅನ್ನೋದು ಮೊದಲಿಂದಾ ಗೊತ್ತಿದ್ದೆ ಆದರೂ ಇತ್ತೀಚೆಗೆ ಅದರ ಅರಿವಾಗುತ್ತಿದೆ. ಇಲ್ಲಿಯವರೆಗೆ ಮನೆಯಲ್ಲಿಯೇ ಇದ್ದ ಪುಟ್ಟಿ ಈಗ ವಾರಕ್ಕೆರಡು ಅರ್ಧ ದಿನ ಶಾಲೆಗೆ ಹೋಗಲು ಆರಂಭಿಸಿದ ಮೇಲೆ ಬಹಳ ಬೇಗ ’english' ಮಾತಾಡಲು ಶುರು ಮಾಡಿದ್ದಾಳೆ. ಎಷ್ಟೇ ನೆನಪು ಮಾಡಿದ್ರೂ ಅವಳು ಮೊದಲು ಮಾತಾಡೋದು ಇಂಗ್ಳೀಷಿನಲ್ಲೇ. ಅವಳ ವಯಸ್ಸಿನ ಮಕ್ಕಳೇ ನಮ್ಮ ಕನ್ನಡ ಮಾತಾಡುವ ಹಾಗೆ ಆದ್ರೆ ಅವಳಿಗೂ ಮಾತಾಡಲು...

Monday, October 04, 2010

ಗಣಪನ ಹಬ್ಬ 2010 !!

                                                                    ಬೆನಕ ಬೆನಕ ಏಕದಂತಪಚ್ಚೆ ಕಲ್ಲು ಪಾಣಿ ಮೆಟ್ಲುಮುತ್ತಿನುಂಡೆ ಹೊನ್ನಗಂಟೆಒಪ್ಪುವ ಶ್ರೀ ವಿಘ್ನೇಶ್ವರನಿಗೆ21 ನಮಸ್ಕಾರಗಳು !ಈ ನಮ್ಮ ಗಣಪನ ಮೆಚ್ಚಿ ಶೃತಿಯವರು ತಮ್ಮ...

Sunday, October 03, 2010

ತೆಂಗಿನಕಾಯಿ ಚಿಪ್ಪು ಪೈಂಟಿಂಗ್

ಗಣಪನ ಹಬ್ಬಕ್ಕೆ ತಂದಿದ್ದ ತೆಂಗಿನಕಾಯಿ, ಗಣಪತಿಗೆ ಅರ್ಪಿಸಿ ಹಬ್ಬ ಮಾಡಿದಾಯ್ತು. ಅದರ ಚಿಪ್ಪನ್ನು ಎಸೆಯುವ ಬದಲು ಪುಟ್ಟಿ ಕೈಯಲ್ಲಿ ಏನಾದ್ರೂ ಮಾಡಿಸೋಣ ಅಂತ ಇಟ್ಟಿದ್ದೆ. ಪುಟ್ಟಿಗೆ ಪೈಂಟ್ ಮಾಡೋಣವಾ ಅಂದಿದ್ದೆ ತಡ ಹೂಂ ಅಂತ ಕುಣಿದಾಡಿದ್ಲು. ಮೊದಲು ಚಿಪ್ಪಿಗೆ ಅವಳು ಕೇಳಿದ ಹಳದಿ ಬಣ್ಣ ಹಚ್ಚಿದಳು. ಎಷ್ಟೇ ನಾರು ತೆಗೆದರೂ ಅದರ ಮೇಲೆ ಬಣ್ಣ ಹಚ್ಚುವುದು ಪುಟ್ಟಿಗೆ ಸ್ವಲ್ಪ ಕಷ್ಟವೇ ಆಯ್ತು, ಅಮ್ಮ ಇದು ಕಟ್ಟಿ ಅನ್ನುತ್ತಲೇ ಮಾಡಿದ್ಲು. ಕೊನೆಗೆ ಅಲ್ಲಲ್ಲಿ ಉಳಿದ ಗ್ಯಾಪ್...

Monday, September 27, 2010

ಕಣ್ಣಾ ಮುಚ್ಚೆ ಕಾಡೆ ಗೂಡೆ...

ಕಣ್ಣಾ ಮುಚ್ಚೆ ಕಾಡೆ ಗೂಡೆಉದ್ದಿನ ಮೂಟೆ ಉರುಳಿ ಹೋಯ್ತುನಿಮ್ಮಯ ಹಕ್ಕಿ ಬಚ್ಚಿಟ್ಟ್ ಕೊಳ್ಳಿನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೇ!ಈ ಹಾಡಿನ ಬಗ್ಗೆ ಹಿಂದೆ ನನ್ನ ಬ್ಲಾಗಿನಲ್ಲಿ ಬರೆದಿದ್ದೆ...

Saturday, September 18, 2010

ABC ಆಟ!!

A for Apple, B for Ball ಕಲಿಯಲು ಪುಟ್ಟಿ ಜೊತೆ ಮನೆಯಲ್ಲಿ ನಾವು ಆಡೋ ಕೆಲವು ಆಟಗಳಿವು...... ಆಟ ಒಂದು: ಅಕ್ಷರಗಳ ಕಾರ್ಡ್ಸ್ ಪುಟ್ಟಿಗೆ ಕೊಡೋದು... ಪುಟ್ಟಿಯ ಆಟದ ವಸ್ತುಗಳು ಜೊತೆಗೆ ಮನೆಯಲ್ಲಿರುವ ಯಾವುದೇ ಪುಟ್ಟ ದೊಡ್ಡ ಸಾಮಾನುಗಳನ್ನು ಒಂದೆಡೆ ಕಲೆ ಹಾಕೋದು. ಆಮೇಲೆ ಒಂದೊಂದಾಗಿ ಅವುಗಳ ಹೆಸರನ್ನು ಹೇಳೋದು. ಪುಟ್ಟಿ ball ಅಂದ್ರೆ ನಾವು ಕರೆಕ್ಟ್ ಪುಟ್ಟಿ bbbbbball ಅನ್ನೋದು ಜೊತೆಗೆ ಅದು ಶುರುವಾಗುವ ಅಕ್ಷರವನ್ನ ಗುರುತಿಸೊಕೆ ಪ್ರಯತ್ನಿಸೋದು....

Friday, September 17, 2010

ಕೈ-ಕಾಲು ಪೈಂಟ್

ಇವತ್ತು ಏನ್ ಪೈಂಟ್ ಮಾಡೋಣ ಪುಟ್ಟಿ? ಅಂತ ಕೇಳಿದ್ರೆ "ಕೈ ಮಾಡೋಣ ಅಮ್ಮ" ಅಂದ್ಲು. ಹಾಗಂದ್ರೇನು ಅಂತ ಗೊತ್ತಾಗದೆ ಅದು ಹೆಂಗೆ ಮಾಡೋದು ಅಂದೆ? "ಅಕ್ಕ ಕೈ ಮಾಡಿ ಸ್ಪೈಡರ್ ಮಾಡ್ತಾರಲ್ಲ ಹಾಗೆ" ಅಂದ್ಲು ಅವಳು ನೋಡುವ ಬಾರ್ನಿ ಕಾರ್ಟೂನ್ ನೆನದು. ಆಗ ಅರ್ಥವಾಯ್ತು ಅವಳು ಹೇಳಿದ್ದು ಕೈ ಟ್ರೇಸ್ ಮಾಡೋಣ ಅಂತ. ಸರಿ, ಅವಳ ಎರಡೂ ಕೈಗಳನ್ನ ಪೇಪರ್ ಮೇಲಿಟ್ಟು ಸುತ್ತ ಪೆನಿನಲ್ಲಿ ಬರೆದೆ, ಪೆನ್ ಕೈಗೆ ತಾಗಿದಾಗಲೆಲ್ಲ ಕಚಗುಳಿ ಕೊಟ್ಟಂತಾಗಿ ನಗುತ್ತಿದ್ದಳು. ಬಳೆಗಳನ್ನೂ ಮಾಡುವಂತೆ...

Wednesday, September 15, 2010

Hand Ankle..

ಪುಟ್ಟಿ ಸ್ಕೂಲಿಗೆ ಹೋಗೊಕೆ ಶುರು ಮಾಡಿದಾಗಿನಿಂದ ಮನೆಯಲ್ಲೂ ಆಗಾಗ್ಗೆ ಸ್ವಲ್ಪ ಇಂಗ್ಲೀಷ್ ಮಾತಾಡೋಕೆ ಶುರು ಮಾಡಿದ್ದಾಳೆ, ಆಗೆಲ್ಲಾ ನಾವು"ಹಾಗಂದ್ರೇನು?" ಅಥವಾ "ಕನ್ನಡದಲ್ಲಿ ಅದನ್ನ ಹೇಗೆ ಹೇಳೋದು" ಅಂತ ಅವಳನ್ನು ಮತ್ತೆ ನಮ್ಮ್ ಕನ್ನಡ ಮಾತಾಡೋಕೆ ನೆನಪಿಸುತ್ತೀವಿ. ಇತ್ತೀಚೆಗೆ ಅವಳಿಗೆ ಸಣ್ಣದೊಂದು ಏನೆ ತಗುಲಿದರೂ ಬಂದು "ಉಫ್" ಮಾಡಿಸಿಕೊಳ್ಳೊ ಆಟ ಶುರುವಾಗಿದೆ. ಇವತ್ತು ಆಟವಾಡುತ್ತಿದ್ದವಳು ಅಡುಗೆ ಮನೆಗೆ ನನ್ನ್ ಹತ್ರ ಓಡಿ ಬಂದು "ಅಮ್ಮ, My Hand Ankle hurt ಆಯ್ತು, ಉಫ್ ಮಾಡು" ಅಂದ್ಲು. "Hand Ankle" ಹಾಗಂದ್ರೇನು ಪುಟ್ಟಿ ನಂಗೆ ಅರ್ಥ ಆಗ್ಲಿಲ್ಲಾ ಅಂದೆ. ಅದಕ್ಕವಳು ತನ್ನ ಬಲಗೈ ಮಣಿಗಂಟನ್ನ ತೋರ್ಸಿ ಇಲ್ಲಿ ಉಫ್ ಮಾಡು ಅಂದ್ಲು. ನಾನು " ಪುಟ್ಟಿ ಇದು ’wrist'...

Thursday, September 02, 2010

ಪುಟ್ಟಿ ಆರ್ಟ್ ಗೋಡೆ ಮೇಲೆ

ಇತ್ತೀಚೆಗೆ ನಾನು ನೋಡಿದ ಹಲವಾರು kids art ಬ್ಲಾಗ್ ಗಳಲ್ಲಿ "ದ ಆರ್ಟ್ ಫುಲ್ ಪೇರಂಟ್" ಬಹಳ ಇಷ್ಟವಾಯ್ತು. ಅವರು ತಮ್ಮ ಮಗಳ ಬಹುತೇಕ ಎಲ್ಲಾ ಪೇಂಟಿಂಗ್ಸ್ ಗಳನ್ನು ಉಳಿಸಿಕೊಂಡಿದ್ದಾರೆ. ಅಲ್ಲದೆ ಕೆಲವನ್ನು ಫ್ರೇಮ್ ಕೂಡ ಮಾಡಿರಿವುದನ್ನು ಕಂಡು ಆಶ್ಚರ್ಯ ಸಂತಸ ಎರಡೂ ಆಯ್ತು. ಫ್ರೇಮ್ ಹಾಕಿಸಿದ ಪೇಂಟ್ಸ್ ಯಾವುದೋ ಫೇಮ್ಸ್ ಕಲೆಗಾರನ ಮಾಡ್ರನ್ ಆರ್ಟ್ ನಂತಿತ್ತು!! ಪುಟ್ಟಿ ಮಾಡಿದ ಪೈಂಟಿಂಗ್ಸ್ ನಲ್ಲಿ ಚೆಂದ (ನನ್ನ ಕಣ್ಣಿಗೆ ಚೆಂದ) ಅನಿಸಿದ ಕೆಲವನ್ನು ಮಾತ್ರ...

Wednesday, September 01, 2010

ಪುಟ್ಟಿ ಶಾಲೆಗೆ ಹೊರಟಳು

ಪುಟ್ಟಿಯ ಅಜ್ಜಿ ತಾತ ವಾಪಸ್ ಇಂಡಿಯಾಕ್ಕೆ ಹೋದಮೇಲೆ, ಮತ್ತೆ ಪುಟ್ಟಿಯ ಜೊತೆ ಆಟವಾಡುವವರು ಕಮ್ಮಿಯಾದ್ರು. ವಾರಾಂತ್ಯದಲ್ಲಿ ನಡೆಯುವ ಪಾರ್ಟಿಗಳಲ್ಲಿ ೨-೩ ಘಂಟೆಗಳ ಕಾಲ ಬೇರೆ ಮಕ್ಕಳೊಡನೆ ಬೆರೆಯುವುದು ಅಷ್ಟೆ! ಹಾಗಾಗಿ ಪುಟ್ಟಿಯನ್ನ ’Preschool'ಗೆ (ಅಂದ್ರೆ ನಮ್ಮಲ್ಲಿ ನರ್ಸರಿ ಅಂತಾರಲ್ಲ ಹಾಗೆ) ಸೇರಿಸಿದ್ವಿ. ಅಲ್ಲಿ ABCD ಇಲ್ಲ...ಬರಿ ವ್ಯಕ್ತಿತ್ವ ವಿಕಸನ, ಮಕ್ಕಳನ್ನ ಅವರ ಅಭಿರುಚಿಗೆ ಅನುಗುಣವಾಗಿ ಬೆಳೆಸುತ್ತಾರೆ. ಹೊರೆಯಲ್ಲದ ಶಾಲೆ (ನಮ್ಮ ಜೇಬಿಗೆ ಹೊರೆಯೇ.....